ನೀವು ರಾಯಲ್ ಎನ್ ಫೀಲ್ಡ್ ಬೈಕ್ ಪ್ರಿಯರೆ? ಹಾಗಿದ್ರೆ ಈ ಸ್ಟೋರಿ ಓದಲೇ ಬೇಕು

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ರಾಯಲ್ ಎನ್ಫೀಲ್ಡ್ ಬೈಕಿನ ಪರಿಚಯ ಯಾರಿಗೂ ಸಹ ಬೇಕಾಗಿರುವುದಿಲ್ಲ ಯಾಕೆಂದರೆ ಎಲ್ಲರಿಗೂ ಸಹ ಈ ಬೈಕಿನ ಪರಿಚಯ ಇದ್ದೇ ಇರುತ್ತೆ. ರಾಯಲ್ ಎನ್ಫೀಲ್ಡ್ ಹೆಸರಿನ ಹಾಗೆ ಇಬ್ಬರೂ ಸಹ ನೋಡುವುದಕ್ಕೆ ರಿಚ್ ಆಗಿ ಇರುತ್ತೆ. ಬೈಕ್ ಗಳ ರಾಜ ಎಂದು ಎನಿಸಿಕೊಳ್ಳುತ್ತದೆ. 2002ರಲ್ಲಿ ಈ ಕಂಪನಿಯ ಬಯಕೆಗಳನ್ನು ಕೊಂಡುಕೊಳ್ಳುವವರ ಇಲ್ಲದೆ ಕಂಪನಿಯನ್ನು ಮುಚ್ಚಿ ಹಾಕಲಾಗುತ್ತದೆ. ಆದರೆ ಈಗ ಪ್ರಪಂಚದ 50 ರಾಷ್ಟ್ರಗಳಿಗೆ ಈ ಕಂಪನಿಯ ಬೈಕ್ ಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ. ಬುಕ್ ಮಾಡಿದ ಮೂರು ತಿಂಗಳವರೆಗೂ ಬೈಕ್ ಬರುತ್ತೋ ಇಲ್ಲವೋ ಅನ್ನೋ ಗ್ಯಾರಂಟಿ ಇಲ್ಲ ಆದರೆ ಈಗಿನ ಯುವಕರಿಗೆ ಬಂದರೆ ಅತಿ ಹೆಚ್ಚು ಕ್ರೇಜ್. ಈಗಿನ ಕಾಲದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು ಆಗಿರುವಂತಹ ರಾಯಲ್ ಎನ್ಫೀಲ್ಡ್ ಬೈಕಿನ ಬಗ್ಗೆ ಈ ಲೇಖನದ ಮೂಲಕ ಸ್ವಲ್ಪ ತಿಳಿದುಕೊಳ್ಳೋಣ.

ರಾಯಲ್ ಎನ್ಫೀಲ್ಡ್ ಹೆಸರೇ ಹೇಳುವ ಹಾಗೆ ಈ ಬೈಕ್ ಕೂಡ ರಾಯಲ್ ಆಗಿದೆ. ಪ್ರಪಂಚದಲ್ಲಿ ಅತ್ಯಂತ ಹಳೆಯದಾದ ಹಾಗೂ ಈಗಲೂ ಚಾಲ್ತಿಯಲ್ಲಿರುವ ಅಂತಹ ಅತ್ಯಂತ ಹಳೆಯ ಮೋಟರ್ಸೈಕಲ್ ರಾಯಲ್ ಎನ್ಫೀಲ್ಡ್. ಸಾವಿರದ ಒಂಬೈನೂರ ಒಂದರವರೆಗೆ ರಾಯಲ್ ಎನ್ಫೀಲ್ಡ್ ಕಂಪನಿಯು ಇಂಗ್ಲೆಂಡ್ ಎನ್ಫೀಲ್ಡ್ ಎಂಬ ಹೆಸರಿನಿಂದ ಸೈಕಲ್ ಮತ್ತು ಲಾಲ್ ಮೂವರ್ಸನ್ನು ತಯಾರಿಸುತ್ತಿತ್ತು. ನಂತರ ಸಾವಿರದ ಒಂಬೈನೂರ ಒಂದನೇ ವರ್ಷದಲ್ಲಿ ಈ ಕಂಪನಿಯು ಮೊಟ್ಟಮೊದಲ ಬೈಕನ್ನು ತಯಾರಿಸುತ್ತದೆ. ಈ ಕಂಪನಿಯ ಆರಂಭವಾಗಿದ್ದು ಮೊದಲ ಇಂಗ್ಲೆಂಡಿನಲ್ಲಿ. ಮೊದಲ ವಿಶ್ವಯುದ್ಧದಲ್ಲಿ ಸೈನಿಕರು ಬೈಕನ್ನು ತಮ್ಮ ರೈಫಲ್ ಗನ್ನುಗಳನ್ನು ಸುಲಭವಾಗಿ ತೆಗೆದುಕೊಂಡು ಹೋಗುವ ಸಲುವಾಗಿ ತಯಾರಿಸಲಾಗಿತ್ತು. ಎರಡನೇ ಪ್ರಪಂಚ ಯುದ್ಧದಲ್ಲಿ ರಾಯಲ್ ಎನ್ಫೀಲ್ಡ್ ಪ್ಲೇಯಿಂಗ್ ಪ್ಲೇ ಎಂಬ ಹೆಸರಿನಿಂದ ಕಡಿಮೆ ಭಾರ ಇರುವಂತಹ ಮೋಟರ್ ಸೈಕಲ್ ಅನ್ನು ತಯಾರಿಸುತ್ತದೆ. ಯುದ್ಧದ ಸಮಯದಲ್ಲಿ ಪ್ಯಾರಚೂಟ್ ಸಹಾಯದಿಂದ ಭೂಮಿ ಮೇಲೆ ಇಳಿಸಲು ಸಹಾಯವಾಗುವಂತೆ ಈ ಬೈಕ್ ಅನ್ನು ತಯಾರಿಸಲಾಗುತ್ತದೆ. 120cc 60 ಕೆಜಿ ಬೈಕ್. ಸಾವಿರ 953 ರಲ್ಲಿ ಭಾರತೀಯ ಸೈನ್ಯ ಬಾರ್ಡರ್ ನಲ್ಲಿ ಇರುವಂತಹ ಸೈನಿಕರಾಗಿ ಈ ಬೈಕ್ ಅನ್ನು ಖರೀದಿಸಿ ಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಾರೆ. ಇವರಿಗೆ ರಾಯಲ್ ಎನ್ಫೀಲ್ಡ್ ಬೈಕ್ ಗಳನ್ನು ಬಿಟ್ಟು ಬೇರೆ ಯಾವ ಬೈಕುಗಳು ಸರಿ ಎಂದು ಅನಿಸಲಿಲ್ಲ. ಇದೇ ಸಂದರ್ಭದಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯ ಮದ್ರಾಸಿನಲ್ಲಿರುವ ಮದ್ರಾಸ್ ಮೋಟಾರ್ಸೈಕಲ್ ಕ್ಲಬ್ಬ ಕಂಪನಿ ಜೊತೆ ಕೈಜೋಡಿಸಿ 800 350cc ಬುಲೆಟ್ ಮೋಟಾರ್ ಸೈಕಲ್ ಗಳನ್ನು ಭಾರತಕ್ಕೆ ಕಳುಹಿಸಿಕೊಡುತ್ತದೆ. ಆಗಿನಿಂದ ಮದ್ರಾಸ್ ಕಂಪನಿ ಪೆನ್ಸಿಲ್ ಇಂಡಿಯಾ ಎಂಬ ಹೆಸರಿನಿಂದ ರಾಯಲ್ ಎನ್ಫೀಲ್ಡ್ ಬೈಕ್ ಗಳನ್ನು ಮಾರಾಟ ಮಾಡಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ಮದ್ರಾಸ್ ಕಂಪನಿಯಲ್ಲಿ ಕೇವಲ ಬಿಡಿ ಭಾಗಗಳನ್ನು ಮಾತ್ರ ಮಾಡುತ್ತಿದ್ದರು. 1962ರಲ್ಲಿ ಮದ್ರಾಸ್ ಮೋಟರ್ ಸೈಕಲ್ ಕಂಪನಿ ಬಿಡಿಭಾಗಗಳನ್ನು ಸಹ ಭಾರತದಲ್ಲಿಯೇ ತಯಾರಿ ಮಾಡುವ ಲೈಸೆನ್ಸನ್ನು ಪಡೆದುಕೊಳ್ಳುತ್ತದೆ. 1971 ರಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿ ಇಂಗ್ಲೆಂಡ್ನಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ ಅದೇ ಸಮಯದಲ್ಲಿ ಎನ್ಫೀಲ್ಡ್ ಇಂಡಿಯಾವನ್ನು ರಾಯಲ್ ಎನ್ಫೀಲ್ಡ್ ಇಂಡಿಯಾ ಆಗಿ ಬದಲಾಯಿಸಲು ಮದ್ರಾಸ್ ಮೋಟಾರ್ಸೈಕಲ್ ಕಂಪನಿಯ ಪೂರ್ತಿಯಾಗಿ ಅಧಿಕಾರವನ್ನು ಪಡೆದುಕೊಳ್ಳುತ್ತದೆ.

1994 ನೆ ವರ್ಷದಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯು ಈಚರ್ ಇಂಡಿಯಾ ಕಂಪನಿಯ ಜೊತೆಗೆ ಸಂಪೂರ್ಣವಾಗಿ ಬೆರೆಯುತ್ತದೆ. ನನ್ಯರ 1994 ರಿಂದ 2004 ರ ಮಧ್ಯದಲ್ಲಿ ಈ ಕಂಪನಿಯು ಪೂರ್ತಿಯಾಗಿ ನಷ್ಟದ ಪಾಲಾಗುತ್ತದೆ. ಹಾಗಾಗಿ ಜೈಪುರದಲ್ಲಿ ಇರುವ ತಮ್ಮ ಉತ್ಪಾದಕ ಘಟಕವನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. 2005 ರಲ್ಲಿ ರಾಯಲ್ ಎನ್ಫೀಲ್ಡ್ ಗೆ 50 ವರ್ಷ ಆದ ಸಂದರ್ಭದಲ್ಲಿ ಚೈನೈ ನಲ್ಲಿ ಇರುವ ತನ್ನ ಪ್ಲಾಂಟ್ ನಲ್ಲಿ ಹಳೆಯ ಬೈಕ್ ಗಳನ್ನು ಮತ್ತೆ ಹೊಸರೂಪ ನೀಡಿ ಮಾರಾಟ ಮಾಡಲಾಗುತ್ತದೆ. ಅಂದಿನಿಂದ ರಾಯಲ್ ಎನ್ಫೀಲ್ಡ್ ಕಂಪನಿ ಮತ್ತೆ ಇಂದಿಗೂ ಹಿಂದೆ ತಿರುಗಿ ನೋಡಲಿಲ್ಲ. ಇಂದು ಕಾಲದಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದ ಬೈಕ್ ಅನ್ನು ಈಗ ಭಾರತದಿಂದ ಇಂಗ್ಲೆಂಡಿಗೆ ರಫ್ತು ಮಾಡಲಾಗುತ್ತಿದೆ ಇಷ್ಟರ ಮಟ್ಟಿಗೆ ರಾಯಲ್ ಎನ್ಫೀಲ್ಡ್ ಕಂಪನಿ ಬೆಳೆದು ನಿಂತಿದೆ. ರಾಯಲ್ ಎನ್ಫೀಲ್ಡ್ ಬೈಕ್ ಪ್ರಪಂಚದಲ್ಲೇ ಅತೀ ಹೆಚ್ಚು ಟ್ರೈನಿಂಗ್ ಪಡೆದ ಬೈಕ್. ಭಾರತದಲ್ಲಿ ಮೊದಲ 4 ಸ್ಟ್ರೋಕ್ ಇಂಜಿನ್ ಆರಂಭಿಸಿದ್ದು ಕೂಡಾ ರಾಯಲ್ ಎನ್ಫೀಲ್ಡ್ ಕಂಪೆನಿಯೇ. 1990 ರಲ್ಲಿ ರಾಯಲ್ ಎನ್ಫೀಲ್ಡ್ ಡೀಸಲ್ ಇಂಜಿನ್ ಮೋಟಾರ್ ಸೈಕಲ್ ಅನ್ನು ತಯಾರಿಸುತ್ತದೆ ಆದರೆ ಇದು ವಿಫಲವಾಗುತ್ತದೆ. ನಂತರ 2002ರಲ್ಲಿ ಇದನ್ನು ಪೂರ್ತಿಯಾಗಿ ನಿಲ್ಲಿಸಿಬಿಡುತ್ತಾರೆ. ರಾಯಲ್ ಎನ್ಫೀಲ್ಡ್ ಕಂಪನಿಯನ್ನು ಮೊದಲು ಯುದ್ಧ ಸಾಮಗ್ರಿಗಳನ್ನು ತಯಾರಿಸುವುದರ ಸಲುವಾಗಿ ಆರಂಭಿಸುತ್ತಾರೆ. 1955 – 1959 ರ ಮಧ್ಯೆ ರಾಯಲ್ ಎನ್ಫೀಲ್ಡ್ ಬೈಕ್ ಭಾರತದಿಂದ ಅಮೆರಿಕಾಗೆ ಎನ್ಫೀಲ್ಡ್ ಇಂಡಿಯಾ ಎಂಬ ಹೆಸರಿನಲ್ಲಿ ರಫ್ತು ಆಗುತ್ತಿತ್ತು. ನಿಜವಾದ ರಾಯಲ್ ಎನ್ಫೀಲ್ಡ್ ಗುರುತಿನಲ್ಲಿ ಒಂದು ಫಿರಂಗಿ ಗುರುತು ಮತ್ತು ಮೇಡ್ ಲೈಕ್ ಎ ಗನ್ ಎಂಬ ಅಕ್ಷರಗಳು ಇರುತ್ತವೆ.

1962 ರಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯು ಇಂಟರ್ಸಪ್ತರ್ ಎಂಬ ಹೆಸರಿನಿಂದ 750CC ವೈಕ್ ಅನ್ನು ತಯಾರಿಸುತ್ತದೆ. ಆಗಿನ ಕಾಲದಲ್ಲಿ ಇದು ಜಗತ್ತಿನ ಅತೀ ವೇಗದ ಬೈಕ್ ಆಗಿತ್ತು. ಈಗ ನಮಗೆ ಕಾಣಿಸುತ್ತಿರುವ ಬುಲ್ಲೆಟ್ 350cc ಹಾಗೂ 500cc ಬೈಕ್ ಗಳು ಮೊದಲ ಬಾರಿ 1932 ರಲ್ಲಿ ತಯಾರಿಸಲಾಗುತ್ತಿತ್ತು. 2011 ರಲ್ಲಿ ರಾಯಲ್ ಎನ್ಫೀಲ್ಡ್ ಚೆನ್ನೈ ನಲ್ಲಿ ತನ್ನ ಎರಡನೇ ಹಂತದ ಉತ್ಪಾದನಾ ಘಟಕವನ್ನು ಆರಂಭಿಸಿತು. ಇಲ್ಲಿ ಪ್ರತೀ ದಿನ 800 ಬೈಕ್ ಗಳು ತಯಾರಾಗುತ್ತವೆ. 2014 ರಲ್ಲಿ ರಾಯಲ್ ಎನ್ಫೀಲ್ಡ್ ನಮ್ಮ ಭಾರತದಲ್ಲಿ 3 ಲಕ್ಷಕ್ಕಿಂತಲೂ ಹೆಚ್ಚು ಬೈಕ್ ಗಳನ್ನು ಮಾರಾಟ ಮಾಡುತ್ತದೆ. ಇದು ಹಾರ್ಲೆ ಡೇವಿಡ್ ಅಂಡ್ ಕಾಮೋಅನಿಯು ಪ್ರಪಂಚದಾದ್ಯಂತ ಮಾರಾಟ ಮಾಡಿದ್ದಕ್ಕಿಂತಲೂ ಹೆಚ್ಚು. ಇವಿಷ್ಟು ಎಲ್ಲಾರೂ ಇಷ್ಟ ಪಡುವ ರಾಯಲ್ ಎನ್ಫೀಲ್ಡ್ ಕಂಪನಿಯ ಬಗ್ಗೆ ಕೆಲವು ಮಾಹಿತಿಗಳು. nimage ಈ ಮಾಹಿತಿ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರ ಕುರಿತು ಇನ್ನಷ್ಟು ತಿಳಿದುಕೊಳ್ಳಲಿ ಶುಭವಾಗಲಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *