BSNL ಗ್ರಾಹಕರಿಗೆ ಬಹುದಿನದ ನಂತರ ಬಂಪರ್ ಕೊಡುಗೆ ಮಿಸ್ ಮಾಡದೇ ಇದರ ಲಾಭ ಪಡೆದುಕೊಳ್ಳಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆ ಗ್ರಾಹಕರನ್ನು ಸೆಳೆಯಲು ದಿನದಿಂದ ದಿನಕ್ಕೆ ಆಕರ್ಷಕ ಆಫರ್ ಗಳನ್ನು ನೀಡುತ್ತದೆ. ಇತ್ತ ಟೆಲಿಕಾಂ ಮಾರುಕಟ್ಟೆಯಲ್ಲಂತು ಸ್ಪರ್ಧೆ ಹೆಚ್ಚಾಗುತ್ತಿದೆ. ಎಲ್ಲಾ ಕಂಪನಿಗಳು ಮುಂಬರುವ ದಿನಗಳಲ್ಲಿ ಅಗ್ಗದ ಯೋಜನೆಗಳೊಂದಿಗೆ ಬರಲಿವೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಸದ್ಯ ಬಿಎಸ್‌ಎನ್‌ಎಲ್ ಅಗ್ಗದ ದರದಲ್ಲಿ ಫಸ್ಟ್‌ ರೀಚಾರ್ಜ್ ಆಯ್ಕೆಗಳನ್ನು ಹೊರಡಿಸಿದೆ. ಇದರಲ್ಲಿ ಆಕರ್ಷಕ ಬೆನಿಫಿಟ್ ಗಳನ್ನು ನೀಡಲಾಗಿದೆ. ಈ ಲೇಖನದಲ್ಲಿ ನಾವು BSNL ತನ್ನ ಗ್ರಾಹಕರಿಗೆ ನೀಡಿದ ಹೊಸ ಆಫರ್ ಏನೂ ಎನ್ನುವುದರ ಕುರಿತಾಗಿ ತಿಳಿದುಕೊಳ್ಳೋಣ.

ಇದೀಗ ಬಿಎಸ್ ಎನ್ ಎಲ್ ಗ್ರಾಹಕರಿಗೆ ಹೊಸ ಆಪರ್ ಒಂದನ್ನು ನೀಡಿದೆ. ಮತ್ತೆ ತನ್ನ ಪ್ಲ್ಯಾನ್ ಗಳ ಬೆಲೆಯನ್ನು ಇಳಿಸಿದೆ. ತನ್ನ ಹೊಸ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಕೇವಲ 399 ರೂಪಾಯಿಗೆ 80 ದಿನಗಳ ವ್ಯಾಲಿಡಿಟಿ ಕೊಡಲಾಗಿದೆ. ದಿನ ಒಂದಕ್ಕೆ 1gb ಡಾಟಾ ನೀಡುತ್ತಿದ್ದು, ಅನ್ ಲಿಮಿಟೆಡ್ ಕಾಲ್ಸ್ ಆಪರ್ ಹಾಗೂ ನಿತ್ಯ 100 ಎಸ್ಎಂಎಸ್ ಗಳನ್ನು ಫ್ರೀ ನೀಡಿದೆ. ಗ್ರಾಹಕರನ್ನು ಸೆಳೆಯಲು ಈ ಹೊಸ ಪ್ಲ್ಯಾನ್ ಅನ್ನು ನೀಡಲಾಗಿದೆ. ಬಿಎಸ್ ಎನ್ ಎಲ್ ಪ್ಲ್ಯಾನ್ ಗಳನ್ನು ನೋಡಿದ ಇತರೆ ಕಂಪನಿಗಳು ಕೂಡ ಹೊಸ ಹೊಸ ಆಫರ್ ಗಳನ್ನು ನೀಡಲು ಮುಂದಾಗಿವೆ.

ಕಳೆದ ತಿಂಗಳಷ್ಟೇ ಪ್ರಿಪೇಡ್ ಪ್ಲ್ಯಾನ್ ಗಳಲ್ಲಿ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ ಐಡಿಯಾ ಕಂಪನಿಗಳು ಗ್ರಾಹಕರಿಗೆ ಶಾಕ್ ಕೊಟ್ಟಿದ್ದವು. ಇದ್ದಕ್ಕಿದ್ದಂತೆ ತನ್ನ ರಿಚಾರ್ಜ್ ಪ್ಲಾನ್ ಗಳಲ್ಲಿ ಬದಲಾವಣೆಗಳನ್ನು ಮಾಡಿದ್ದವು. ರಿಚಾರ್ಜ್ ಪ್ಲಾನ್ ಗಳ ರೇಟ್ ಅನ್ನು ಏರಿಕೆ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಇದರಿಂದ ಗ್ರಾಹಕರು ಬೇಸರಗೊಂಡಿದ್ದರು.

ವೊಡಾಫೋನ್ ಐಡಿಯಾ ಕೂಡ ಗ್ರಾಹಕರಿಗೆ ಹೊಸ ಪ್ಲ್ಯಾನ್ ನೀಡಿದ್ದು, 399 ರೂಪಾಯಿಗೆ 1.5 ಜಿಬಿ ಡೈಲಿ ಡಾಟಾ ನೀಡಿದೆ. ಇದರೊಂದಿಗೆ 42 ದಿನ ವ್ಯಾಲಿಡಿಟಿ ಹಾಗೂ ದಿನಕ್ಕೆ 100 ಎಸ್ಎಂಎಸ್ ಗಳನ್ನು ಫ್ರೀ ಹಾಗೂ ಅನ್ ಲಿಮಿಟೆಡ್ ಕಾಲ್ಸ್ ಆಪರ್ ನೀಡಿದೆ. ಇನ್ನು ಏರ್ಟೆಲ್ 359 ರೂಪಾಯಿಗೆ 28 ದಿನ ವ್ಯಾಲಿಡಿಟಿ, 2 ಜಿಬಿ ಡೈಲಿ ಡಾಟಾ ಹಾಗೂ 100 ಎಸ್ಎಂಎಸ್ ಗಳನ್ನು ಫ್ರೀ ನೀಡಿದೆ. ಇದರೊಂದಿಗೆ ಅಪೊಲೊ 24×7 ಸರ್ವೀಸ್ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳೊಂದಿಗೆ ಅಮೆಜಾನ್ ಪ್ರೇಮ್ ವೀಡಿಯೊ ಮೊಬೈಲ್ ಆವೃತ್ತಿಗೆ ಪ್ರವೇಶವನ್ನು ನೀಡಿದೆ.

ಉಚಿತ ಆನ್‌ಲೈನ್ ಕೋರ್ಸ್‌ಗಳು, ಫಾಸ್ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ಉಚಿತ ಹಲೋ ಟ್ಯೂನ್‌ಗಳು ಮತ್ತು ವಿಂಕ್ ಮ್ಯೂಸಿಕ್ ಆಫರ್ ಕೊಟ್ಟಿದೆ. ಇನ್ನು ಜಿಯೋ ರೂ 239 ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು 28 ದಿನಗಳ ವ್ಯಾಲಿಡಿಟಿ ಹೊಂದಿದೆ. 1.5GB ದೈನಂದಿನ ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *