ಗ್ಯಾಸ್ಟಿಕ್ ತೊಂದರೆ ನಿವಾರಿಸುವ ಸುಲಭ ಮನೆಮದ್ದುಗಳಿವು

0 2

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಗ್ಯಾಸ್ಟಿಕ್ ಸಮಸ್ಯೆಯು ಬಾದಿಸುತ್ತಿದೆ ಜನರಲ್ಲಿ ಬದಲಾದಂತಹ ಆಧುನಿಕ ಜೀವನ ಶೈಲಿ ಅವರ ಬದಲಾದಂತಹ ಆಹಾರ ಕ್ರಮಗಳ ಕಾರಣದಿಂದಾಗಿ ಇಂದು ಇದೊಂದು ದೊಡ್ಡ ಸಮಸ್ಯೆಯಾಗಿ ತಲೆದೂರಿದೆ ಇಂದಿನ ಜನರು ತಮ್ಮ ಕೆಲಸಗಳ ಒತ್ತಡಗಳಿಂದ ಸರಿಯಾದ ಸಮಯಕ್ಕೆ ತಾವು ಆಹಾರವನ್ನು ಸೇವಿಸಲು ಆಗದೇ ಇರುವುದು ಅಥವಾ ಬೇಡದ ಸಂದರ್ಭದಲ್ಲಿ ಅನಿಯಮಿತ ಆಹಾರವನ್ನು ಸೇವನೆ ಮಾಡುವುದು ಹೆಚ್ಚು ಬೀದಿ ಬದಿಯಲ್ಲಿನ ಜಂಕ್ ಫುಡ್ ಗಳಿಗೆ ಮೊರೆ ಹೋಗುವುದು, ಹೀಗೆ ಹಲವಾರು ಕಾರಣಗಳನ್ನು ನಾವು ಗ್ಯಾಸ್ಟಿಕ್ ಸಮಸ್ಯೆಗೆ ಕೊಡಬಹುದಾಗಿದೆ ಆದರೆ ಈ ರೀತಿಯ ಸಮಸ್ಯೆಗಳನ್ನು ನಿಯಂತ್ರಿಸಲೂ ಸಹ ನಾವು ಮನೆ ಮದ್ಧುಗಳನ್ನೇ ಉಪಯೋಗಿಸುವುದು ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ ಆದ್ದರಿಂದಲೇ ನಾವು ಈ ಕೆಳಗೆ ನಿಮ್ಮ ಗ್ಯಾಸ್ಟಿಕ್ ಅನ್ನು ನಿಯಂತ್ರಿಸಲು ಕೆಲವು ಉತ್ತಮ ಮನೆ ಮದ್ಧುಗಳ ಬಗ್ಗೆ ಅವುಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಅವುಗಳನ್ನು ಉಪಯೋಗಿಸುವ ಕ್ರಮಗಳ ಬಗ್ಗೆ ಮತ್ತು ಅವುಗಳಿಂದಾಗುವ ಪ್ರಯೋಜನಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೇವೆ ಬನ್ನಿ.

ಮೊದಲನೆಯದಾಗಿ ಐದು ಚಮಚ ಜೀರಿಗೆಯನ್ನು ಮತ್ತು ಐದು ಚಮಚ ಓಂಕಾಳುಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿಕೊಂಡು ಅದಕ್ಕೆ ಐದು ಚಮಚ ಒಣ ಶುಂಠಿ ಪುಡಿಯನ್ನು ಸೇರಿಸಿ ಬೆರೆಸಿಕೊಳ್ಳಬೇಕು ಹೀಗೆ ಮಾಡಿಕೊಂಡ ಮಿಶ್ರಣವನ್ನು ಪ್ರತಿದಿನ ರಾತ್ರಿ ಊಟದ ನಂತರ ಒಂದು ಚಮಚ ಪುಡಿಯನ್ನು ಒಂದು ಗ್ಲಾಸ್ ಬಿಸಿ ನೀರಿನೊಂದಿಗೆ ಹದಿನೈದು ದಿನಗಳು ಸೇವಿಸಬೇಕು ಹೀಗೆ ಮಾಡುವುದರಿಂದ ಕ್ರಮೇಣ ನಿಮ್ಮ ಗ್ಯಾಸ್ಟಿಕ್ ಸಮಸ್ಯೆ ಸುದಾರಿಸುತ್ತದೆ

ಇನ್ನು ಎರಡನೆಯದಾಗಿ ಕೆಲವು ಪುದಿನಾ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಅದರ ಪುಡಿಯನ್ನು ಪ್ರತಿದಿನವು ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚ ಪುದಿನಾ ಪುಡಿಯನ್ನು ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಸೇರಿಸಿ ಸೇವಿಸುವುದರಿಂದ ನಿಮ್ಮ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುವುದರಲ್ಲಿ ಎರಡು ಮಾತಿಲ್ಲ

ಅಲ್ಲದೇ ಮೂರನೆಯದಾಗಿ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ ಅದಕ್ಕೆ ಸ್ವಲ್ಪವೇ ಬೆಲ್ಲವನ್ನು ಸೇರಿಸಿ ಅದಕ್ಕೆ ಒಂದೆರಡು ಕಾಳು ಎಲಕ್ಕಿಯನ್ನು ಹಾಕಿ ಚೆನ್ನಾಗಿ ಕಾಯಿಸಿ ಅದನ್ನು ಜೀರಿಗೆ ಕಷಾಯವನ್ನಾಗಿ ಮಾಡಿಕೊಳ್ಳಬೇಕು ನಂತರ ಈ ಕಷಾಯವನ್ನು ನೀವು ಕಾಫಿ ಅಥವಾ ಟೀ ಕುಡಿಯುವ ಬದಲು ದಿನಕ್ಕೆ ಮೂರ್ನಾಲ್ಕು ಬಾರಿಯಾದರೂ ಸೇವಿಸುತ್ತಾ ಬಂದರೆ ಕ್ರಮೇಣ ನಿಮ್ಮ ಗ್ಯಾಸ್ಟಿಕ್ ಸಮಸ್ಯೆಯು ಸುಧಾರಿಸುತ್ತದೆ

Leave A Reply

Your email address will not be published.