ಆಲೂಗಡ್ಡೆ ಅನ್ನೋದು ಕೇವಲ ಅಡುಗೆಗೆ ಸೀಮಿತವಾಗದೆ ಉತ್ತಮ ಅರೋಗ್ಯಕರ ಗುಣಗಳನ್ನು ಹೊಂದಿದೆ, ದೇಹದ ಮೇಲಿನ ಕಪ್ಪು ಕಲೆಯನ್ನು ನಿವಾರಿಸುವ ಜೊತೆಗೆ ಕೆಲವು ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸವನ್ನು ಆಲೂಗಡ್ಡೆ ಮಾಡುತ್ತದೆ. ಹಾಗಾದರೆ ಆಲೂಗಡ್ಡೆ ಬಳಸಿ ಹೇಗೆಲ್ಲ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಯೋಣ.

ಕೆಲವರು ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಿಕೊಳ್ಳಲು ಹಾಗೂ ಮುಖದ ಸೌಂದರ್ಯಕ್ಕೆ ಹಲವು ರೀತಿಯ ಹಣವನ್ನು ವ್ಯಯ ಮಾಡುತ್ತಾರೆ, ಆದ್ರೆ ಕೆಲವರಿಗೆ ಅದು ಫಲಿತಾಂಶ ನೀಡಿರೋದಿಲ್ಲ ಇನ್ನು ಕೆಲವರು ಪ್ರತಿಬಾರಿಯೂ ಹಣವನ್ನು ವ್ಯಯ ಮಾಡಿ ಸೌಂದರ್ಯ ವೃದ್ಧಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಈ ರೀತಿಯ ಮನೆಮದ್ದುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ದೇಹದ ಮೇಲೆ ಸೂರ್ಯನ ಕಿರಣಗಳು ಹೆಚ್ಚು ಬಿದ್ದು ಚರ್ಮ ಕಪ್ಪು ಬಣ್ಣಕೆ ಬಂದಿದ್ದರೆ ಅದನ್ನು ಸನ್ ಟಾನ್ ಎಂಬುದಾಗಿ ಹೇಳುತ್ತಾರೆ, ಇದನ್ನು ಹೇಗೆ ಪರಿಹರಿಸಿಕೊಳ್ಳಬೇಕು ಅನ್ನೋದನ್ನ ಹೇಳುವುದಾದರೆ ಒಂದೆರಡು ಶುದ್ಧವಾದ ಆಲೂಗಡ್ಡೆಯನ್ನು ತಗೆದುಕೊಂಡು ಜ್ಯುಸ್ ಮಾಡಿ, ಆ ಜ್ಯುಸ್ ಅನ್ನು ಟ್ಯಾನ್ ಆಗಿರುವಂತ ಜಾಗಕ್ಕೆ ಲೇಪಿಸಿ ಹೀಗೆ ವಾರದಲ್ಲಿ ಎರಡು ಮೂರೂ ಬಾರಿ ಮಾಡಿದರೆ ಸನ್ ಟ್ಯಾನ್ ನಿವಾರಣೆಯಾಗುವುದು.

ಆಲೂಗಡ್ಡೆಯನ್ನು ಹೀಗೆ ಬಳಸುವುದರಿಂದ ಮುಖದ ಸೌಂದರ್ಯ ಕೂಡ ಹೆಚ್ಚಿಸಿಕೊಳ್ಳಬಹುದು, ಇದಕ್ಕೆ ಒಂದು ಹಸಿ ಆಲೂಗಡ್ಡೆಯನ್ನು ಪುಡಿ ಮಾಡಿ ಅದಕ್ಕೆ ಒಂದು ನಿಂಬೆಹಣ್ಣಿನ ಪೂರ್ತಿ ರಸವನ್ನು ಹಾಗೂ ಅರ್ಧ ಚಮಚ ಅರಿಶಿಣವನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ ಕೊಂಡು ಅರ್ಧ ಗಂಟೆಯ ನಂತರ ಮುಖ ತೊಳೆದುಕೊಂಡರೆ ಮುಖದ ಅಂದ ಹಾಗೂ ಕಾಂತಿ ಹೆಚ್ಚುವುದು.

ಇನ್ನು ತಲೆನೋವು ಸಮಸ್ಯೆ ಏನಾದ್ರು ಇದ್ರೆ ಒಂದು ಶುದ್ಧವಾದ ಹಸಿ ಆಲೂಗಡ್ಡೆಯನ್ನು ತಗೆದುಕೊಂಡು ಅದನ್ನು ರೌಂಡ್ ಆಗಿ ಕಟ್ ಮಾಡಿ ಕಣ್ಣುಗಳ ಮೇಲೆ ಅಥವಾ ಹಣೆಯ ಮೇಲೆ ಇಟ್ಟು ಕೊಳ್ಳುವುದರಿಂದ ತಲೆನೋವು ನಿವಾರಣೆಯಾಗುವುದು. ಅಷ್ಟೇ ಅಲ್ದೆ ಸುಟ್ಟಗಾಯಗಳಿಗೆ ತಕ್ಷಣ ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಲೇಪಿಸಿದರೆ ಉರಿ ಕಡಿಮೆಯಾಗುವುದು.

ಕೆಲವರಲ್ಲಿ ಮುಖದ ಮೇಲಿನ ಚರ್ಮ ಸುಕ್ಕುಗಟ್ಟಿದಂತೆ ಇರುವುದು ಅಂತಹ ಸಮಸ್ಯೆಗೆ ಒಂದು ಶುದ್ಧವಾದ ಹಸಿ ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಅದರಲ್ಲಿ ಸ್ವಲ್ಪ ಮೊಸರನ್ನು ಹಾಕಿ. ಕೆಲವು ಸಮಯಗಳವರೆಗೆ ನೆನೆಯಲು ಬಿಟ್ಟು ನಂತರ ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ನಂತರ ಶುದ್ಧವಾದ ನೀರಿನಿಂದ ಮುಖವನ್ನು ತೊಳೆದುಕೊಂಡರೆ ಮುಖದ ಮೇಲಿನ ಸುಕ್ಕು ಕಾಲಾನುಕ್ರಮೇಣ ಕಡಿಮೆಯಾಗುವುದು. ಈ ಉಪಯುಕ್ತ ವಿಚಾರ ನಿಮ್ಮ ಆತ್ಮೀಯರಿಗೂ ತಿಳಿಸಿ ಇದರ ಸದುಪಯೋಗ ಪಡೆದುಕೊಳ್ಳಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!