ನಾವು ಸಿನಿಮಾ, ಧಾರವಾಹಿ ಕೆಲವೊಮ್ಮೆ ಈ ರೀತಿಯ ಸನ್ನಿವೇಶಗಳನ್ನು ನೋಡಿರುತ್ತೇವೆ ಅಷ್ಟೇ ಯಾಕೆ ನಮ್ಮ ನಿಜ ಜೀವನದಲ್ಲಿ ಕೂಡಾ ನೈಜವಾಗಿ ಪ್ರತ್ಯಕ್ಷವಾಗಿಯೂ ಎಷ್ಟೋ ಬಾರಿ ಪೊಲೀಸರು ಅಪರಾಧಿಗಳನ್ನು ಹಿಡಿಯಲು ತಮ್ಮ ವಾಹನದ ಸೈರನ್ ಸೌಂಡ್ ಮಾಡುತ್ತ ಬರುವುದನ್ನು ನೋಡಿರುತ್ತೇವೆ. ಎಲ್ಲರ ಮನಸಲ್ಲಿ ಕೂಡಾ ಯಾಕೆ ಪೊಲೀಸ್ ವಾಹನ ಅಪರಾಧಿಗಳನ್ನು ಹಿಡಿಯಲು ಹೋಗುವಾಗ ಸೈರನ್ ಶಬ್ಧ ಮಾಡುತ್ತದೆ? ಎನ್ನುವ ಪ್ರಶ್ನೆ ಎಲ್ಲರಿಗೂ ಇದ್ದೆ ಇರುವುದು. ಇದಕ್ಕೆ ತಕ್ಕಂತಹ ಉತ್ತರವನ್ನು ನಾವು ಈ ಲೇಖನದ ಮೂಲಕ ಕಂಡುಕೊಳ್ಳೋಣ ಅಥವಾ ತಿಳಿದುಕೊಳ್ಳೋಣ.

ಮೊದಲಿಗೆ ನಾವು ತಿಳಿದುಕೊಳ್ಳಬೇಕಾದ ಒಂದು ಮುಖ್ಯವಾದ ವಿಷಯ ಎಂದರೆ, ಪೊಲೀಸರೇ ಹೇಳುವ ಹಾಗೆ ಎಲ್ಲ ಅಪರಾಧಿಗಳನ್ನು ಹಿಡಿಯಲು ಹೋಗುವಾಗ ಸೈರನ್ನಿನ ಶಬ್ದ ಮಾಡುತ್ತ ಹೋಗುವುದಿಲ್ಲ. ಯಾವುದೇ ಅಪರಾಧಿಯನ್ನು ಹಿಡಿಯಲು ಹೋಗುವ ಮೊದಲೇ ಆತನಿಗೆ ಎಲ್ಲಿಯೂ ಸಹ ತಪ್ಪಿಸಿಕೊಳ್ಳಲು ಸಾಧ್ಯ ಆಗದ ರೀತಿಯಲ್ಲಿ, ಅಪರಾಧಿ ಯಾರು? ಆತನ ಇತಿಹಾಸವೇನು? ಆ ಅಪರಾಧಿ ಓಡಿ ಹೋಗಲು ಎಷ್ಟು ಸಲ ಯಶಸ್ವಿಯಾಗಿದ್ದಾನೆ? ಇವೆಲ್ಲದರ ಬಗ್ಗೆ ಯೋಚಿಸಿ ಆನಂತರ ಅಪರಾಧಿಯನ್ನು ಹಿಡಿಯುವ ನೀಲಿ ನಕ್ಷೆಯನ್ನು ತಯಾರಿಸಲಾಗುತ್ತದೆ. ಅದು ಸಹ ತುಂಬಾ ಶಾಂತವಾಗಿ ಮತ್ತು ಅಪರಾಧಿಗೆ ಇದರ ಸ್ವಲ್ಪವೂ ಸೂಚನೆ ಸಿಗದಂತೆ ಪ್ಲಾನ್ ಮಾಡಿಕೊಂಡು ಅಪರಾಧಿಯ ಹೆಡೆಮುರಿ ಕಟ್ಟಲಾಗುತ್ತದೆ. ಇನ್ನೂ ಈ ರೀತಿಯ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರ ಮನಸಲ್ಲಿ ಉದ್ಭವ ಆಗುತ್ತದೆ. ಏನೆಂದರೆ , ಪೊಲೀಸರು ಅಪರಾಧಿಯನ್ನು ಹಿಡಿಯಲು ಬರುವಾಗ ಅವರ ಗಾಡಿಯ ಸೈರನ್ ಶಬ್ಧ ಮಾಡುತ್ತಾ ಬರುವುದರಿಂದ ಅಪರಾಧಿಗಳಿಗೆ ಪೊಲೀಸರು ಬರುತ್ತಾ ಇರುವ ಸುಳಿವು ನೀಡಿದ ಹಾಗೆಯೇ ಆಗುವುದಿಲ್ಲವೇ? ಹೀಗಿದ್ದಾಗ ಸೈರನ್ ಶಬ್ಧ ಕೇಳಿಸಿಕೊಂಡು ಅಪರಾಧಿ ಜಾಗೃತನಾಗಿ ಆರಾಮಾಗಿ ಅಲ್ಲಿಂದ ಓಡಿ ಹೋಗುತ್ತಾನೆ ಹಾಗೂ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದ್ದರಿಂದ ಪೊಲೀಸರು ಶಾಂತವಾಗಿ ಬಂದು ಅಪರಾಧಿಗಳನ್ನು ಹಿಡಿಯಬಹುದಲ್ಲ ಎಂದು ಎಷ್ಟೋ ಜನರಿಗೆ ಅನ್ನಿಸುತ್ತದೆ.

ಮುಖ್ಯವಾದ ವಿಷಯ ಎಂದರೆ, ಎಷ್ಟೋ ಸಲ ಈ ರೀತಿ ಆಗಿರುತ್ತದೆ. ಅಪರಾಧಿಯ ಸೂಚನೆ ಪೊಲೀಸರಿಗೆ ಸಿಗುವಷ್ಟರಲ್ಲಿ ಅಪರಾಧಿ ಅಲ್ಲಿಂದ ತಪ್ಪಿಸಿಕೊಳ್ಳಲು ಪರಾರಿ ಆಗಿರುತ್ತಾನೆ. ಆಗ ಪೊಲೀಸರು ಅಪರಾಧಿಯ ಹಿಡಿಯಲು ಬೆನ್ನಟ್ಟಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಪೊಲೀಸರು ತಮ್ಮ ಗಾಡಿಯ ಸೈರನ್ ಶಬ್ಧ ಮಾಡುತ್ತಾರೆ ಈ ಸೈರನ್ ಶಬ್ಧ ಅಲ್ಲಿಯ ಜನರಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಜಾಗೃತಿಯನ್ನು ಮೂಡಿಸುತ್ತದೆ. ಆಗ ಪೊಲೀಸರಿಗೂ ಸಹ ಜನರ ಗುಂಪಿನಿಂದ ಮಾರ್ಗ ತೆಗೆಯಲು ಸುಲಭವಾಗುತ್ತದೆ. ಅಪರಾಧಿಯನ್ನು ಹಿಡಿಯಲು ಮತ್ತು ಅಪರಾಧವೆಸಗಿದ ಸ್ಥಳಕ್ಕೆ ಹೋಗಿ ಮುಟ್ಟಲು ತುಂಬಾ ಸುಲಭವಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾದ ವಿಷಯ ಎಂದರೆ, ಪೊಲೀಸರ ಈ ಸೈರನ್ನಿನ ಶಬ್ಧದಿಂದ ಅಪರಾಧಿಯು ಕೆಲವೊಮ್ಮೆ ಹೆದರಿ ಓಡಿ ಹೋಗುತ್ತಾನೆ. ಇದರಿಂದ ಮುಂದೆ ನಡೆಯುವಂತಹ ದೊಡ್ಡ ದುರ್ಘಟನೆ ಅಥವಾ ಅನಾಹುತಗಳು ತಪ್ಪುತ್ತವೆ ಅಥವಾ ಅವು ಪೂರ್ಣವಾಗದೆ ಅಪರಾಧಿ ಅಲ್ಲಿಂದ ಪಲಾಯನ ಮಾಡುತ್ತಾನೆ. ಈ ಸೈರನ್ನಿನ ಇನ್ನೊಂದು ಲಾಭವೇನೆಂದರೆ, ಎಲ್ಲ ಅಪಾರಧಿಗಳು ನಿಪುಣರಿರುತ್ತಾರೆ ಎಂದಿಲ್ಲ. ಈ ಸೈರನ್ನಿನ ಶಬ್ದ ಅಪರಾಧಿಗಳನ್ನು ಮಾನಸಿಕವಾಗಿ ದುರ್ಬಲರನ್ನಾಗಿಸುತ್ತದೆ. ಆಗ ಕೆಲವು ಅಂಜುಬುರುಕ ಅಪರಾಧಿಗಳು ಅಲ್ಲಿಯೇ ಎಲ್ಲಿಯಾದರೂ ಅವಿತು ಕೊಳ್ಳಲಿಕ್ಕೆ ಪ್ರಯತ್ನ ಮಾಡುತ್ತಾರೆ. ಇದರಿಂದ ಅಂತಹ ಅಪರಾಧಿಗಳು ಬೇಗನೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಎಷ್ಟೋ ಸಲ ಅಪರಾಧಿಗಳನ್ನು ಬೆನ್ನಟ್ಟುವಾಗ ರಸ್ತೆಯ ನಿಯಮಗಳನ್ನೂ ಮುರಿಯಬೇಕಾಗುತ್ತದೆ. ಈ ಸಮಯದಲ್ಲಿ ನಾಗರಿಕರಿಗೂ ಸಹ ಪೊಲೀಸರಿಗೆ ಏನಾದರೂ ಎಮರ್ಜೆನ್ಸಿ ಇರಬಹುದು ಎಂಬ ಅರಿವೂ ಬರುತ್ತದೆ ಈ ಮೂಲಕ ನಾಗರೀಕರು ಪೊಲೀಸರಿಗೆ ಆದಷ್ಟು ಗುಂಪು ಕಟ್ಟದೆ ಅವರನ್ನು ಅರಿತುಕೊಂಡು ಮುಂದೆ ಸಾಗಲು ಮಾರ್ಗ ಮಾಡಿ ಕೊಡಲು ಈ ಸೈರನ್ ಶಬ್ಧ ಅನುಕೂಲ ಆಗುವುದು. ಈ ಎಲ್ಲ ಕಾರಣಗಳಿಂದಾಗಿ ಪೊಲೀಸರು ಅಪರಾಧಿಗಳನ್ನು ಹಿಡಿಯಲು ಹೋಗುವಾಗ ತಮ್ಮ ವಾಹನದ ಸೈರನ್ನಿನ ಶಬ್ದ ಮಾಡುತ್ತಾ ಹೋಗುತ್ತಾರೆ.

Leave a Reply

Your email address will not be published. Required fields are marked *