ಸಕ್ಕರೆಕಾಯಿಲೆ ಇರೋರು ಬೆಳಗ್ಗೆ ಖಾಲಿ ಹೊಟ್ಟೆಗೆ ಎಲೆಯನ್ನು ತಿಂದ್ರೆ ಒಳ್ಳೆಯದು

0 19

ಸಕ್ಕರೆಖಾಯಿಲೆ ಹೆಚ್ಚಾಗಿ ನಲವತ್ತು ವರ್ಷ ಮೇಲ್ಪಟ್ಟವರಿಗೆ ಕಂಡು ಬರುತ್ತದೆ. ಹಾಗೆಯೇ ಇದು ವಂಶಪಾರಂಪರಿಕವಾಗಿ ಬರುವುದು ಹೆಚ್ಚು. ಸಕ್ಕರೆಖಾಯಿಲೆ ಇರುವವರು ಸಕ್ಕರೆಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ನಾವು ಇಲ್ಲಿ ಸಕ್ಕರೆ ಖಾಯಿಲೆಯ ಬಗ್ಗೆ ಮತ್ತು ಅದರ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಕ್ಕರೆ ಖಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಸಕ್ಕರೆ ಖಾಯಿಲೆ ಹೆಚ್ಚಾದರೆ ಬಿ.ಪಿ. ಹೆಚ್ಚು ಅಥವಾ ಕಡಿಮೆ ಆಗುತ್ತದೆ. ಇದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಆಹಾರ ಪದಾರ್ಥಗಳನ್ನು ತಿನ್ನುವುದರಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಿಹಿಯ ಪದಾರ್ಥಗಳನ್ನು ಕಡಿಮೆ ತಿನ್ನಬೇಕು. ಸಕ್ಕರೆ ತಿನ್ನುವುದನ್ನು ಬಿಡಬೇಕು. ಸಕ್ಕರೆಯ ಬದಲು ಸ್ವಲ್ಪ ಬೆಲ್ಲವನ್ನು ಬಳಸಿದರೂ ತೊಂದರೆಯಿಲ್ಲ.

ಹಾಗೆಯೇ ದಿನನಿತ್ಯ ವ್ಯಾಯಾಮ ಮತ್ತು ಯೋಗಗಳನ್ನು ಮಾಡಬೇಕು. ಇದರಿಂದ ದೇಹದ ತೂಕ ಹತೋಟಿಯಲ್ಲಿ ಇರುತ್ತದೆ. ಇದಕ್ಕೆ ಹಲವಾರು ಮನೆ ಮದ್ದುಗಳು ಇವೆ. ಹಾಗೆಯೇ ಎಳೆಯದಾದ ಮಾವಿನಎಲೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಎರಡು ಚಮಚದಷ್ಟು ಬಳಸಬೇಕು. ಹಾಗೆಯೇ ಬೆಳೆದಿರುವ 10 ಕರಿಬೇವಿನ ಎಲೆಯನ್ನು ದಿನನಿತ್ಯ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ತಿನ್ನಬೇಕು. ಹಾಗೆಯೇ ಇನ್ಸುಲಿನ್ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಲೆಯನ್ನು ಸೇವಿಸಬೇಕು.

ಹಾಗೆಯೇ ಅಮೃತಬಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ 3 ರಿಂದ 4 ಎಲೆಗಳನ್ನು ಸೇವಿಸಬೇಕು. ಮೆಂತ್ಯೆಯನ್ನು ನೆನೆಸಿಕೊಂಡು ಅದು ಮೊಳಕೆ ಬರಬೇಕು. ಅದು ಮೊಳಕೆ ಬಂದ ನಂತರ ಇದನ್ನೂ ಸಹ ಹಸಿದ ಹೊಟ್ಟೆಯಲ್ಲಿ ಸೇವಿಸಬೇಕು. ಹಾಗಲಕಾಯಿ ಇದು ಸಕ್ಕರೆಖಾಯಿಲೆ ಇರುವವರಿಗೆ ಬಹಳ ಒಳ್ಳೆಯದು. ಇದನ್ನು ಜ್ಯೂಸ್ ಮಾಡಿಕೊಂಡು ಕುಡಿಯಬೇಕು. ಇವೆಲ್ಲವುಗಳನ್ನು ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಬಹಳ ಒಳ್ಳೆಯದು. ಇದರಲ್ಲಿ ಒಂದನ್ನಾದರೂ ಮಾಡಿ ಪ್ರಯೋಜನ ಪಡೆದುಕೊಳ್ಳಿ.

Leave A Reply

Your email address will not be published.