ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು ರೈತರು ತಾವು ಬೆಳೆಯುವಂತಹ ಬೆಳೆಗಳಿಗೆ ನಷ್ಟ ಏನಾದರೂ ಆದರೆ ಆ ನಷ್ಟವನ್ನು ಭರಿಸಿಕೊಡುವ ಯೋಜನೆ ಇದಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ರೈತರು ಅರ್ಜಿಯನ್ನು ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಹಾಗೆ ಈ ಯೋಜನೆಗೆ ಎಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಎನ್ನುವುದನ್ನು ನೋಡೋಣ. ಯಾವ ಯಾವ ರೀತಿ ಬೆಳೆಗಳು ನಷ್ಟ ಆದ್ರೆ ಎಷ್ಟೆಷ್ಟು ಬೆಳೇ ವಿಮೆಯನ್ನು ಕಟ್ಟಬೇಕು ಅನ್ನೋದನ್ನು ಕೂಡಾ ನೋಡೋಣ.

ಪ್ರಧಾನ ಮಂತ್ರಿ ಮೋದಿ ಅವರು ರೈತರಿಗೆ ಅನುಕೂಲವಾಗಲಿ ಎಂದು ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ರೈತರು ತಾವು ಬೆಳೆದಂತಹ ಬೆಳೆಗೆ ಯಾವುದೇ ನಷ್ಟ ಆಗಿದ್ದರೆ ಪ್ರಕೃತಿ ವಿಕೋಪ ಉಂಟಾಗಿ ಬೆಳೆ ಹಾನಿ ಆಗಿದ್ದರೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಯಾವ ಯಾವ ರೀತಿಯಲ್ಲಿ ಬೆಳೆಗಳು ಹಾನಿ ಆಗಿದ್ದರೆ ಯಾವ ಯಾವ ರೀತಿಯಲ್ಲಿ ನಷ್ಟವನ್ನು ತುಂಬಿಕೊಡಲಾಗುತ್ತೆ ಅನ್ನೋದನ್ನ ನೋಡೋಣ. ಪ್ರಕೃತಿ ವಿಕೋಪದಿಂದ ಅಂದರೆ ಭೂ ಕುಸಿತ, ಆಲಿಕಲ್ಲು ಮಳೆ, ಬೆಳೆ ಮುಳುಗಡೆ ಆದಾಗ ಈ ರೀತಿ ಏನಾದರು ಬೆಳೆಗಳು ಹಾನಿ ಆಗಿದ್ದರೆ ಅವುಗಳಿಗೆ ನಷ್ಟ ಪರಿಹಾರವನ್ನು ನೀಡಲಾಗುತ್ತದೆ. ಹಾಗೆಯೇ ತಾವು ಬೆಳೆದ ಭೂಮಿಯಲ್ಲಿ ಶೇಕಡಾ 25ರಷ್ಟು ಈ ಏನಾದರೂ ಬೆಳೆ ನಷ್ಟ ಆಗಿದ್ದರೆ ಅಂತಹ ರೈತರಿಗೂ ಸಹ ಬೆಳೆಗಳ ನಷ್ಟವನ್ನು ನೀಡಲಾಗುತ್ತದೆ.

ಇಲ್ಲಿ ನೆನಪಿನಲ್ಲಿ ಇಡಬೇಕಾದ ಒಂದು ಅಂಶ ಎಂದರೆ ಯಾವ ರೈತರು ತಮ್ಮ ಬೆಳೆಗಳ ಮೇಲೆ ಸಾಲವನ್ನು ತೆಗೆದುಕೊಂಡಿರುತ್ತಾರೋ ಅವರಿಗೆ ಕಡ್ಡಾಯವಾಗಿ ಆ ರೈತರಿಗೆ ಫಸಲ್ ಭೀಮ ಯೋಜನೆಯನ್ನು ನೀಡಿರುತ್ತಾರೆ ಎಂದು ಹೇಳಬಹುದು. ಆದರೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯನ್ನು ಪಡೆಯಲಿ ಇಚ್ಛಿಸದೇ ಇದ್ದರೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ 7 ದಿನ ಮೊದಲೇ ನಿಗದಿತ ನಮೂನೆ ಮುಚ್ಚಳಿಕೆ ಪತ್ರವನ್ನು ನೀಡಬೇಕು. ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗುವುದು. ಇನ್ನೊಂದು ಎಂದರೆ ಒಂದು ಹೆಕ್ಟೇರ್ ಪ್ರದೇಶದಲ್ಲಿ ಯಾವ ಯಾವ ಬೆಳೆಗಳಿಗೆ ಎಷ್ಟು ಬೆಳೆ ವಿಮೆಯನ್ನು ಕಟ್ಟಬೇಕಾಗುತ್ತದೆ ಮತ್ತು ಒಂದು ಹೆಕ್ಟೇರ್ ನಲ್ಲಿ ಬೆಳೆ ನಷ್ಟ ಆದಾಗ ಎಷ್ಟು ವಿಮೆ ಬರುತ್ತದೆ ಮತ್ತು ಹೇಗೆ ಅನ್ನೊದನ್ನ ನೋಡೋಣ.

ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರಿಗೆ ಅಂತಹ ಪ್ರದೇಶದಲ್ಲಿ ಒಂದು ಹೆಕ್ಟೇರ್ ಗೆ 1720 ರೂಪಾಯಿಯನ್ನು ಬೆಳೆ ವಿಮೆ ಕಟ್ಟಬೇಕು. ಆಗ ಬೆಳೆ ನಷ್ಟ ಪರಿಹಾರ ಎಂದು 86000 ರೂಪಾಯಿ ದೊರೆಯುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/8/2020
ಅದೇ ರೀತಿ ಮುಸುಕಿನ ಜೋಳಕ್ಕೆ ಒಂದು ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದ್ದರೆ 59000 ಋಒಆಯಿ ನಷ್ಟ ಪರಿಹಾರ ಸಿಗತ್ತೆ ಹಾಗೂ ಇವರಿಗೆ ಬೆಳೆ ವಿಮೆ 1180 ರೂಪಾಯಿ ಇರುತ್ತೆ ಹಾಗೂ ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/8/2020. ಇದೆ ರೀತಿ ಜೋಳ, ಉದ್ದು, ಹತ್ತಿ , ಅರಿಶಿನ, ಮೆಣಸು ಹೀಗೆ ಹಲವಾರು ಬೆಳಗಳ ನಷ್ಟಕ್ಕೆ ಪರಿಹಾರವನ್ನು ನೀಡಲಾಗಿದ್ದು ಇವುಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಜುಲೈ, ಆಗಸ್ಟ್ ತಿಂಗಳವರೆಗೂ ಸಮಯ ಇರುತ್ತದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ರೈತರು ಎಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ನೋಡುವುದಾದರೆ, ರೈತರಿಗೆ ಸಮೀಪ ಇರುವ ಬ್ಯಾಂಕ್, ಸಹಕಾರಿ ಸಂಘ, ಸಾಮಾನ್ಯ ಸೇವಾ ಕೇಂದ್ರ ಇಲ್ಲಿ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ತಾಲೂಕಿನ ಹತ್ತಿರದ ರೈತರ ಸಂಪರ್ಕ ಕೇಂದ್ರ, ಸಹಾಯ ಕೃಷಿ ನಿರ್ದೇಶಕ ಕಚೇರಿ ಇಲ್ಲಿಯೂ ಸಹ ರೈತರು ಅರ್ಜಿಯನ್ನು ಸಲ್ಲಿಸಬಹುದು. ಅಲ್ಲಿ ಅವರು ಕೇಳುವಂತಹ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದು. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!