ಬಿಪಿ ಕಡಿಮೆ ಮಾಡುವ ಈ ಸಣ್ಣ ಉಪಾಯ ಮಾಡಿ

0 1

ಧಾವಂತದ ಜೀವನದಲ್ಲಿ ನಮ್ಮ ಆರೋಗ್ಯದ ಕಡೆಗೂ ಕೂಡ ಲಕ್ಷ ವಹಿಸದೆ ಕೆಲಸ ಮಾಡುತ್ತಾ ಇದ್ದೇವೆ ನಾವೆಲ್ಲ. ಆಹಾರ ಪದ್ಧತಿ , ಕೆಲಸದ ಒತ್ತಡದಿಂದ ಹಲವಾರು ಜನರು ಅಧಿಕ ರಕ್ತದೊತ್ತಡಕ್ಕೆ ಗುರಿ ಆಗುತ್ತಾ ಇದ್ದಾರೆ. ಪ್ರತೀ ನಿತ್ಯ ಔಷಧಗಳನ್ನು ಉಪಯೋಗ ಮಾಡುತ್ತ ಇದ್ದರೂ ಸಹ ಆಗಾಗ ಹೃದಯಾಘಾತಕ್ಕೆ ಒಳಗಾಗುವ ಸನ್ನಿವೇಶ ಸಾಕಷ್ಟು ನಡೆಯುತ್ತಲೇ ಇವೆ. ಬಿಪಿ ಅಧಿಕವಾದಗ ಸಣ್ಣಗೆ ಮೈಯಲ್ಲಿ ನಡುಕ, ಸುಸ್ತಾಗುವುದು , ಹೃದಯದ ಬಡಿತ ಹೆಚ್ಚಾಗುವುದು ಸರ್ವೇ ಸಾಮಾನ್ಯ. ಅಕಸ್ಮಾತ್ ಆಗಿ ಬಿಪಿ ಹೆಚ್ಚು ಆದರೆ ಒಂದು ಚಿಕ್ಕ ಉಪಾಯದಿಂದ ಮತ್ತೆ ಮೊದಲಿನ ಹಾಗೆ ಮಾಡುವ ಅವಕಾಶಗಳು ಸಾಕಷ್ಟು ಇವೆ. ಇನ್ನು ಆ ಉಪಾಯಗಳು ಯಾವವು ಅನ್ನೋದನ್ನ ನೋಡೋನ.

ಬಿಪಿ ಅಧಿಕವಾದ ತಕ್ಷಣವೇ ಒಂದು ಬಕೆಟಿನಲ್ಲಿ ಸ್ವಲ್ಪ ಉಗುರುಬೆಚ್ಚಗಿನ ನೀರನ್ನು ಹಾಕಿಕೊಂಡು ಎರಡೂ ಕಾಲಿನ ಪಾದಗಳೂ ನೀರಿನಲ್ಲಿ ಮುಳುಗುವಂತೆ ಇಟ್ಟುಕೊಂಡು 10 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು. ನಂತರ ನೀರಿಗೆ ನಿಂಬೆ ರಸವನ್ನು ಬೆರಸಿ ಸೇವಿಸಿದರೆ ತಕ್ಷಣವೇ ಬಿಪಿ ಹತೋಟಿಗೆ ಬರುತ್ತದೆ. ಆದರೆ ಇದಕ್ಕೆ ಉಪ್ಪನ್ನ ಮಾತ್ರ ಸೇರಿಸಿಕೊಳ್ಳಬಾರದು. ಆದರೂ ಇದು ತಾತ್ಕಾಲೀಕವಾದ ಉಪಾಯ. ಬಿಪಿ ಯನ್ನ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಲು ಈ ರೀತಿಯಾಗಿ ಮಾಡಬಹುದು. ಇನ್ನು ದಿನಕ್ಕೆ ಇಬ್ಬ ವ್ಯಕ್ತಿಗೆ ಅವಶ್ಯಕವಾದ 6 ಗ್ರಾಮ್ ಉಪ್ಪು ಹಾಗೂ ಹಣ್ಣು ತರಕಾರಿಗಳನ್ನು ಸೇವಿಸಬೇಕು. ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಉಪ್ಪು ಸಾಕು. ಈ ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳಲು ಈ ಕೆಳಗಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ ಇದರಿಂದ ನಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

ಶೇಖರಿಸಿದ ಹಾಗೂ ಹೊರಗೆ ಸಂಸ್ಕರಿಸಿದ ಆಹಾರದಲ್ಲಿ ಉಪ್ಪು ಹೆಚ್ಚಾಗಿ ಇರುವುದರಿಂದ ಆದಷ್ಟು ಹೊರಗಿನ ಆಹಾರವನ್ನು ತ್ಯಜಿಸಬೇಕು. ಊಟ ಮಾಡುವಾಗ ಉಪ್ಪನ್ನು ಆದಷ್ಟು ಕದಿನೇ ಬಳಕೆ ಮಾಡುವುದು ಒಳ್ಳೆಯದು . ಉಪ್ಪಿನ ಬದಲಾಗಿ ಸುಗಂಧ ದ್ರವ್ಯಗಳು ಅಂದರೆ ನಿಂಬೆ ರಸ , ವಿನೆಗರ್, ಸಾಂಬಾರು ಪುಡಿ, ಈರುಳ್ಳಿ ಇಂತವುಗಳನ್ನು ಬಳಸಬೇಕು . ಇನ್ನು ಶೇಖರಿಸಿ ಇತ್ತ ಆಹಾರದ ಬದಲಾಗಿ ತಾಜಾ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಇನ್ನು ಹೊರಗೆ ಸಿಗುವಂತಹ ಕರಿದ ತಿಂಡಿಗಳನ್ನು ತಿನ್ನಬಾರದು. ಹಾಗೇ ಮಜ್ಜಿಗೆಯನ್ನು ಸೇವಿಸುವಾಗ ಮಜ್ಜಿಗೆಗೆ ಉಪ್ಪನ್ನು ಬೆರೆಸದೆ ಹಾಗೆಯೇ ಕುಡಿಯಬೇಕು. ಪೊಟ್ಯಾಶಿಯಂ ಅಧಿಕವಾಗಿ ಇರುವ ಬಾಳೆಹಣ್ಣನ್ನು ಸೇವಿಸುವುದರಿಂದ ಶರೀರದಲ್ಲಿ ಸೋಡಿಯಂ ಸ್ಥಾನವನ್ನು ಸಮ ಪ್ರಮಾಣದಲ್ಲಿ ಇಟ್ಟುಕೊಳ್ಳಬಹುದು. ಹಾಗೆ ವಸ್ಸಿಗೆ ತಕ್ಕ ಎತ್ತರ ಹಾಗೂ ತೂಕ ಇರುವಂತೆಯೇ ಎಚ್ಚರ ವಹಿಸಬೇಕು. ಆಹಾರದಲ್ಲಿ ಹೆಚ್ಚಿನ ಉಪ್ಪು ಹಾಕುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಇನ್ನೂ ಧೂಮ ಪಾನ, ಮಧ್ಯಪಾನ ಹಾಗೂ ಹೊರಗಿನ ತಂಪು ಪಾನೀಯಗಳನ್ನು ಸಹ ಸೇವಿಸಬಾರದು. ಈ ಎಲ್ಲಾ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಬಿಪಿ ಹತೋಟಿಗೆ ಬರುವುದು ಹಾಗೂ ಜೀವನ ಸುಗಮ ಕೂಡಾ ಆಗುವುದು.

Leave A Reply

Your email address will not be published.