ಕರೋನ ಗೆದ್ದ 96 ವರ್ಷದ ಅಜ್ಜಿ ಏನಂದ್ರು ಗೊತ್ತೇ?

0 3

ಕರೊನ ಬಂದ್ರೆ ನಾವು ಸತ್ತೆ ಹೋಗುತ್ತೇವೆ ಅನ್ನುವವರು ಅದರ ಬಗ್ಗೆ ಚಿಂತೆಯನ್ನೇ ಬಿಟ್ಟು ಬಿಡಬೇಕು ಆತ್ಮ ಸ್ಥೈರ್ಯ ಒಂದು ನಮ್ಮಲ್ಲಿ ಇದ್ದರೆ ಯಾರೇ ಆದರೂ ಸಹ ಸಾವನ್ನೇ ಬೇಕಿದ್ದರೂ ಗೆದ್ದು ಬರಬಹುದು. ನಾನು ಸತ್ತೇ ಹೋಗುತ್ತೇನೆ ಎನ್ನುವವರಿಗೆ ಇದೊಂದು ಸಮಾಧಾನಕರ ಹಾಗೂ ಶುಭ ಸಮಾಚಾರ ಇದೆ. ವಯಸ್ಸು ಆದವರಿಗೆ ಏನಾದರೂ ಕಾಯಿಲೆ ಇರುವವರಿಗೆ ಕರೊನ ಬಂದ್ರೆ ಅವರು ಮತ್ತೆ ಬದುಕುವುದೇ ಹೆಚ್ಚು ಎನ್ನುತ್ತಿದ್ದವರ ಮಧ್ಯೇ ಆತ್ಮ ವಿಶ್ವಾಸ ಇದ್ದರೆ ಸಾವಿನ ನಡುವಲ್ಲಿ ಇದ್ದರೂ ಸಹ ಸಾವನ್ನೇ ಗೆದ್ದುಬರಬಹುದು ಎಂಬುದನ್ನ ಒಬ್ಬರು ಹಿರಿಯರು ಸಾಧಿಸಿ ತೋರಿಸಿದ್ದಾರೆ.

ನಿಜ ಕರೊನ ಬಂದರೆ ಅದರಲ್ಲೂ ವಯಸ್ಸಾದವರಿಗೆ ಬಂದರೆ ಅವರು ಬದುಕುವುದು ಅನುಮಾನವೇ. ಆದರೆ ಅವರಿಗೆಲ್ಲ ಈ ಮಾತಿಗೂ ಸೆಡ್ಡು ಹೊಡೆಯುವಂತೆ ಈ ಮಾತನ್ನ ಸುಳ್ಳು ಮಾಡಿದ್ದಾರೆ 96 ವರ್ಷದ ಹಿರಿಯೂರಿನ ಅಜ್ಜಿ ಒಬ್ಬರು ಈ ಇಳಿ ವಯಸ್ಸಿನಲ್ಲಿ ಕರೊನ ವೈರಸ್ ನ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಇವರನ್ನು ಜೂನ್ 26 ರಂದು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಹಿಂದಿರುಗಿ ಬಂದಿದ್ದಾರೆ.

ನಮ್ಮಲ್ಲಿ ಆತ್ಮ ವಿಶ್ವಾಸ ಒಂದು ಇದ್ದರೆ ನಾವು ಸಾವನ್ನೇ ಗೆದ್ದುಬರಬಹುದು, ಏನು ಆಗಲ್ಲ ಕನ್ರಪ್ಪ ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳಿ ಕರೊನ ಅಂತಹ ಮಹಾ ಮಾರಿಯನ್ನೇ ಸೋಲಿಸಬಹುದು ಎಂಬುದನ್ನು ಈ ಅಜ್ಜಿ ತಿಳಿಸಿಕೊಟ್ಟಿದ್ದಾರೆ. ಇವರ ಹಾಗೆಯೇ ನಾವೂ ಕೂಡಾ ಕರೋನಕ್ಕೆ ಹೆದರದೇ ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಲ್ಲಿ ನಾವೂ ಸಹ ಕರೊನ ದಿಂದ ಪಾರಾಗಬಹುದು.

Leave A Reply

Your email address will not be published.