ಮುಟ್ಟಿನ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

0 102

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆಯೇ ಇದಕ್ಕೆ ಕಾರಣವಿರಬಹುದು. ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇನ್ಯಾವುದೋ ಇದರ ಮೇಲೆ ಪರಿಣಾಮ ಬೀಳಬಹುದು. ಕೆಲವೊಮ್ಮೆ ಅನಿಯಮಿತವಾದರೆ ಪರವಾಗಿಲ್ಲ. ಆದರೆ ಸತತವಾಗಿ ಮುಟ್ಟು ಸರಾರ‍ಯದ ಸಮಯಕ್ಕೆ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. ಅದು ಅಲಕ್ಷಿಸುವ ವಿಚಾರವಲ್ಲ. ಆದರೆ ಎಲ್ಲೋ ಅಪರೂಪಕ್ಕೆ ಹೀಗೆಲ್ಲ ಆಗುತ್ತಿದ್ದರೆ ಮನೆ ಮದ್ದು ಸಾಕು.

ಕ್ಯಾರೆಟ್‌: ಕ್ಯಾರೆಟ್‌ನಲ್ಲಿ ಹಾರ್ಮೋನ್‌ಗಳ ಸಮತೋಲನ ಕಾಪಾಡುವ ಶಕ್ತಿ ಇದೆ. ಜ್ಯೂಸ್‌ ಮೂಲಕ ಸೇವಿಸಿ ಅಥವಾ ಹಾಗೆ ಸೇವಿಸಿ.ಬಾದಾಮಿ: ನಿತ್ಯ ಬಾದಾಮಿ ಸೇವಿಸುವುದರಿಂದ ನಿಮ್ಮ ಋುತುಚಕ್ರ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.

ಅಲೋವೇರಾ: ಇದರ ರಸವನ್ನು ಸೇವಿಸುವುದರಿಂದ ಹಾರ್ಮೋನ್‌ಗಳಲ್ಲಿ ಸಮತೋಲನ ಉಂಟಾಗುತ್ತದೆ. ಇದರ ಪರಿಣಾಮ ಮುಟ್ಟು ಸಮರ್ಪಕವಾಗಿ ಆಗುತ್ತದೆ. ಪಪ್ಪಾಯ: ಹೆಚ್ಚೆಚ್ಚು ಪಪ್ಪಾಯ ಹಣ್ಣು ಸೇವಿಸಿ. ಮುಟ್ಟಿನ ಸಮಸ್ಯೆಯಿಂದ ಪಾರಾಗಲು ಇದು ಅತ್ಯುತ್ತಮ. ಬೆಳಗಿನ ಹೊತ್ತು ಸೇವಿಸಿದರೆ ಒಳ್ಳೆಯದು.ಅರಿಷಿಣ: ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನ ಜತೆ ಅರಿಷಿಣದ ಪುಡಿ ಸೇರಿಸಿಕೊಂಡು ಕುಡಿಯಿರಿ. ಬೆಚ್ಚಗಿನ ಹಾಲಿನ ಜತೆಯೂ ಸೇವಿಸಬಹುದು. ಅದರಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಇದು ಒಳಗೊಂಡಿದ್ದು, ಹಾರ್ಮೊನ್‌ಗಳನ್ನು ಬ್ಯಾಲೆನ್ಸ್‌ ಮಾಡುತ್ತದೆ.

ಎಳ್ಳು ಮತ್ತು ಬೆಲ್ಲಬಿಳಿ ಅಥವಾ ಕಪ್ಪು ಎಳ್ಳನ್ನು ಚೆನ್ನಾಗಿ ಹುರಿದು ಪುಡಿ ಮಾಡಿಡಿ. ದಿನಾ ಬೆಳಗ್ಗೆ ಇದನ್ನು ಬೆಲ್ಲದ ಜೊತೆ ಮಿಕ್ಸ್ ಮಾಡಿ ಉಂಡೆ ಕಟ್ಟಿ ತಿನ್ನಿ. ಈ ರೀತಿ ಪ್ರತೀದಿನ ಮಾಡಿ. ಇದು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ಪ್ರಕೃತಿದತ್ತ ಆಹಾರ ಸೇವನೆ ಅತ್ಯಗತ್ಯ. ಅತಿ ಖಾರ, ಎಣ್ಣೆಯ ಪದಾರ್ಥಗಳನ್ನು ವರ್ಜಿಸಬೇಕು. ಹಣ್ಣು ತರಕಾರಿಗಳ ಸೇವನೆ ಹೆಚ್ಚಿನ ಪ್ರಮಾಣದಲ್ಲಿರಬೇಕು.ಜೀವಸತ್ವಗಳು, ಖನಿಜಗಳು, ಪ್ರೊಟೀನ್ ಹಾಗೂ ಕಬ್ಬಿಣದ ಅಂಶಗಳು ಹೇರಳವಾಗಿರುವ ಆಹಾರಗಳನ್ನು ಸೇವಿಸಬೇಕು.

ಶುಂಠಿಯು ನೈಸರ್ಗಿಕ ನೋವು ನಿವಾರಕವಾಗಿದ್ದು ಆಹಾರದಲ್ಲಿ ಬಳಕೆ ಮಾಡಬೇಕು. ಕುದಿಸಿದ ಜೀರಿಗೆ ನೀರನ್ನು ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ.
ಮುಟ್ಟಿನ ದಿನ ಹತ್ತಿರವಿರುವಾಗ ಪಪ್ಪಾಯಿ ಹಣ್ಣು ಸೇವಿಸುವುದರಿಂದ ಸಮಯಕ್ಕೆ ಸರಿಯಾಗಿ ಮುಟ್ಟನ್ನು ಹೊಂದಬಹುದು.ಮುಟ್ಟಿನ ಸಮಯದಲ್ಲಿ ಡಿಹೈಡ್ರೇಷನ್ ಆಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಜ್ಯೂಸ್ ಸೇವನೆಯೂ ಮುಖ್ಯ.ಕೋಲ್ಡ್ ಎಬ್ಡಮನ್ ಪ್ಯಾಕ್ ಸಹ ನೋವು ಕಡಿಮೆ ಮಾಡುವುದರೊಂದಿಗೆ ಸರಿಯಾದ ಪ್ರಮಾಣದಲ್ಲಿ ರಕ್ತಸ್ರಾವವಾಗುವಂತೆ ಮಾಡುತ್ತದೆ.

ಅಕ್ಯುಪಂಕ್ಚರ್ ಮಾಡಿಸಿಕೊಳ್ಳುವುದರಿಂದ ಅನಿಯಮಿತ ಮುಟ್ಟು ತಡೆದು ಪ್ರತಿ ತಿಂಗಳಿಗೊಮ್ಮೆ ಮುಟ್ಟನ್ನು ಹೊಂದಲು ಸಾಧ್ಯ.ತಣ್ಣೀರಿನ ಕಟಿ ಸ್ನಾನದಿಂದ ಹಾರ್ಮೋನುಗಳ ಸಮತೋಲನವಾಗಿ ಮುಟ್ಟಿನ ತೊಂದರೆಗಳನ್ನು ನಿವಾರಿಸಬಹುದು.ಆ ಸಂದರ್ಭದಲ್ಲಿ ಆಗುವಂತಹ ಮನಸ್ಸಿನ ಚಂಚಲತೆಯನ್ನು ನಿವಾರಿಸಲು ಯೋಗ, ಧ್ಯಾನವು ಸಹಾಯ ಮಾಡುತ್ತದೆ.ಹೊಟ್ಟೆಯ ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮಗಳನ್ನು ಪ್ರತಿದಿನ ಮಾಡಬೇಕು.
ಲ್ಯಾವೆಂಡರ್ ಎಣ್ಣೆಯನ್ನು ನೋವಿನ ಸಂದರ್ಭದಲ್ಲಿ ಹಚ್ಚುವುದರಿಂದ 10ರಿಂದ 15 ನಿಮಿಷಗಳಲ್ಲಿ ನೋವಿಗೆ ಮುಕ್ತಿ ದೊರೆಯುವುದು.

ಮಹಿಳೆಯರು ಆರೋಗ್ಯಕರವಾಗಿರಲು ನಿಯಮಿತವಾದ ಮುಟ್ಟು ಅವಶ್ಯಕ. ಆದರೆ ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಹೆಚ್ಚಿನ ಮಹಿಳೆಯರು ಬಳಲುತ್ತಿದ್ದಾರೆ. ಒಂದು ವರ್ಷದಲ್ಲಿ ಮಹಿಳೆ ಸಾಮಾನ್ಯವಾಗಿ 12-13 ಬಾರಿ ಮುಟ್ಟಾಗುತ್ತಾಳೆ. ಕೆಲವರಿಗೆ 9 -10 ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ರೀತಿಯಲ್ಲಿ ಮುಟ್ಟು ಆಗುತ್ತಿದ್ದರೆ ಹೆದರಬೇಕಾಗಿಲ್ಲ. ಆದರೆ ತಿಂಗಳಿಗೆ 2 ಬಾರಿ ಅಥವಾ ಎರಡು ತಿಂಗಳಾದರೂ ಮುಟ್ಟು ಆಗದಿದ್ದರೆ ವೈದ್ಯರನ್ನು ಕಂಡು ಸಲಹೆ ಪಡೆಯುವುದು ಅವಶ್ಯಕ.

Leave A Reply

Your email address will not be published.