ಅಂಚೆ ಕಚೇರಿಯಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಬರುತ್ತೆ ತಿಳಿದಿದೆಯಾ. ಅಂಚೆ ಕಚೇರಿಗಳು (Post Office) ಈಗ ಪತ್ರ ವ್ಯವಹಾರಕ್ಕಾಗಿ ಮಾತ್ರ ಅಲ್ಲದೇ ಅಂಚೆ ಬ್ಯಾಂಕ್ ಆಗಿ ಸಹ ಕಾರ್ಯ ನಿರ್ವಹಣೆ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಇರುವ ಜನರಿಗೆ ಸಂಪರ್ಕ ನಾಡಿಯಾಗಿ ಇದ್ದ ಅಂಚೆ ಕಛೇರಿ ಅವರ ಬಳಿ ಹೂಡಿಕೆ ಮಾಡುವ ಗ್ರಾಹಕನ ಹಣಕ್ಕೆ 100% ಭದ್ರತೆ ಒದಗಿಸುತ್ತದೆ. ಯಾಕೆಂದರೆ, ಅಂಚೆ ಕಚೇರಿಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ.

ಅದರಿಂದ, ಜನರು ಕೊಡುವ ಹಣಕ್ಕೆ ಸರ್ಕಾರವೇ ಭರವಸೆ ಮತ್ತು ಖಚಿತ ರೂಪದ ಲಾಭವು ಸಿಗುವುದು ಸಹ ಅಷ್ಟೇ ಗ್ಯಾರಂಟಿಯಾಗಿದೆ. ಸದ್ಯಕ್ಕೆ ಪೋಸ್ಟ್ ಆಫೀಸ್’ನಲ್ಲಿ 13 ಕ್ಕೂ ಹೆಚ್ಚು ಬೇರೆ ಬೇರೆ ಬಗೆಯ ಉಳಿತಾಯ ಯೋಜನೆಗಳು (Poat office Schemes) ಲಭ್ಯವಿದ್ದು ಗ್ರಾಹಕರು ಅವರ ಅನುಕೂಲತೆ ಮತ್ತು ಹಣಕಾಸಿನ ಸ್ಥಿತಿಗೆ ಅನುಸಾರವಾಗಿ ಅವರಿಗೆ ಬೇಕಾದ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ಒಂದು ಗ್ರಾಮ ಪಂಚಾಯಿತಿಯಲ್ಲಿ ಸಹ ಪೋಸ್ಟ್ ಆಫೀಸ್’ಗಳು ಇರುವುದರಿಂದ ಬ್ಯಾಂಕ್’ಗಳಿಗಿಂತ ಇನ್ನು ಅತಿ ಬೇಗವಾಗಿ ಮತ್ತು ಸರಳವಾಗಿ ಪೋಸ್ಟ್ ಆಫೀಸ್ ಸೇವೆಗಳು ಸಿಗುತ್ತವೆ ಎಂದು ನಂಬಲಾಗಿದೆ.

ಅದರೊಂದಿಗೆ ಕಡಿಮೆ ಅವಧಿಯಲ್ಲಿ ಅತಿ ಕಡಿಮೆ ದಾಖಲೆ ಪತ್ರಗಳೊಂದಿಗೆ, ಈ ಯೋಜನೆಯ ಖಾತೆಗಳನ್ನು ತೆರೆಯಬಹುದು ಮತ್ತು ಯಾವುದೇ ಗೊಂದಲಗಳು ಇದ್ದರೂ ಸಹ ಊರಿನಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳ ಮೂಲಕ ಸ್ಪಷ್ಟವಾದ ವಿವರಗಳನ್ನು ಪಡೆದುಕೊಳ್ಳಬಹುದು. ನಿಧಾನವಾಗಿ ಜನರು ಬ್ಯಾಂಕ್’ಗಳಷ್ಟೇ ಪೋಸ್ಟ್ ಆಫೀಸ್ ಸೇವೆಗಳ ಕಡೆ ವಾಲಿದ್ದಾರೆ. ಇದರಿಂದ, ದಿನ ಭರ್ತಿಯಾದಂತೆ ಪೋಸ್ಟ್ ಆಫೀಸ್’ಗಳಲ್ಲಿ ಖಾತೆ ತೆರೆಯುವ ಸಂಖ್ಯೆ ಮತ್ತು ಈ ಯೋಜನೆಗಳನ್ನು ಅಡವಳಿಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಬಗ್ಗೆ ಆಸಕ್ತಿ ಹೊಂದಿರುವ ಜನರು ಸದ್ಯಕ್ಕೆ 2 ಲಕ್ಷ ಹೂಡಿಕೆ ಮಾಡುವ ಪ್ಲಾನಿಂಗ್ ಇದೆ ಯಾವ ಯೋಜನೆಯಲ್ಲಿ ಹಣ ಇಟ್ಟರೆ ಎಷ್ಟು ಲಾಭ ಬರುತ್ತದೆ ಎಂದು ಮಾಹಿತಿಗಾಗಿ ಹುಡುಕಾಡುತ್ತಿದ್ದರೆ.

ಪೋಸ್ಟ್ ಆಫೀಸ್ ಯಾವ ಯೋಜನೆಗಳ ಮೂಲಕ ಎಷ್ಟು ಲಾಭ ಸಿಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ.

ಉಳಿತಾಯ ಖಾತೆ ( Post Office Saving Account ) :- ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಹಣ ಇಡುವುದಾದರೆ ಅವರಿಗೆ ಕೇವಲ 4% ಬಡ್ಡಿ ಸಿಗುತ್ತದೆ. ಇದು, ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ಗ್ರಾಹಕರ ಸೇವಿಂಗ್ ಅಕೌಂಟ್’ಗೆ ಜಮೆ ಆಗುತ್ತದೆ.

ನ್ಯಾಷನಲ್ ಸೇವಿಂಗ್ಸ್ ಟೈಮ್ ಡಿಪಾಸಿಟ್ ಸ್ಕೀಮ್ ( National Savings time deposit scheme ) :- ಪೋಸ್ಟ್ ಆಫೀಸ್’ನಾ ಅತ್ಯುತ್ತಮ FD ಯೋಜನೆ ಇದಾಗಿದ್ದು, ಇದರಲ್ಲಿ, ಒಂದೇ ಬಾರಿ ಹಣ ಠೇವಣಿ ಇಡಬೇಕು. ಈ ಯೋಜನೆಯ ಮೆಚ್ಯೂರಿಟಿ  ಸಮಯ 5 ವರ್ಷಗಳಾಗಿರುತ್ತದೆ. 6.19% – 7.5% ವರೆಗೆ ಬಡ್ಡಿ ಸಿಗುತ್ತದೆ.

ನಿಶ್ಚಿತ ಠೇವಣಿ (Fixed Deposite) :-1 ವರ್ಷ, 2 ವರ್ಷ, 3 ವರ್ಷ ಅಥವಾ 5 ವರ್ಷಗಳ ಸಮಯದ ಠೇವಣಿ ಇಡಬಹುದು. ಎಷ್ಟು ವರ್ಷಗಳ ಸಮಯ ಆಯ್ಕೆಯಾಗಿದೆ ಎನ್ನುವುದರ ಆಧಾರದ ಮೇಲೆ ಬಡ್ಡಿ ದರ ವ್ಯತ್ಯಾಸ ಆಗುತ್ತದೆ. ಪ್ರಸ್ತುತವಾಗಿ ವಿಶೇಷವಾದ ಕೇಂದ್ರ ಸರ್ಕಾರದ ಮಹಿಳಾ ಸಮ್ಮಾನ್ ಯೋಜನೆಯ ಕೆಳಗೆ 2 ವರ್ಷಗಳ ಠೇವಣಿಗೆ 7% ಬಡ್ಡಿ ದರ ಸಿಗುತ್ತದೆ. 3 ವರ್ಷಗಳ ಸಮಯಕ್ಕೆ 2 ಲಕ್ಷ ರೂಪಾಯಿಗಳನ್ನು ಡಿಪಾಸಿಟ್ ಇಡುವುದಾದರೆ 7.1% ಬಡ್ಡಿ ದರದಲ್ಲಿ ರೂ.2,47, 015, 5 ವರ್ಷಗಳ ಸಮಯಕ್ಕೆ 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 7.5% ಬಡ್ಡಿ ದರದ ಅನ್ವಯ ರೂ.2,89,990 ಸಿಗುತ್ತದೆ.

ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ( POMIS ) :- 
ಈ ಯೋಜನೆಯ ಮೆಚ್ಯೂರಿಟಿ ಸಮಯ ಸಹ 5 ವರ್ಷಗಳಾಗಿರುತ್ತವೆ, ಒಂದು ಬಾರಿಗೆ 2 ಲಕ್ಷ ಹೂಡಿಕೆ ಮಾಡಿದರೆ ಯೋಜನೆ ಹೆಸರೇ ತಿಳಿಸುವಂತೆ ಪ್ರತಿ ತಿಂಗಳು 7.4% ಬಡ್ಡಿ ದರದ ಅನ್ವಯ ಲಾಭ ರೂಪದ ಹಣವು ಉಳಿತಾಯ ಖಾತೆಗೆ ಜಮೆ ಆಗುತ್ತದೆ. ಆ ಪ್ರಕಾರವಾಗಿ ಸದ್ಯಕ್ಕೆ 2 ಲಕ್ಷ ಹೂಡಿಕೆಗೆ ಪ್ರತಿ ತಿಂಗಳು ರೂ.1,233 ಸಿಗುತ್ತದೆ. 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕ ಸ್ವತಂತ್ರವಾಗಿ ಈ ಖಾತೆಗಳಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ರೂಪದ ಲಾಭ ಪಡೆಯಬಹುದು, ಪ್ರತಿ 3 ತಿಂಗಳಿಗೆ ಒಮ್ಮೆ ಬಡ್ಡಿ ದರ ಪರಿಷ್ಕೃತವಾಗುತ್ತದೆ ಮತ್ತು ನಾಮಿನಿ ಫೆಸಿಲಿಟಿ ಸಹ ಇರುತ್ತದೆ.

ಈ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ಅಥವಾ ಇನ್ನು ಹೆಚ್ಚು ವಿವರವಾಗಿ ಮಾಹಿತಿ ಬೇಕಿದ್ದರೆ ಹತ್ತಿರದ ಅಂಚೆ ಠಾಣೆಗೆ ಭೇಟಿ ನೀಡಿ.

Leave a Reply

Your email address will not be published. Required fields are marked *