ರಮೇಶ್ ಜಾರಕಿಹೋಳಿ ಸಿ’ಡಿ ಲೇ’ಡಿ ಗೆ ಕೊಟ್ಟಂತ ಗಿಫ್ಟ್ ಏನು ಗೊತ್ತೇ?

0 5

ಬಿಜೆಪಿ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಸಿ. ಡಿ. ಪ್ರಕರಣ ದಿನಕ್ಕೊಂದು ತಿರುವುಪಡೆದುಕೊಳ್ಳುತ್ತಿದೆ. ಇನ್ನು ಇದೀಗ ಹೈಕೋರ್ಟ್ ಈ ಬಗ್ಗೆ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ. ಮಾಜಿ ಸಚಿವರ ಖಾಸಗಿ ವಿಡಿಯೋ ಸಿ.ಡಿ ಬಹಿರಂಗ ಪ್ರಕರಣದ ತನಿಖೆಯನ್ನ ಎಸ್​ಐಟಿಗೆ ನೀಡಿದ್ದು ಮತ್ತು ಪ್ರಕರಣವನ್ನ ಸಿಬಿಐಗೆ ನೀಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆಯು ಸೋಮವಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆದಿದ್ದು ಪ್ರಕರಣದ ತನಿಖೆಯ ವರದಿಯನ್ನ ನೀಡುವಂತೆ ಎಸ್​ಐಟಿ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ವಿಚಾರಣೆಗೆ ಇಳಿದಾಗ ಇನ್ನು ಹಲವಾರು ಸತ್ಯಗಳು ಬಯಲಿಗೆ ಬರುತ್ತಿದೆ. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಮೇಶ್ ಜಾರಕಿಹೊಳಿ ಯವರು ಆ ಯುವತಿಗೆ ಮೊಬೈಲ್ ಒಂದೇ ಅಲ್ಲದೆ ಲಕ್ಷ ಲಕ್ಷ ರು ಮೌಲ್ಯದ ಚಿನ್ನಾಭರಣವನ್ನು ಕೂಡ ನೀಡಿದ್ದಾರೆ ಎಂಬ ವಿಚಾರ ಕೂಡ ತಿಳಿಯುತ್ತಿದೆ. ಸಿಐಟಿ ತನಿಖೆ ವೇಳೆ ಯುವತಿ ಮಹತ್ವದ ಸಾಕ್ಷಿಯನ್ನು ನೀಡಿದ್ದಾಳೆ. ತನಿಖಾಧಿಕಾರಿಗಳಿಗೆ ಜ್ಯುವೆಲರಿ ಬಿಲ್ಲನ್ನು ಯುವತಿಯು ನೀಡಿದ್ದಾಳೆ. 18 ಲಕ್ಷ ರು ಮೌಲ್ಯದ ಚಿನ್ನಾಭರಣವನ್ನು ಆಕೆಗೆ ಗಿಫ್ಟಾಗಿ ನೀಡಿದ್ದಾರೆ. ಆರ್ ಟಿ ನಗರದ ಜ್ಯುವೆಲರಿ ಶಾಪ್ ನಲ್ಲಿ ಬಂಗಾರವನ್ನು ಖರೀದಿ ಮಾಡಿದ್ದಾರೆ. ಇಂದು ಈ ಬಿಲ್ ನ ಮೂಲಕ ತಿಳಿಯುತ್ತದೆ. ಎರಡು ಬ್ಯಾಗ್ ಬಟ್ಟೆಯನ್ನು ಕೂಡ ಇವರೇ ಕೊಡಿಸಿದ್ದಾರೆ ಎಂದು ತನಿಖಾಧಿಕಾರಿಗಳ ಮುಂದೆ ಯುವತಿಯು ಹೇಳಿದ್ದಾಳೆ.

ಇದರ ಮಧ್ಯೆ ಆರೋಪಿ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿ ನಡೆ ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರು ಎಸ್‌ಐಟಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ರವಿವಾರ ರಾತ್ರಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು ಅವರ ಬಿಪಿ, ಶುಗರ್ ನಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಕೋವಿಡ್ ನಿಯಮದಂತೆ 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಗೋಕಾಕ್ ತಾಲೂಕು ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಹೇಳಿದ್ದರು.

ಆದರೆ ರಮೇಶ್ ಜಾರಕಿಹೊಳಿ ಅವರು ಸಿ.ಡಿ. ಪ್ರಕರಣದಲ್ಲಿ ಎಸ್‌ಐಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈ ನಾಟಕ ಮಾಡುತ್ತಿದ್ದಾರೆ. ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇನ್ನು ಕೆಲವರು ರಮೇಶ್ ಜಾರಕಿಹೊಳಿ ಬಂಧನದ ಭೀತಿಯಿಂದ ಕೊರೋನಾ ನಾಟಕ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಏನೆ ಆದರೂ ರಾಜಕಾರಣಿಗಳು, ಜನಪ್ರತಿನಿಧಿಗಳು ಜನರನ್ನು ರಕ್ಷಿಸುವ ಮತ್ತು ಜನರಿಗೆ ಒಳ್ಳೆಯ ಮಾದರಿಯಾಗುವ ರೀತಿಯಲ್ಲಿ ಬದುಕಬೇಕು. ಈ ವಿಚಾರದಲ್ಲಿ ಸರಿಯಾಗಿ ತನಿಖೆಯಾಗಿ ಅಪರಾಧಿಗೆ ಸರಿಯಾದ ಶಿಕ್ಷೆ ಆಗಬೇಕು.

Leave A Reply

Your email address will not be published.