ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅವರ ಜನಪ್ರಿಯತೆ ಮಾತ್ರ ಕಮ್ಮಿ ಆಗಿಲ್ಲ ಮತ್ತೊಮ್ಮೆ ದಾಖಲೆ ಬರೆದ ರಶ್ಮಿಕಾ ಮಂದಣ್ಣ

0 2

ರಶ್ಮಿಕಾ ಮಂದಣ್ಣ ದಕ್ಷಿಣದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡದ ಮೂಲಕ ಸಿನಿ ಜರ್ನಿ ಶುರು ಮಾಡಿದ ನಂತರ ತೆಲಗು ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಶೀಘ್ರದಲ್ಲೇ ಅವರ ಬಾಲಿವುಡ್ ಸಿನಿಮಾ ಹೊರ ಬರಲಿದೆ. ಪ್ರಸ್ತುತ ದಕ್ಷಿಣ ಭಾರತದ ಟಾಪ್ ಸ್ಟಾರ್​​ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿನಾ? ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಟಿ ರಶ್ಮಿಕಾ ಮಂದಣ್ಣ ಅವರು ಪುಷ್ಪ ಸಿನಿಮಾದ ಗೆಲುವಿನಲ್ಲಿ ತೇಲುತ್ತಿದ್ದಾರೆ. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಒಂದು ವರ್ಗದ ನೆಟ್ಟಿಗರು ಈ ಕೊಡಗಿನ ಕುವರಿಯನ್ನು ಯಾವಾಗಲೂ ಟ್ರೋಲ್​ ಮಾಡುತ್ತಾರೆ. ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅವರ ಖ್ಯಾತಿ ಕಮ್ಮಿ ಆಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಈಗ ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಬರೋಬ್ಬರಿ 25 ಮಿಲಿಯನ್​ಗಿಂತಲೂ ಅಂದರೆ 2.5 ಕೋಟಿ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಇದು ಅವರ ಸಂತಸಕ್ಕೆ ಕಾರಣ ಆಗಿದೆ. ಅದಕ್ಕಾಗಿ ಅವರು ಕುಣಿದು ಕುಪ್ಪಳಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಆ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಆಗಾಗ ಫ್ಯಾನ್ಸ್​ ಕೇಳುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಾರೆ. ಈ ಎಲ್ಲ ಕಾರಣದಿಂದ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ಕಾರಣಕ್ಕೇ ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಟಾಪ್​ ನಟ ನಟಿಮಣಿಯರನ್ನು ಹಿಂದಿಟ್ಟು ಇನ್​ಸ್ಟಾಗ್ರಾಮ್​ನಲ್ಲಿ ನಂಬರ್ ಒನ್ ನಟಿಯಾಗಿದ್ದಾರೆ. ಚಿತ್ರತಂಗಕ್ಕೆ ಕಾಲಿಟ್ಟ ಕೇವಲ 5 ವರ್ಷಗಳ ಅವಧಿಯಲ್ಲಿ ರಶ್ಮಿಕಾ ಇನ್​ಸ್ಟಾಗ್ರಾಮ್​ನಲ್ಲಿ ಬರೋಬರಿ 2 ಕೋಟಿ 58 ಲಕ್ಷ ಜನ ಫಾಲೋವರ್ಸ್​ನ್ನು ಹೊಂದಿದ್ದಾರೆ. ಸೌತ್ ನಾ ಟಾಪ್​ ನಟ ನಟಿಯರನೆಲ್ಲ ಹಿಂದಿಕ್ಕಿ ರಶ್ಮಿಕಾ ಈ ವಿಚಾದಲ್ಲಿ ನಂಬರ್ ಒನ್ ಆಗಿದ್ದಾರೆ. ಈ ಮೈಲಿಗಲ್ಲು ಮುಟ್ಟಿರುವುದಕ್ಕೆ ಅವರು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

ಇನ್ನು ಟಾಲಿವುಡ್​ನಿಂದ ಬಾಲಿವುಡ್​ಗೆ ಹಾರಿರುವ ರಶ್ಮಿಕಾ ತಾನು ನಟಿಸಿದ ಸಿನಿಮಾ ರಿಲೀಸ್​ ಆಗುವ ಮೊದಲೆ ಬಿಟೌನ್​ನಲ್ಲಿ ಸಖತ್​ ಫೇಮಸ್ ಆಗುತ್ತಿದ್ದಾರೆ. ಮೊನ್​ ಮೊನ್ನೆಯಷ್ಟೇ ರಶ್ಮಿಕಾ ಹಾಗೂ ಅಲ್ಲು ಅರ್ಜುನ್​ ನಟನೆಯ ಪುಷ್ಪ ಸಿನಿಮಾ ರಿಲೀಸ್​ ಆಗಿ ಸದ್ಯ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರು ರಶ್ಮಿಕಾ ಆ್ಯಕ್ಟಿಂಗ್​ಗೆ ಫಿದಾ ಆಗಿದ್ದಾರೆ.

ಪುಷ್ಪ ಸಕ್ಸಸ್​ ಖುಷಿಯಲ್ಲಿ ತೇಲಾಡುತ್ತಿರುವ ರಶ್ಮಿಕಾ ಇನ್​ಸ್ಟಾಗ್ರಾಮ್​ನಲ್ಲಿ 25 ಮಿಲಿಯನ್ ಫಾಲೋವರ್ಸ್ ಪಡೆದ ಸಂಭ್ರಮವನ್ನು ಕೇಕ್​ ಕಟ್​ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಪುಷ್ಪ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ರಶ್ಮಿಕಾ ಅವರು ಹಿಂದಿಯಲ್ಲಿ ಮಾತನಾಡಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದನ್ನು ಕಂಡವರು ನೆಗೆಟಿವ್ ಕಮೆಂಟ್​ ಮಾಡಿದ್ದಾರೆ.

‘ಇವರ ಅದೃಷ್ಟ ಚೆನ್ನಾಗಿತ್ತು. ಅದೇ ಕಾರಣಕ್ಕೆ ಗೀತಾ ಗೋವಿಂದಂ, ಡಿಯರ್​ ಕಾಮ್ರೇಡ್​ ರೀತಿಯ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಇವರು ಹೇಗೆ ನ್ಯಾಷನಲ್​ ಕ್ರಶ್​ ಆಗಲು ಸಾಧ್ಯ? ಇವರಿಗಿಂತ ಚೆನ್ನಾಗಿ ಬೇರೆ ನಟಿಯರು ಇದ್ದಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ರಶ್ಮಿಕಾ ಅವರದ್ದು ಬರೀ ಓವರ್​ ಆ್ಯಕ್ಟಿಂಗ್​’ ಎಂದು ಅನೇಕರು ಕಮೆಂಟ್​ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇವರು ಓವರ್​ ಆ್ಯಕ್ಟಿಂಗ್​ನ ನ್ಯಾಷನಲ್​ ಕ್ರಶ್​’ ಎಂದು ಒಬ್ಬರು ಹೇಳಿದ್ದರೆ, ‘ರಶ್ಮಿಕಾ ವರ್ತನೆ ಕಿರಿಕಿರಿ ಎನಿಸುತ್ತದೆ’ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

Leave A Reply

Your email address will not be published.