ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣ ಪಡೆಯಲು, ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಕಡ್ಡಾಯ

0 6,769

Ration card link with Aadhaar: ಕಾಂಗ್ರೆಸ್ ಸರ್ಕಾರ ಜುಲೈ 10 ನೇ ತಾರೀಖಿನಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣವನ್ನು ಪಡಿತರ ಚೀಟಿಗಾರರ ಖಾತೆಗೆ ನೇರವಾಗಿ ಜಮಾ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಯೋಜನೆ ಫಲವನ್ನು ಪಡೆಯಲು ರೇಷನ್ ಕಾರ್ಡ್ ಗೆ (Ration card link with Aadhaar) ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕು ಮಾಡಿಸದಿರುವವರಿಗೆ ಹೇಗೆ ಮಾಡಿಸುವುದು ಎಂದು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.

ಮೊದಲಿಗೆ ವೆಬ್ಸೈಟ್ ಗೆ ಹೋಗಬೇಕು ನಂತರ ಹೋಂ ಮುಖಪುಟ ಬರುತ್ತದೆ. ನಂತರ (scroll) ಮಾಡಬೇಕು ಅಲ್ಲಿ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡೈರೆಕ್ಟ್ ಲಿಂಕ್ ಎನ್ನುವ ಆಪ್ಷನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು. ನೀವು ಕ್ಲಿಕ್ ಮಾಡಿದಾಗ ಆಹಾರ ಇಲಾಖೆಯ ವೆಬ್ಸೈಟ್ ಓಪನ ಆಗುತ್ತದೆ, ಓಪನ್ ಆದ ನಂತರ ಇ- ಸೇವೆ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕ್ಲಿಕ್ ಮಾಡಿದ ನಂತರ ಇ-ಸ್ಥಿತಿ ಎನ್ನುವ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಹೊಸ ಹಾಗೂ ಓಲಿ ಪಡಿತರ ಚೀಟಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ಕ್ಲಿಕ್ ಮಾಡಿದಾಗ ನಿಮ್ಮ ಜಿಲ್ಲೆಗಳ ಹೆಸರು ಹಾಗೂ ಇನ್ನು ಕೆಲವು ಮಾಹಿತಿಗಳು ಬರುತ್ತದೆ ನೀವು ನಿಮ್ಮ ಜಿಲ್ಲೆಗಳ ಹೆಸರ ಮೇಲೆ ಇರುವ ಲಿಂಕನ್ನು ಕ್ಲಿಕ್ ಮಾಡಬೇಕು. ಅಲ್ಲಿ ಕ್ಲಿಕ್ ಮಾಡಿದಾಗ ತುಂಬಾ ಆಪ್ಷನ್ಸ್ ಬರುತ್ತದೆ ಅದರಲ್ಲಿ ನೀವು ಪಡಿತರ ಚೀಟಿ ವಿವರ ಎನ್ನುವ ಆಪ್ಷನ್ ಕ್ಲಿಕ್ ಮಾಡಬೇಕು ಆಗ ಎರಡು ಆಪ್ಷನ್ ಬರುತ್ತದೆ with OTP & without OTP ಅಂತ ಅದರಲ್ಲಿ ನೀವು ಯಾವುದಾದರೂ ಸೆಲೆಕ್ಟ್ ಮಾಡಿಕೊಳ್ಳಬಹುದು.

ನಂತರ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹಾಕಬೇಕು ನಂತರ ಗೋ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ರೇಷನ್ ಕಾರ್ಡ್ ಗೆ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ ಲಿಂಕ್ ಆಗಿದಿಯಾ ಇಲ್ಲವಾ ಎಂದು ಅಲ್ಲಿ ನೋಡಬಹುದು.

Ration card link with Aadhaar

ನಂತರ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಮೆನ್ ಪೇಜ್ ಗೆ ಹೋಗಬೇಕು ಅಂದರೆ ಆಹಾರ ಇಲಾಖೆಯ ವೆಬ್ಸೈಟ್ ಗೆ ಹೋಗಿ ಅಲ್ಲಿ ಪಡಿತರ ಚೀಟಿ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಕೆಳಗೆ UID ಲಿಂಕ್ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ಮೊದಲಿನ ತರ ನಿಮ್ಮ ಜಿಲ್ಲೆಗಳ ಹೆಸರು ಬರುತ್ತದೆ ಇದರ ಮೇಲೆ ಇರುವಂತಹ ಲಿಂಕನ್ನು ಕ್ಲಿಕ್ ಮಾಡಬೇಕು ಅದನ್ನು ಕ್ಲಿಕ್ ಮಾಡಿದಾಗ ಮತ್ತು ಕೆಲವು ಆಪ್ಷನ್ಗಳು ಸಿಗುತ್ತದೆ ಅದರಲ್ಲಿ UID linking for RC members ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ ಆಗ ನಿಮ್ಮ ಆಧಾರ್ ನಂಬರ್ ಅಥವಾ ವೋಟರ್ ಐಡಿ ನಂಬರ್ ಅನ್ನು ಕೇಳುತ್ತದೆ

ಯಾವುದು ಬೇಕಾದರೂ ಹಾಕಬಹುದು ಯಾರ ಒಂದು ಆಧಾರ್ ಕಾರ್ಡನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡಿಸಬೇಕು ಅವರ ಆಧಾರ್ ನಂಬರ್ ಅಥವಾ ವೋಟರ್ ಐಡಿ ಅನ್ನು ಹಾಕಬೇಕು. ಆಧಾರ್ ಕಾರ್ಡ್ ನಂಬರ್ ಹಾಕಿ ಗೋ ಮೇಲೆ ಕ್ಲಿಕ್ ಮಾಡಬೇಕು ನಂತರ ಬಂದಂತಹ ಓಟಿಪಿಯನ್ನು ಹಾಕಿ ಗೋ ಬಟನ್ ಮೇಲೆ ಕ್ಲಿಕ್ ಮಾಡಬೇಕು ಗೋ ಬಟ್ಟನ್ ಮೇಲೆ ಕ್ಲಿಕ್ ಮಾಡಿದಾಗ validity successfully ಅಂತ ಬರುತ್ತದೆ.

ನಂತರ ನಿಮಗೆ ರೇಷನ್ ಕಾರ್ಡ್ ನಂಬರ್ ಕೇಳುತ್ತದೆ ರೇಷನ್ ಕಾರ್ಡ್ ನಂಬರ್ ಹಾಕಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ link successfully ಎಂದು ಬರುತ್ತದೆ ಈ ರೀತಿಯಾಗಿ ನೀವು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು

Leave A Reply

Your email address will not be published.