ಪ್ರಸ್ತುತ ದಿನಗಳಲ್ಲಿ ನಾವು ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಧರಿಸುವವರನ್ನು ನಾವು ಕಾಣುತ್ತಿದ್ದೇವೆ. ಇಂದಿನ ಕಾಲಮಾನಕ್ಕೆ ಇದು ಬಹಳ ಚಿರಪರಿಚಿತವಾದ ಒಂದು ಉಡುಪು. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರು ಎಂಬ ಬೇಧ ಹಾವ ಇಲ್ಲದೆಯೇ ಎಲ್ಲರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಕೆಲವರು ಜೀನ್ಸ್ ಪ್ಯಾಂಟ್ ಅನ್ನು ಅವರವರ ಫ್ಯಾಶನ್ ಗಾಗಿ ಧರಿಸಿದ್ರೆ ಇನ್ನು ಕೆಲವರು ಅವರವರ ಅನುಕೂಲತೆಗೆ ತಕ್ಕ ಹಾಗೆ ಕಂಪರ್ಟ್ ಗಾಗಿ ಧರಿಸುತ್ತಾರೆ. ಸಾಮಾನ್ಯವಾಗಿ ನಾವು ಈ ಜೀನ್ಸ್ ಪ್ಯಾಂಟ್ ನಲ್ಲಿ ನಾಲ್ಕು ಜೇಬುಗಳನ್ನು ಕಾಣುತ್ತೇವೆ. ಹಿಂದೆ ಎರಡು ಜೇಬು ಹಾಗೂ ಮುಂದೆ ಎರಡು ಜೇಬು.. ಅದರಲ್ಲೂ ವಿಶೇಷವಾಗಿ ಮುಂದಿನ ಎರಡು ಜೇಬುಗಳಲ್ಲಿಯೂ ಇನ್ನೂ ಎರಡು ಚಿಕ್ಕ ಜೇಬುಗಳನ್ನು ನಾವು ಕಾಣುತ್ತೇವೆ. ಆದರೆ ಈ ಜೀನ್ಸ್ ಪ್ಯಾಂಟ್ ಅನ್ನು ಧರಿಸುವ ಎಷ್ಟೋ ಜನರಿಗೆ ಇದು ಇರುವುದು ಯಾಕೆ ಹೀಗೆ ಎನ್ನುವುದರ ಬಗ್ಗೆ ತಿಳಿದೇ ಇಲ್ಲ. ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ನಾವು 1800 ವರ್ಷ ಹಿಂದೆ ಹೋದರೆ ಆ ಕಾಲದಲ್ಲಿ ಕವ್ ಬಾಯ್ಸ್ ಸರಪಳಿಗೆ ಚಿಕ್ಕ ಗಡಿಯಾರವನ್ನು ಹಾಕಿ ತಮ್ಮ ಕೋಟಿಗೆ ಸಿಗಿಸಿಕೊಳ್ಳುತ್ತಿದ್ದರಂತೆ. ಪ್ರಪಂಚವನ್ನು ಸುತ್ತಾಡುವ ಇವರು ತಮ್ಮ ಗಡಿಯಾರ ಕೆಳಗಡೆ ಜಾರಿ ಬಿದ್ದು ಒಡೆದು ಹೋಗಬಾರದು ಎಂದು ಈ ರೀತಿಯಾಗಿ ಮಾಡಿಟ್ಟುಕೊಳ್ಳುತ್ತಿದ್ದರಂತೆ. ಇದನ್ನು ಇನ್ನಷ್ಟು ಮತ್ತಷ್ಟು ಸ್ಟೈಲ್ ಆಗಿ ಕಾಣುವಂತೆಯೇ ಮಾಡುವ ಸಲುವಾಗಿ ಲೆವಸ್ ಕಂಪನಿಯ ಜೀನ್ಸ್ ಪ್ಯಾಂಟ್ ಗಳಿಗೆ ಈ ರೀತಿಯ ಚಿಕ್ಕ ಪ್ಯಾಂಟ್ ಜೇಬುಗಳನ್ನು ಜೋಡಿಸಲು ಆರಂಭಿಸಿದರು. ಈ ರೀತಿಯ ಚಿಕ್ಕ ಜೇಬುಗಳನ್ನು ಮೊಟ್ಟ ಮೊದಲ ಬಾರಿಗೆ 1893ರಲ್ಲಿ ಲೆವೀಸ್ ಕಂಪನಿಯು ಈ ರೀತಿಯ ಜೀನ್ಸ್ ಪ್ಯಾಂಟ್ ಗಳನ್ನು ಮಾರುಕಟ್ಟೆಗೆ ತಂದಿತ್ತು.

ಜೀನ್ಸ್ ಪ್ಯಾಂಟ್ ನ ಈ ಚಿಕ್ಕ ಜೇಬಿನಿಂದ ಆಗುವಂತಹ ಪ್ರಯೋಜನಗಳು ಆದ್ರೂ ಏನಪ್ಪಾ? ಅಂತ ನೋಡೋದಾದ್ರೆ , ಈ ಜೇಬುಗಳನ್ನು ಕೇವಲ ಫ್ಯಾಶನ್ ಗಾಗಿ ಮಾತ್ರ ಬಳಕೆ ಮಾಡದೆ ಕೀ ಚೈನ್ , ಸಣ್ಣ ಸರಪಳಿ ಹೊಂದಿರುವ ಗಡಿಯಾರಗಳನ್ನು ಇಡಬಹುದಾಗಿದೆ. ಇನ್ನು ನಾಣ್ಯಗಳು, ಬಸ್ ಟಿಕೆಟ್, ಸಿನಿಮ ಟಿಕೆಟ್ ಗಳನ್ನು ಸಹ ಇಡಬಹುದಾಗಿದೆ. ಹಾಗೆ ಅಂಗಿ ಜೇಬುಗಳಿಂದ ಬೀಳಬಹುದು ಎನ್ನಿಸುವ ವಸ್ತುಗಳನ್ನು ಸಹ ಸುಲಭವಾಗಿ ಈ ಪ್ಯಾಂಟಿನ ಕಿಸೆಯಲ್ಲಿ ಇಟ್ಟುಕೊಳ್ಳಬಹುದು. ಮಹಿಳೆಯರು ಲಿಪ್ ಬಾಮ್, ಲಿಪ್ಸ್ಟಿಕ್, ಚಿಕ್ಕ ಬಾಚಣಿಗೆಯನ್ನು ಸಹ ಇಡಬಹುದು. ಚಾಕು , ಐಪ್ಯಾಡ್, ಪೆನ್ ಡ್ರೈವ್ ಹೀಗೆ ಅತೀ ಚಿಕ್ಕ ವಸ್ತುಗಳು ಅಂದರೆ ಜೇಬಿನಿಂದ ಹೊರ ತೆಗೆಯುವಾಗ ಬೀಳುವಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ಈ ಜೇಬಿನಲ್ಲಿ ಸುರಕ್ಷಿತವಾಗಿ ಇಡಬಹುದು.

Leave a Reply

Your email address will not be published. Required fields are marked *

error: Content is protected !!