ಈ ಫೋಟೋದಿಂದ ಗಂಡನಿಗೆ ಇದ್ದ ಮತ್ತೊಂದು ಸಂಬಂಧ ಕಂಡುಹಿಡಿದ ಹೆಂಡ್ತಿ ಅದು ಹೇಗೆ ಗೋತ್ತಾ

0 0

ಗಂಡ ಮತ್ತು ಹೆಂಡತಿ ಜೋಡಿ ಏಳೇಳು ಜನ್ಮಗಳ ಜೋಡಿ ಎಂದು ಹೇಳಲಾಗುತ್ತದೆ. ಆದರೆ ಇಂದಿನ ಕಾಲದಲ್ಲಿ, ಈ ಜೋಡಿ ಒಂದು ಜನ್ಮಕ್ಕೆ ಚೆನ್ನಾಗಿ ಇದ್ದರೆ ಸಾಕು ಎನ್ನಿಸಿಬಿಟ್ಟಿದೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಒಳ್ಳೆಯದ್ದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ನಿಮ್ಮ ಸುತ್ತಲಿನ ಶಕ್ತಿಯು ಇವರ ಸಂಬಂಧದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದರೆ ಇಲ್ಲಿ ಒಬ್ಬಳು ಹೆಂಡತಿ ಅನುಮಾನ ಬಂದು ಹೊಟೆಲ್ ನಲ್ಲಿದ್ದ ಗಂಡ ಕಳುಹಿಸಿದ ಫೋಟೋದಿಂದ ಆತನ ಮತ್ತೊಂದು ಸಂಬಂಧದ ಬಗ್ಗೆ ಕಂಡುಹಿಡಿದಿದ್ದಾಳೆ. ಹೇಗೆ ಗೊತ್ತಾ..?

ಸಾಮಾನ್ಯವಾಗಿ ಕೆಲವರು ತಾವು ಮಾಡುವ ತಪ್ಪುಗಳು, ತಪ್ಪು ದಾರಿ ತುಳಿಯುವುದು ಮತ್ತೊಬ್ಬರಿಗೆ ಗೊತ್ತಾಗಬಾರದು ಅಥವಾ ಗೊತ್ತಾಗುವುದಿಲ್ಲ ಎನ್ನುವ ಭ್ರಮೆಯಲ್ಲಿಯೇ ಬದುಕುತ್ತಿರುತ್ತಾರೆ. ಆದರೆ ತಾವಾಗಿಯೇ ಮಾಡೋ ಕೆಲಸದಿಂದಲೇ ತಮ್ಮ ತಪ್ಪುಗಳನ್ನು ಎತ್ತಿ ತೋರಿರುತ್ತಾರೆ. ಅಂತಹುದೇ ಘಟನೆಯೊಂದು ಇಲ್ಲಿ ನಡೆದಿದ್ದು. ಹೊಟೆಲ್ ನಲ್ಲಿ ಇದ್ದ ಗಂಡ ತನ್ನ ಹೆಂಡತಿಗೆ ಕಳುಹಿಸಿದ ಫೋಟೋದಿಂದಾಗಿ ಆತನ ಮತ್ತೊಂದು ಸಂಬಂಧ ಬಯಲಾಗಿದೆ. ಆದರೆ ಇನ್ನೊಂದು ಅರ್ಥದಲ್ಲಿ ಬಯಲಾಗಿದೆ ಎನ್ನುವುದಕ್ಕಿಂತ ಪತ್ನಿಯೇ ಇದೊಂದು ಫೋಟೋ ನೋಡಿ ಗಂಡನ ಮತ್ತೊಂದು ಸಂಬಂಧದ ಬಗ್ಗೆ ಹುಡುಕಿ ಇದೀಗ ಆತನಿಂದ ದೂರವಾಗಿದ್ದಾಳೆ ಎಂದರೇ ನಂಬಲೇ ಬೇಕು.

ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡು ಅದನ್ನು ಹುಡುಕಿ ಇದನ್ನು ಹುಡುಕಿ ಎಂದೆಲ್ಲಾ ಕೇಳುವ ಕೆಲ ಪೋಸ್ಟ್ ಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿ ಮಹಿಳೆಯೊಬ್ಬರು ಅದರಲ್ಲಿಯೂ ಸ್ವತಃ ಪತ್ನಿಯೇ ಗಂಡನ ಈ ಫೋಟೋಗಳನ್ನು ಹಂಚಿಕೊಂಡು ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ಗಂಡನ ಈ ಎರೆಡು ಫೋಟೋಗಳನ್ನು ಪೋಸ್ಟ್ ಮಾಡಿರುವ ಪತ್ನಿ ಈ ಫೋಟೋಗಳಿಂದಲೇ ನನ್ನ ಗಂಡನ ನಿಜವಾದ ಮುಖ ಏನೆಂದು ತಿಳಿಯಿತು. ನಂತರ ಆತನಿಂದ ದೂರವಾಗಿದ್ದೀನಿ. ಈ ಫೋಟೋಗಳನ್ನು ನೋಡಿದರೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದ್ದಾಳೆ. ಇತ್ತ ಆ ಮಹಿಳೆಯ ಫೋಟೋಗೆ ಬರ್ಜರಿಯಾಗಿಯೇ ಕಮೆಂಟ್ ಮಾಡಿರುವ ನೆಟ್ಟಿಗರು ತಮಗೆ ಅನಿಸಿದ್ದು ತಮ್ಮ ಕಣ್ಣಿಗೆ ಕಂಡದ್ದು ಹೀಗೆ ಸಾಕಷ್ಟು ವಿಚಾರಗಳನ್ನು ಹಾಗೂ ಫೋಟೋದಲ್ಲಿ ಅನುಮಾನ ಮೂಡಿಸುವಂತಹ ಸಾಕಷ್ಟು ಸಂಗತಿಗಳನ್ನು ಕಮೆಂಟ್ ಗಳನ್ನು ಮಾಡಿದ್ದಾರೆ.

ಕೊನೆಗೆ ಆ ಮಹಿಳೆಯೇ ಎಲ್ಲರ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡಿ ತನಗೆ ಈ ಫೋಟೋದಿಂದ ತನ್ನ ಗಂಡನ ಮತ್ತೊಂದು ಸಂಬಂಧ ಹೇಗೆ ತಿಳಿಯಿತು ಎಂದು ಹೇಳಿದ್ದಾಳೆ. ಈ ಫೋಟೋ ನೋಡಿದ ಕೆಲವರು ಕನ್ನಡಿಯ ಮುಂದೆ ಮಹಿಳೆಯರು ಬಳಸುವ ಬಾಡಿ ವಾಶ್ ಇದೆ. ಕನ್ನಡಿಯ ಮುಂದೆ ಹೇರ್ ಸ್ಟ್ರೈಟ್ನರ್ ಇದೆ. ಎಂದರೆ ಮತ್ತೆ ಕೆಲವರು ಕೆಲ ಹೊಟೆಲ್ ಗಳಲ್ಲಿ ಹೇರ್ ಸ್ಟ್ರೇಟ್ನರ್ ಕೊಡುತ್ತಾರೆ. ಆದರೆ ವಾರ್ಡ್ ರೋಬ್ ಒಳಗೆ ಇಟ್ಟಿರುತ್ತಾರೆ. ಅದನ್ನು ಕನ್ನಡಿ ಮುಂದೆ ಇಟ್ಟಿರುವುದಿಲ್ಲ. ಇನ್ನು ಮತ್ತೆ ಕೆಲವರು ಆತನ ಬೆರಳಲ್ಲಿ ಮದುವೆಯ ಉಂಗುರ ಕಾಣುತ್ತಿಲ್ಲ. ಹೀಗೆ ನೂರಾರು ರೀತಿಯ ಪ್ರತಿಕ್ರಿಯೆ ಗಳು ಈ ಫೋಟೋಗೆ ಬಂದವು‌. ಕೊನೆಗೆ ಈ ಎಲ್ಲಾ‌ ಕಮೆಂಟ್ ಗಳಿಗೆ ಆ ಮಹಿಳೆಯೇ ಪ್ರತಿಕ್ರಿಯೆ ಕೊಟ್ಟು ಉತ್ತರಿಸಿದ್ದಾಳೆ.

“ಈ ಫೋಟೋ ನನ್ನ ಗಂಡ ಜಾಕೆಟ್ ಹೇಗಿದೆ ಎಂದು ಕೇಳಲು ನನಗೆ ಕಳುಹಿಸಿದ ಫೋಟೋ. ಆದರೆ ಇದರಲ್ಲಿ ಮೊದಲು ನಾನು ಹೇರ್ ಸ್ಟ್ರೇಟ್ನರ್ ಅನ್ನು ಕನ್ನಡಿ ಮುಂದೆ ನೋಡಿದೆ. ಮಹಿಳೆಯರು ಬಳಸುವ ವಸ್ತು ಅಲ್ಲಿ ಏಕಿದೆ ಎಂದು ಅನುಮಾನ ಬಂತು. ನಂತರ ಅಲ್ಲಿಯೇ ನೆಲದ ಮೇಲೆ ಹ್ಯಾಂಡ್ ಬ್ಯಾಗ್ ಒಂದು ಕಂಡಿತು ಅದು ನನ್ನ ಗಂಡನದ್ದಲ್ಲ. ಈ ಬಗ್ಗೆ ನಾನು ನೇರವಾಗಿಯೇ ಆತನನ್ನು ಪ್ರಶ್ನೆ ಮಾಡಿದೆ. ಆಗ ಆತ ಇದು ನನ್ನ ರೂಮ್ ಅಲ್ಲ ಎಂದ. ಬೇರೆಯವರ ರೂಮ್ ನಲ್ಲಿ ಫೋಟೋ ಏಕೆ ತೆಗೆದುಕೊಂಡಿದ್ದೀಯಾ ಎಂದು ಪ್ರಶ್ನಿಸಿದೆ. ಆಗ ಆತನ ಬಳಿ ಉತ್ತರವಿರಲಿಲ್ಲ. ಇಬ್ಬರ ನಡುವೆ ಈ ಬಗ್ಗೆ ಚರ್ಚೆಯಾಗಿ ನನಗೆ ಎಲ್ಲವೂ ಗೊತ್ತಾಯಿತು. ಇದೇ ಕಾರಣಕ್ಕೆ ನಾನು ಆತನಿಂದ ದೂರವಾದೆ ಎಂದು ತಿಳಿಸಿದ್ದಾರೆ..

ಹೆಂಡತಿಯರು ಅನುಮಾನ ಪಡುತ್ತಾರೆ ಎನ್ನುವ ಮಾತು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಆ ರೀತಿ ಅನುಮಾನ ಪಟ್ಟಿದ್ದರಿಂದ ಗಂಡನ ಮತ್ತೊಂದು ಸಂಬಂಧವೇ ಬಯಲಾಯ್ತು ಎಂದರೆ ನಿಜಕ್ಕೂ ಆಶ್ಚರ್ಯವೇ ಸರಿ. ಮನುಷ್ಯನಿಗೆ ಎಲ್ಲರಿಗೂ ಎಲ್ಲಾ ಗುಣಗಳು ಇರಬೇಕು ಒಳ್ಳೆಯದೇ ಹಾಗಂತ ಅದೇ ಜೀವನವಾಗಬಾರದು. ಆದರೆ ಎಲ್ಲವೂ ಮಿತಿಯಲ್ಲಿದ್ದರೆ ಒಳ್ಳೆಯದು. ಎಲ್ಲಿ ಯಾವಾಗ ಯಾವ ರೀತಿ ಆ ಗುಣವನ್ನು ಉಪಯೋಗಿಸಿಕೊಳ್ಳಬೇಕೋ ಆ ರೀತಿ‌ ಮಾತ್ರ ಉಪಯೋಸಿಕೊಳ್ಳಬೇಕಷ್ಟೇ.

Leave A Reply

Your email address will not be published.