ಬೋರ್ ವೆಲ್ ಹಾಕಿಸುವಾಗ ಭೂಮಿಯಲ್ಲಿ ನೀರು ಹೇಗೆ ಶೇಖರಣೆ ಆಗಿರುತ್ತೆ ಇಂಟ್ರೆಸ್ಟಿಂಗ್ ವಿಡಿಯೋ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಅಂತರ್ಜಲ ಭೂಮಿಯ ಒಳಗೆ ಶೇಖರವಾಗಿರುವ ಜಲ. ಈ ವಲಯದಲ್ಲಿ ಶಿಲೆಗಳು ಮತ್ತು ಮಣ್ಣು ಸಂತೃಪ್ತವಾಗಿರುತ್ತವೆ. ಇದರ ಮೇಲ್ಭಾಗವೇ ಅಂತರ್ಜಲ ಮಟ್ಟ. ಸಂತೃಪ್ತ ವಲಯದಲ್ಲಿರುವ ನೀರೇ ಬಾವಿಗಳಿಗೆ ನೀರಿನ ಆಕರ. ಮಳೆಯಿಂದ ನೆಲದ ಮೇಲೆ ಬಿದ್ದ ನೀರಿನ ಬಹುಭಾಗ ಎತ್ತರದಿಂದ ತಗ್ಗಿನ ಕಡೆಗೆ ಹರಿಯುತ್ತದೆ. ಸ್ವಲ್ಪ ಪ್ರಮಾಣದ ನೀರು ಆವಿಯಾಗಿ ವಾಯುಗೋಳವನ್ನು ಸೇರುತ್ತದೆ. ಅತ್ಯಲ್ಪ ಪ್ರಮಾಣದ ನೀರನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಮಳೆ ನೀರಿನ ಒಂದು ಭಾಗ ಜಿನುಗಿ ಸ್ಥಳೀಯ ಶಿಲೆಗಳಲ್ಲಿರುವ ರಚನೆಗಳನ್ನು ಆಧರಿಸಿ ಅಂತರ್ಜಲವಾಗಿ ಶೇಖರಣೆಯಾಗುತ್ತ ಹೋಗುತ್ತದೆ. ಆದ್ದರಿಂದ ನಾವು ಇಲ್ಲಿ ಅಂತರ್ಜಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಲ್ಲ ಪ್ರದೇಶಗಳಲ್ಲೂ ಅಂತರ್ಜಲದ ಪ್ರಮಾಣ ಒಂದೇ ಬಗೆಯದಾಗಿರುವುದಿಲ್ಲ. ಮರಳಿನ ನೆಲವಾಗಿದ್ದರೆ ನೀರು ಬಹುಬೇಗ ಇಂಗಿಹೋಗುತ್ತದೆ, ಜೇಡು ಮಣ್ಣಿನ ನೆಲವಾಗಿದ್ದರೆ ಇಂಗುವ ದರ ಅತ್ಯಂತ ಕಡಿಮೆ. ಶಿಲೆಗಳು ರಂಧ್ರಮಯವಾಗಿದ್ದರೆ ನೀರು ಜಿನುಗುವುದು ಸುಲಭ. ಗಟ್ಟಿ ಶಿಲೆಗಳಾದ ಗ್ರನೈಟ್, ಬಸಾಲ್ಟ್ ಮುಂತಾದ ಶಿಲೆಗಳಲ್ಲಿ ನೀರು ಸುಲಭವಾಗಿ ಆಳಕ್ಕೆ ಇಳಿಯದು. ಆದರೆ ಇಂಥ ಶಿಲೆಗಳಲ್ಲಿ ಹೆಚ್ಚಿನ ವೇಳೆ ಬಿರುಕುಗಳಿರುವುದರಿಂದ ಅವುಗಳ ಮೂಲಕ ನೀರು ನೆಲದಾಳಕ್ಕೆ ಇಳಿಯುತ್ತದೆ. ವಿಶೇಷವಾಗಿ ಜಲಜ ಶಿಲೆಗಳಲ್ಲಿ ಹೆಚ್ಚಿನ ರಂಧ್ರ ಅಥವಾ ತೆರಪುಗಳಿರುವುದರಿಂದ ಅಂತರ್ಜಲ ಹರಿಯುವುದು ಸುಲಭ.

ನೀರಿನ ಪ್ರಮುಖ ಗುಣವೆಂದರೆ ಅದು ಘನ, ದ್ರವ, ಮತ್ತು ಅನಿಲ ಸ್ಥಿತಿಯಲ್ಲಿರುವುದು. ಇದರಲ್ಲಿ ಪ್ರಮುಖವಾಗಿ ಕಾಣುವುದು ದ್ರವ ರೂಪದಲ್ಲಿರುವ ನೀರು. ಭೂಮೇಲ್ಮೈ ಮೇಲೆ ಇದು ನದಿ, ಸಾಗರ, ಸರೋವರಗಳಲ್ಲೂ, ಕೆರೆಕಟ್ಟೆಗಳಲ್ಲೂ ಲಭ್ಯ. ಹಿಮದ ರೂಪದಲ್ಲಿರುವ ನೀರು ಪ್ರಮುಖವಾಗಿ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕಂಡುಬರುತ್ತದೆ. ಈ ಹಿಮರೂಪಿ ನೀರು ಪರಿಶುದ್ಧವಾದುದು. ಸಮುದ್ರದ ನೀರು ಬಾಷ್ಫೀಕರಣವಾಗಿ ಅನಂತರ ಸಾಂದ್ರೀಕರಣವಾಗಿ ಮೋಡಗಳು ಮೈದಳೆದು ಮಳೆರೂಪದಲ್ಲಿ ಮತ್ತೆ ಭೂಮಿಗೆ ಹಿಂತಿರುಗುವುದೇ ಜಲಚಕ್ರ.

ಅಂತರ್ಜಲವು ಎಲ್ಲಾ ಪ್ರದೇಶದಲ್ಲಿಯೂ ಇರುತ್ತದೆ. ಪ್ರಪಂಚದಲ್ಲಿ ಅತಿ ದೊಡ್ಡ ಜಲಚರ ಯುಎಸ್ ನಲ್ಲಿದೆ. ಅದರಂತೆಯೇ ನಮ್ಮ ಭಾರತದಲ್ಲಿರುವ ಅತಿ ದೊಡ್ಡ ಜಲಚರ ವೆಂದರೆ ಅಲ್ಲುವಿಯಂ ಅಂತರ್ಜಲವಾಗಿದೆ.ಇದು ಓಡಿಸಾ, ವೆಸ್ಟ್ ಬೆಂಗಾಲ್,ಬಿಹಾರ್,ಉತ್ತರಪ್ರದೇಶ ರಾಷ್ಟ್ರಗಳಲ್ಲಿ ವಿಸ್ತರಿಸಿದೆ. ಇದು ನಮ್ಮ ಭಾರತದಲ್ಲಿರುವ 31 ಪರ್ಸೆಂಟ್ ನಷ್ಟು ಭೂಭಾಗವನ್ನು ಆಕ್ರಮಿಸಿದೆ. ಅಂತರ್ಜಲವು ತುಂಬಾ ಪ್ರಮುಖವಾದದ್ದಾಗಿದೆ. ಸಾಧಾರಣ ಪ್ರಜೆಗಳಿಂದ ಹಿಡಿದು ವ್ಯವಸಾಯ ಮಾಡುವವರಿಗೆ, ಕಾರ್ಖಾನೆಗಳಿಗೆ ಮತ್ತು ಅನೇಕ ಕೆಲಸಗಳಿಗೆ ಅಂತರ್ಜಲವು ಮುಖ್ಯವಾಗಿರುತ್ತದೆ. ಅಂತರ್ಜಲದ ಮೂಲಕ ಬೆಳೆಯುವ ಬೆಳೆಗಳಿಗೆ ನೀರನ್ನು ಪೂರೈಸಲು ಯೋಗ್ಯವಾಗುತ್ತದೆ.ಅಂತರ್ಜಲವು ಪ್ರತಿಯೊಂದು ವಿಚಾರಕ್ಕೂ ಪ್ರತಿಯೊಬ್ಬರಿಗೂ ಅತ್ಯಮೂಲ್ಯವಾಗಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮವಾಗಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *