ಬೇರೆ ಭಾಷೆಯ ನಟಿಯರನ್ನು ಕರೆಸಿ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸುವ ಪರಿಸ್ಥಿತಿ ಆಗ ಇತ್ತು, ಈಗ ನಮ್ಮ ಕನ್ನಡ ನಟಿಯರದ್ದೆ ಹವಾ.. ಅದರಲ್ಲೂ ಮೊನ್ನೆ “ಪುಷ್ಪ” ಎದುರು ಧೈರ್ಯವಾಗಿ ತಮ್ಮ ಸಿನಿಮಾ ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಅದಿತಿ ಪ್ರಭುದೇವ್ ಅವರ ಬಗ್ಗೆ ಹೇಳಲೇ ಬೇಕು. ಕನ್ನಡ ಅಂದರೆ ಅವರಿಗೆ ಪಂಚ ಪ್ರಾಣ. ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡವರು ಅದಿತಿ ಪ್ರಭುದೇವ್. ಬೇರೆ ಭಾಷೆಗಳಿಂದ ಆಫರ್ ಬಂದರೂ ಎಲ್ಲವನ್ನೂ ತಿರಸ್ಕರಿಸಿ ಕೇವಲ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೆನೆ ಎಂದು ಹೇಳಿದ ಏಕೈಕ ನಟಿ ಅಂದರೆ ಅದು ನಮ್ಮ ಅದಿತಿ ಪ್ರಭುದೇವ ಮಾತ್ರ.

ಇದೀಗ ಈ ನಟಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಗುಡ್ ನ್ಯೂಸ್ ಕೊಟ್ಟಿದ್ದಾರೆ, ಶ್ಯಾನೆ ಟಾಪಾಗವಳೆ ಎಂದು ಕನ್ನಡಿಗರ ಮನ ಗೆದ್ದಿದ್ದ ದಾವಣಗೆರೆಯ ಸುಂದರಿ ಅದಿತಿ ಎಂಗೇಜ್ ಆಗಿದ್ದಾರೆ. ಹೌದು ಸದ್ಯ ಅದಿತಿ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಗಾಂಧಿ ನಗರದ ತುಂಬೆಲ್ಲ ಪಸರಿಸುತ್ತಿದ್ದು ಅದಿತಿಯ ಕೈ ಹಿಡಿದ ಹುಡುಗ ಯಾರು ತಿಳಿಯೋಣ.. ಹೆಸರು ಯಶಸ್, ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಇವರು ಕೆಲ ದಿನಗಳ ಹಿಂದೆ ಅಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಫಿ ತೋಟದ ಮಾಲೀಕನಾ ಯಶಸ್ ಚಿಕ್ಕಮಗಳೂರಿನ ಹುಡುಗ. ಇನ್ನು ರೈತನನ್ನೇ ಮದುವೆ ಆಗಬೇಕು ಅಂದುಕೊಂಡಿದ್ದ ಅದಿತಿ ಪ್ರಭುದೇವ್ ಕೂಡ ಅಂದುಕೊಂಡಂತೆ ರೈತನನ್ನೇ ಮದುವೆಯಾಗುತ್ತಿದ್ದಾರೆ. ನಟಿ ಹೆಚ್ಚಿನ ವಿಚಾರ ಬಿಟ್ಟುಕೊಟ್ಟಿಲ್ಲ, ಸಾಕಷ್ಟು ಸಿನಿಮಾಗಳು ಕೈಯಲ್ಲಿದೆ ಇದೆಲ್ಲವನ್ನೂ ಮುಗಿಸಿ ನಿಮಗೆಲ್ಲ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಟಿ ಅಭಿಮಾನಿಗಳಿಗೆ ಹೊಸ ವರ್ಷಕ್ಕೂ ಮುನ್ನ ಶುಭ ಸುದ್ದಿ ನೀಡಿದ್ದಾರೆ. ಮುಂದಿನ ವರ್ಷ ಅಂದರೆ 2022 ರ ಮಧ್ಯಂತರ ವೇಳೆ ಅದಿತಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ.

ಯಾರಿಗೂ ಗೊತ್ತಾಗದ ರೀತಿಯಲ್ಲಿ ಸೈಲೆಂಟ್ ಆಗಿ ಉದ್ಯಮಿಯ ಜೊತೆಗೆ ಸ್ಯಾಂಡಲ್ ವುಡ್ ನಟಿ ಎಂಗೇಜ್ ಆಗಿದ್ದಾರೆ. ಅದಿತಿ ಶೇರ್ ಮಾಡಿಕೊಂಡಿರುವ ಪೋಸ್ಟ್ ಗೆ “ಒಂದು ಕನಸಿನಂತೆ ಈ ಕನಸು ನನಸಾಯಿತು” ಎಂದು ಕ್ಯಾಪ್ಶನ್ ನೀಡಿದ್ದಾರೆ.

Leave a Reply

Your email address will not be published. Required fields are marked *