ಖಾಲಿ ಹೊಟ್ಟೆಯಲ್ಲಿ ಸೀಬೆ ಅಥವಾ ಪೇರಳೆ ಎಲೆ ಸೇವನೆಯಿಂದ ಶರೀರಕ್ಕೆ ಎಂತ ಲಾಭವಿದೆ ನೋಡಿ

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಖಾಲಿ ಹೊಟ್ಟೆಯಲ್ಲಿ ಸೀಬೆ ಅಥವಾ ಪೇರಲ ಎಲೆಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೇರಲ ಎಲೆಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಫಾಸ್ಫರಸ್, ಪೊಟ್ಯಾಸಿಯಮ್, ಪ್ರೊಟೀನ್ ಮುಂತಾದ ಹಲವು ಪೋಷಕಾಂಶಗಳಿವೆ. ಇದರ ಸೇವನೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದು ಸುಮಾರು 80% ನಷ್ಟು ನೀರು ಮತ್ತು ಫೈಬರ್ಗಳಿಂದ ಸಮೃದ್ಧವಾಗಿರುವ ಕಾರಣ, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಎಲೆಗಳನ್ನು ಬೆಳಗ್ಗೆ ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ. ಹಾಗಾದ್ರೆ ಇದರಿಂದ ಏನೆಲ್ಲಾ ಪ್ರಯೋಜನವಿದೆ ಎನ್ನುವುದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪೇರಲೆ ಎಲೆಯಲ್ಲಿ ಇರುವ ಪೊಟ್ಯಾಸಿಯಮ್ ರಕ್ತದ ಒತ್ತಡವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಇದು ಸುಮಾರು 80% ನಷ್ಟು ನೀರು ಮತ್ತು ಫೈಬರ್ಗಳಿಂದ ಸಮೃದ್ಧವಾಗಿರುವ ಕಾರಣ, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಎಲೆಗಳನ್ನು ಬೆಳಗ್ಗೆ ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ. ಅವುಗಳೆಂದರೆ, ಉಸಿರಾಟದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಪೇರಲೆ ಎಲೆಗಳ ಸೇವನೆಯು ಉಸಿರಾಟದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಪೇರಲೆ ಎಲೆಗಳು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿವೆ. ಬ್ರಾಂಕೈಟಿಸ್ ಸಮಸ್ಯೆ ಇದ್ದಲ್ಲಿ ಪೇರಲೆ ಎಲೆಗಳ ಸೇವನೆಯು ಉತ್ತಮ ಪ್ರಯೋಜನ ನೀಡುತ್ತದೆ. Revista do Instituto de Medicina Tropical de Sao Paulo ದಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಪೇರಲೆ ಎಲೆಗಳ ಸಾರಗಳು ಅತಿಸಾರದ ಸಾಮಾನ್ಯ ಕಾರಣವಾದ ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಪೇರಲೆ ಎಲೆಯ ಚಹಾವನ್ನು ಸೇವಿಸುವುದರಿಂದ ಅತಿಸಾರದಿಂದ ಬಳಲುತ್ತಿರುವ ಜನರು ಹೊಟ್ಟೆ ನೋವು, ಕಡಿಮೆ ಮತ್ತು ಕಡಿಮೆ ನೀರಿನಂಶ ಸೇರಿದಂತೆ ಹಲವು ಸಮಸ್ಯೆಗೆ ಪರಿಹಾರ ನೀಡುತ್ತದೆ. ಒಂದು ಕಪ್ ಕುದಿಯುವ ನೀರಿಗೆ ಪೇರಲೆ ಎಲೆಗಳನ್ನು ಹಾಕಿ ಕುದಿಸಿ, ಅದರ ನೀರನ್ನು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ.

ಪೇರಲ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಗ್ಯಾಸ್ಟ್ರಿಕ್ ಅಲ್ಸರ್ ತಡೆಯಲು ಇದು ಸಹಕಾರಿ. ಇದರೊಂದಿಗೆ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಪೇರಲೆ ಎಲೆಯ ಚಹಾವು ಹೊಟ್ಟೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಹೆಚ್ಚಿದ್ದರೆ ಆರೋಗ್ಯದ ಸಮಸ್ಯೆಗಳಿಗೆ ವಿಶೇಷವಾಗಿ ಹೃದಯದ ಸಮಸ್ಯೆಗೆ ಕಾರಣವಾಗಬಹುದು.

ನ್ಯೂಟ್ರಿಷನ್ ಮತ್ತು ಮೆಟಾಬಾಲಿಸಮ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಪೇರಲೆ ಎಲೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುದರಿಂದ ಈ ಕೊಬ್ಬು ಕಡಿಮೆಯಾಗುತ್ತದೆ. ಈ ಪೇರಲೆ ಎಲೆಗಳು ಮಧುಮೇಹದ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಸುಕ್ರೋಸ್ ಮತ್ತು ಮಾಲ್ಟೋಸ್  ಎನ್ನುವ ಎರಡು ರೀತಿಯ ಸಕ್ಕರೆಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

ಪೇರಲ ಎಲೆಗಳು ಅಲರ್ಜಿ ನಿವಾರಕ ಗುಣಗಳನ್ನು ಹೊಂದಿವೆ. ಕೆಮ್ಮು, ಸೀನುವಿಕೆ ಮತ್ತು ತುರಿಕೆ ಮುಂತಾದ ಅಲರ್ಜಿಯ ಲಕ್ಷಣಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ನೆನಪಿಡಿ ಯಾವಾಗಲೂ ಪೇರಲ ಎಲೆಗಳನ್ನು ತೊಳೆದು ಸೇವಿಸಬೇಕು. ಹಳೆಯ ಎಲೆಗಳನ್ನು ಬಳಸಬಾರದು. ಮಾತ್ರವಲ್ಲ ಇದನ್ನು ಅತಿಯಾಗಿ ತಿನ್ನುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಹಾಗಾಗಿ ಯಾವುದೇ ಆದರೂ ಹಿತವಾಗಿ ಮತ್ತು ಮಿತವಾಗಿದ್ದರೆ ಒಳಿತು.

ನಿಮ್ಮ ಹೊಟ್ಟೆಯ ಸುತ್ತ ಸೇರಿರುವ ಹೆಚ್ಚುವರಿ ಕೊಬ್ಬನ್ನ ಹೊರಹಾಕಲು ಇದು ಸಹಾಯ ಮಾಡುತ್ತದೆ. ಹೌದು ಪೇರಲೆ ಎಲೆ ತೂಕ ಇಳಿಸಲು ಸಹಕಾರಿ ಎನ್ನಲಾಗುತ್ತದೆ. ಇದನ್ನ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಪೇರಲೆ ಎಲೆಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಸಕ್ಕರೆಯಾಗಿ ಬದಲಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ, ತ್ವರಿತ ತೂಕ ಇಳಿಸಲು ಸಹಕಾರಿ. ಹಾಗೂ ಪೇರಲೆ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಮತ್ತು ಕಬ್ಬಿಣಾಂಶವಿದೆ ಮತ್ತು ಪೇರಲೆ ಎಲೆಗಳ ಕಷಾಯವು ಕೆಮ್ಮು ಮತ್ತು ಶೀತವನ್ನು ನಿವಾರಿಸಲು ಬಹಳ ಸಹಾಯಕ.

ಏಕೆಂದರೆ ಇದು ಲೋಳೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಇದು ಉಸಿರಾಟದ ಪ್ರದೇಶ, ಗಂಟಲು ಮತ್ತು ಶ್ವಾಸಕೋಶಗಳನ್ನು ಸೋಂಕುರಹಿತಗೊಳಿಸುತ್ತದೆ. ಇಷ್ಟೇ ಅಲ್ಲದೆ ಮೊಡವೆಗಳನ್ನು ಕಡಿಮೆ ಮಾಡುತ್ತದೆ ಏಕೆಂದರೆ ಅವುಗಳ ಹೆಚ್ಚಿನ ವಿಟಮಿನ್ ಸಿ ಇದ್ದು, ಇದನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *