ತಲೆಯಲ್ಲಿನ ಹೇನು ಹಾಗೂ ತಲೆಹೊಟ್ಟು ನಿವಾರಿಸುವ ಬೆಂಡೆಕಾಯಿ

0 2

ಮನುಷ್ಯನ ಸಾಮಾನ್ಯ ಸಮಸ್ಯೆಗಳಲ್ಲಿ ಈ ಸಮಸ್ಯೆಯು ಕೂಡ ಒಂದಾಗಿದೆ, ಕೆಲವರಿಗೆ ಈ ಸಮಸ್ಯೆ ಇದ್ರೆ ಏನು ಮಾಡಬೇಕು ಅನ್ನೋದು ತಿಳಿಯೋದಿಲ್ಲ, ಅಂತಹ ಸಂದರ್ಭದಲ್ಲಿ ಕೆಮಿಕಲ್ ಮಿಶ್ರೀತ ಔಷಧಿಗಳನ್ನು ಬಳಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಸಿಗುವಂತ ನೈಸರ್ಗಿಕ ಗುಣಗಳನ್ನು ಹೊಂದಿರುವ ಮನೆಮದ್ದನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕೆಲವೊಂದು ಸಮಸ್ಯೆಗಳಿಗೆ ಈ ಬೆಂಡೆಕಾಯಿ ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ಈ ಮೂಲಕ ತಿಳಿಯೋಣ.

ಬೆಂಡೆಕಾಯಿ ಅನ್ನೋದು ಕೆಲವ ಅಡುಗೆಯಲ್ಲಿ ಮಾತ್ರ ಸೀಮಿತವಾಗದೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವಂತ ಔಷದಿಯ ಗುಣಗಳನ್ನು ಹೊಂದಿದೆ. ತಲೆಯಲ್ಲಿ ಹೇನು ಅಥವಾ ತಲೆಹೊಟ್ಟು ಸಮಸ್ಯೆ ಕಾಡುತ್ತಿದ್ದರೆ ಇದಕ್ಕೆ ಬೆಂಡೆಕಾಯಿ ಹೇಗೆ ಪರಿಹಾರ ನೀಡುತ್ತೆ ಅನ್ನೋದಾದ ಹೇಳುವುದಾದರೆ ಇದಕ್ಕೆ ಬೆಂಡೆಕಾಯಿ ಬೀಜಗಳು ಬೇಕಾಗುತ್ತದೆ. 20 ರಿಂದ 30 ರಷ್ಟು ಬೆಂಡೆಕಾಯಿ ಬೀಜಗಳನ್ನು ಪುಡಿಮಾಡಿಕೊಂಡು ಎಳ್ಳೆಣ್ಣೆಯಲ್ಲಿ ಒಂದು ದಿನ ನೆನಸಿಡಿ, ಒಂದು ದಿನದ ನಂತರ ನೆನೆಸಿಟ್ಟ ಎಣ್ಣೆಯನ್ನು ಕುದಿಸಿ ತಲೆಗೆ ಹಚ್ಚಿಕೊಳ್ಳಿ ಹೀಗೆ ಪ್ರತಿದಿನ ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು ಹಾಗೂ ತಲೆಹೊಟ್ಟು ನಿವಾರಣೆಯಾಗುತ್ತದೆ.

ಇನ್ನು ಬೆಂಡೆಕಾಯಿ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಅನ್ನೋದನ್ನ ಹೇಳುವುದಾದರೆ ಮಲಬದ್ಧತೆ ಇರುವವರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಬೆಂಡೆಕಾಯಿ ಸೇವನೆ ಮಾಡುವುದರಿಂದ ಬೆಳಗ್ಗೆ ಹೊಟ್ಟೆ ಮಲವಿಸರ್ಜನೆ ಮಾಡಲು ಸುಲಭವಾಗುತ್ತದೆ ಯಾವುದೇ ನೋವಿಲ್ಲದೆ ಸರಾಗವಾಗಿ ಆಗುವದು. ಬೆಂಡೆಕಾಯಿಯನ್ನು ಗರ್ಭಿಣಿಯರು ಸೇವನೆ ಮಾಡುವುದರಿಂದ ತಾಯಿ ಮತ್ತು ಮಗುವಿನ ಅರೋಗ್ಯ ವೃದ್ಧಿಯಾಗವುದು.

ದೇಹದ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಹಾಗೂ ಹಾಗೂ ದೇಹದ ತೂಕ ಹೆಚ್ಚು ಮಾಡಿಕೊಳ್ಳುವವರಿಗೆ ಕೂಡ ಸಹಕಾರಿಯಾಗಿದೆ. ಪ್ರತಿದಿನ 3 ನಾಲ್ಕು ಹಸಿ ಬೆಂಡೆಕಾಯಿಯನ್ನು ಜಗಿದು ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಬೆಂಡೆಕಾಯಿ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಹಾಲು ಅಥವಾ ನೀರಿನ ಜತೆ ಸೇವಿಸಿದರೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

Leave A Reply

Your email address will not be published.