ಸಾಮಾನ್ಯವಾಗಿ ಲೋ ಬಿ ಪಿ ಅಂದರೆ ಕಡಿಮೆ ರಕ್ತದ ಒತ್ತಡ ಇಂದಿನ ದಿನಗಳಲ್ಲಿ ನಾವು ಎಲ್ಲಾ ವರ್ಗದ ಜನಗಳಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ದೇಹದಲ್ಲಿನ ವಿಟಮಿನ್ ಗಳ ಕೊರತೆಯಿಂದಾಗಿ ರಕ್ತದ ಒತ್ತಡ ಕಡಿಮೆಯಾಗಬಹುದು. ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದರಿಂದಲೂ, ರಾತ್ರಿ ವೇಳೆ ನಿದ್ರೆಗೆಡುವುದರಿಂದಲೂ, ಮಾನಸಿಕವಾಗಿ ಒತ್ತಡ ಹೆಚ್ಚುವುದರಿಂದಲೂ, ಈಗಿನ ಆಧುನಿಕ ಜೀವನ ಶೈಲಿಯಿಂದಲೂ, ಮನುಷ್ಯರಲ್ಲಿ ಲೋ ಬಿಪಿಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಲೋ ಬಿಪಿಯನ್ನು ನಿಯಂತ್ರಣಕ್ಕೆ ತರಲು ಹಾಲು ಮೊಸರು ಮೀನು ಮೊಟ್ಟೆ ಮಾಂಸ ಸೋಯಾ ಕಿತ್ತಳೆಹಣ್ಣು ಅತ್ಯಗತ್ಯ.

ಹೆಚ್ಚು ನೀರು ಕುಡಿಯುವುದರಿಂದ, ನಿಯಮಿತವಾದ ಆಹಾರ ಮತ್ತು ಹಸಿರು ತರಕಾರಿಗಳ ಸೇವನೆಯಿಂದ ನಾವು ಲೋ ಬಿಪಿಯನ್ನು ನಿಯಂತ್ರಣಕ್ಕೆ ತರಬಹುದು. ಅದೇ ರೀತಿ ನಾವು ಈ ಕೆಳಗೆ ಕೊಟ್ಟಿರುವ ಎರಡು ಮನೆ ಮದ್ದುಗಳನ್ನು ನಿಮ್ಮ ಕಡಿಮೆ ರಕ್ತದ ಒತ್ತಡ ಸಂದರ್ಭದಲ್ಲಿ ಪಾಲಿಸುವುದರಿಂದ ನಿಮ್ಮ ಲೋ ಬಿಪಿ ಸಮಸ್ಯೆಗೆ ಪೂರ್ಣವಿರಾಮವನ್ನು ನೀಡಬಹುದಾಗಿದೆ.

ಲೋ ಬಿಪಿ ಸಮಸ್ಯೆಯನ್ನು ನಿವಾರಿಸುವ ಮೊದಲನೆಯ ಮನೆಮದ್ದು ಯಾವುದು ಅನ್ನೋದನ್ನ ನೋಡುವುದಾದರೆ ಒಂದು ಗ್ಲಾಸ್ ನೀರಿಗೆ ಅರ್ಧ ನಿಂಬೆ ಹಣ್ಣನ್ನು ಹಿಂಡಿ ಸ್ವಲ್ಪ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ತಕ್ಷಣದಲ್ಲಿ ಕಡಿಮೆಯಾಗುವುದು ಅಷ್ಟೇ ಅಲ್ಲದೆ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುವುದಲ್ಲದೇ ಸಮಸ್ಯೆ ದೂರಗುತ್ತದೆ .

ಇನ್ನು ಲೋ ಬಿಪಿ ನಿವಾರಿಸುವ ಎರಡನೆಯ ಮನೆಮದ್ದು ಯಾವುದು ಅನ್ನೋದನ್ನ ತಿಳಿಯುವುದಾದರೆ ಮೂರ್ನಾಲ್ಕು ತುಳಸಿ ಎಲೆಗಳನ್ನು ಬೆಳಿಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಜಗಿದು ಅದರ ರಸವನ್ನು ಸೇವಿಸುವುದರಿಂದ ಲೋ ಬಿ ಪಿ ಸಮಸ್ಯೆಯು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ. ತುಳಸಿ ಹತ್ತಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ ಹಾಗೂ ತುಳಸಿಯಲ್ಲಿ ಹಲವು ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಔಷದಿ ಗುಣಗಳಿವೆ ಹಾಗಾಗಿ ತುಳಸಿ ಪ್ರಯೊಬ್ಬರಿಗೂ ಕೂಡ ಸುಲಭವಾಗಿ ಸಿಗುವಂತ ಮನೆಮದ್ದಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತಿಸೂಕ್ತವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!