ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿಹಾಕಿ

0 13

ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇವತ್ತು ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬೇಕು ಯಾವ ಹುದ್ದೆಗಳು ಎಲ್ಲಿ ಮತ್ತು ಎಷ್ಟು ಹುದ್ದೆಗಳು ಖಾಲಿ ಇವೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಓದುವುದಕ್ಕೆ ಮತ್ತು ಬರೆಯುವುದಕ್ಕೆ ಬಂದರೆ ಸಾಕಾಗುತ್ತದೆ.

ಈ ಒಂದು ಹುದ್ದೆಗೆ ಹದಿನೆಂಟು ವರ್ಷದಿಂದ ನಲವತ್ತು ವರ್ಷದ ಒಳಗಿನವರು ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕು. ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬುದರ ಕುರಿತು ನೋಡುವುದಾದರೆ ಮೊದಲಿಗೆ ಗ್ರಹ ಸೇವಕರು ಈ ಒಂದು ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. ಇದರಲ್ಲಿ ಒಟ್ಟು ಒಂಭೈನೂರ ಹುದ್ದೆಗಳು ಖಾಲಿ ಇದ್ದು ಉದ್ಯೋಗ ಸ್ಥಳ ಕುವೈತ ಅರ್ಜಿ ಸಲ್ಲಿಸುವವರಿಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಾಗಿರಬೇಕು ಅವರಿಗೆ ಪ್ರತಿ ತಿಂಗಳು ಮೂವತ್ತರಿಂದ ಮೂವತ್ತೈದು ಸಾವಿರ ರೂಪಾಯಿ ವೇತನವನ್ನು ನೀಡಲಾಗುತ್ತದೆ.

ಮುಂದಿನದಾಗಿ ಗೃಹ ಚಾಲಕ ಹುದ್ದೆಗಳು ಈ ಹುದ್ದೆಗೆ ಪುರುಷ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಉದ್ಯೋಗ ಕೂಡ ಕುವೈತ ನಲ್ಲಿ ಇರುತ್ತದೆ ಒಟ್ಟು ಎರಡುನೂರು ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಮೂವತ್ತರಿಂದ ಮೂವತ್ತೈದು ಸಾವಿರ ರೂಪಾಯಿ ವೇತನವನ್ನು ನೀಡಲಾಗುತ್ತದೆ. ಮುಂದಿನ ದಾಗಿ ಮನೆ ಅಡುಗೆ ಹುದ್ದೆಗಳು ಇದು ಕೂಡ ಕುವೈತನಲ್ಲಿ ಇರುತ್ತದೆ ಈ ಹುದ್ದೆಗೆ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇವರಿಗೆ ಮಾಸಿಕ ವೇತನ ಮೂವತ್ನಾಲ್ಕು ಸಾವಿರದಿಂದ ನಲವತ್ತು ಸಾವಿರದವರೆಗೆ ಇರುತ್ತದೆ. ಮುಂದಿನದಾಗಿ ಮೈಕ್ರೋಸಾಫ್ಟ್ ಗ್ರೇಟ್ ಫ್ಲೇನ್ಸ್ ಡೆವಲಪರ್ ಹುದ್ದೆ. ಈ ಹುದ್ದೆ ಯು ಎ ಇ ನಲ್ಲಿರುತ್ತದೆ ಈ ಹುದ್ದೆಗೆ ಪುರುಷ ಅಥವಾ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಬಿಇ ಬಿಟೆಕ್ ಅರ್ಹತೆ ಹೊಂದಿರಬೇಕು. ಇವರಿಗೆ ಮಾಸಿಕ ವೇತನ ಮೂರು.ಇಪ್ಪತ್ತೈದು ಲಕ್ಷ ರೂಪಾಯಿ ಇರುತ್ತದೆ.

ಮುಂದಿನದಾಗಿ ಹೌಸ್ ಕೀಪಿಂಗ್ ಮೇಲ್ವಿಚಾರಕರ ಹುದ್ದೆ ಈ ಒಂದು ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಉತ್ತಮವಾಗಿ ಇಂಗ್ಲಿಷ್ ಮಾತನಾಡುವ ಅನುಭವ ಇರಬೇಕು ಫೋರ್ ಸ್ಟಾರ್ ಅಥವಾ ಫೈವ್ ಸ್ಟಾರ್ ಹೋಟೆಲಲ್ಲಿ ಕೆಲಸ ಇರುತ್ತದೆ ಇವರಿಗೆ ಮಾಸಿಕ ವೇತನ ಐವತ್ತು ಸಾವಿರ ರೂಪಾಯಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸುಮ್ ಅನ್ನ [email protected] ಈ ಇಮೇಲ್ ವಿಳಾಸಕ್ಕೆ ಕಳಿಸಬೇಕಾಗುತ್ತದೆ. ನಿಮಗೂ ಕೂಡ ಈ ಉದ್ಯೋಗಗಳಲ್ಲಿ ಆಸಕ್ತಿ ಇದ್ದರೆ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.