ಚಿಕ್ಕ ಮಕ್ಕಳಿಂದ ದೊಡ್ಡರವರೆಗೆ ಕಾಡುವಂತ ಶೀತ ಕೆಮ್ಮು, ಕಫ ನಿವಾರಣೆಗೆ ಬೆಸ್ಟ್ ಮನೆಮದ್ದು ದೊಡ್ಡಪತ್ರೆ

0 135

ನೆಗಡಿ ಎಲ್ಲರಿಗೂ ಆಗುವುದು ಸಹಜ. ಹಾಗೆಯೇ ಚಿಕ್ಕ ಮಕ್ಕಳಿಗೂ ಸಹ ಆಗುತ್ತದೆ. ಆದರೆ ಅವರಿಗೆ ಬೇಗ ಕಡಿಮೆ ಆಗುವುದೇ ಇಲ್ಲ. ನೆಗಡಿಯಿಂದ ಬಹಳ ಕಷ್ಟಪಡುತ್ತಿರುತ್ತಾರೆ. ಏಕೆಂದರೆ ಕಫ ಗಂಟಲಿನಲ್ಲಿ ಕಟ್ಟಿರುತ್ತದೆ. ನಾವು ಇಲ್ಲಿ ಸಣ್ಣ ಮಕ್ಕಳಿಗೆ ಆದ ನೆಗಡಿಯನ್ನು ಕಡಿಮೆ ಮಾಡುವ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನೆಗಡಿ ಆದಾಗ ಚಿಕ್ಕ ಮಕ್ಕಳಿಗೆ ಪದೇ ಪದೇ ಕೆಮ್ಮು ಮತ್ತು ಜ್ವರ ಬರುತ್ತಿರುತ್ತದೆ. ದೊಡ್ಡವರು ನೆಗಡಿ ಆದರೆ ಮಾತ್ರೆಗಳನ್ನು ತಿನ್ನಬಹುದು. ಆದರೆ ಚಿಕ್ಕಮಕ್ಕಳಿಗೆ ಹಾಗೆ ಆಗುವುದಿಲ್ಲ. ಕೆಲವೊಮ್ಮೆ ಎಷ್ಟೇ ಔಷಧಿಗಳನ್ನು ಹಾಕಿದರೂ ಚಿಕ್ಕ ಮಕ್ಕಳಿಗೆ ತಾಗುವುದೇ ಇಲ್ಲ. ಅಂತಹವರು ಈ ಔಷಧಿಯನ್ನು ಮಾಡಬೇಕು. ನೇರವಾಗಿ ಯಾವುದೇ ಔಷಧಿಗಳನ್ನು ಹಾಕದೇ ಮನೆಯ ಔಷಧಿ ಮಾಡಿ ಹಾಕುವ ಇಚ್ಛೆ ಉಳ್ಳವರು ಸಹ ಇದನ್ನು ಹಾಕಬಹುದು. ಇದನ್ನು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಈ ಔಷಧಿಯನ್ನು ಸೇವಿಸಬಹುದು.

ಈ ಔಷಧಿಯನ್ನು ಮಾಡಲು ಆರು ದೊಡ್ಡ ಪತ್ರೆಗಳನ್ನು ತೆಗೆದುಕೊಳ್ಳಬೇಕು. ಈ ಎಲೆಗಳು ಚಿಕ್ಕ ಮಕ್ಕಳ ಕೆಮ್ಮು ಮತ್ತು ಕಫವನ್ನು ಹೋಗಲಾಡಿಸಲು ಸಹಕಾರಿ. ಹಾಗೆಯೇ ದೊಡ್ಡವರಿಗೆ ಹೊಟ್ಟೆಯ ಸುತ್ತ ಮುತ್ತ ಇರುವ ಬೊಜ್ಜನ್ನು ಕರಗಿಸುತ್ತದೆ. ಇದರ ಜೊತೆಗೆ ಒಂದು ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಮೊದಲು ದೊಡ್ಡಪತ್ರೆಯ ಎಲೆಯನ್ನು ಸ್ವಲ್ಪ ಸುಟ್ಟಿಕೊಳ್ಳಬೇಕು. ಹಾಗೆಯೇ ಈರುಳ್ಳಿಯನ್ನು ಸಿಪ್ಪೆ ತೆಗೆಯದೇ ಸುಟ್ಟಿಕೊಳ್ಳಬೇಕು. ನಂತರ ಈರುಳ್ಳಿಯ ಸಿಪ್ಪೆ ತೆಗೆದು ಅದರ ಒಳಗಿನ ಪದರಗಳನ್ನು ತೆಗೆದುಕೊಂಡು ಈರುಳ್ಳಿ ಮತ್ತು ಎಲೆಯನ್ನು ಜಜ್ಜಿಕೊಳ್ಳಬೇಕು.

ಜಜ್ಜಿಕೊಂಡ ನಂತರ ರಸವನ್ನು ತೆಗೆಯಬೇಕು. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಬೇಕು. ಇದರಿಂದ ಮಕ್ಕಳಿಗೆ ಇರುವ ಕೆಮ್ಮು ಮತ್ತು ಕಫ ಎಲ್ಲವೂ ದೂರವಾಗುತ್ತದೆ. ಸಣ್ಣ ಮಕ್ಕಳಿಗೆ ಆದರೆ ಬೆಳಿಗ್ಗೆ ಒಂದು ಚಮಚ ಮತ್ತು ರಾತ್ರಿ ಒಂದು ಚಮಚ ಕೊಡಬೇಕು. ಇದು ಕಹಿಯಾಗಿ ಇರುವುದಿಲ್ಲ. ಸಿಹಿಯಾಗಿ ಇರುವುದರಿಂದ ಮಕ್ಕಳು ಖುಷಿಯಿಂದ ಕುಡಿಯುತ್ತಾರೆ. ನಿಮ್ಮ ಮನೆಯಲ್ಲಿ ಸಹ ಮಕ್ಕಳು ಇದ್ದರೆ ನೆಗಡಿ ಅಥವಾ ಕೆಮ್ಮು ಇದ್ದರೆ ಇದನ್ನು ಮಾಡಿ ಪ್ರಯೋಜನ ಪಡೆದುಕೊಳ್ಳಿ.

Leave A Reply

Your email address will not be published.