ಇನ್ನೇನು ಚಳಿಗಾಲ ಶುರುವಾಗಿದೆ, ಚಳಿಗಾಲ ಎಂದರೆ ರೋಗಗಳು ಬರುವುದು ಸರ್ವೇಸಾಮಾನ್ಯ ಅದರಲ್ಲೂ ಶೀತ ಕೆಮ್ಮು ಕಫ ಗಂಟಲ ನೋವು ಇಂತಹ ಶೀತಕ್ಕೆ ಸಂಬಂದಿಸಿದ ಖಾಯಿಲೆಗಳು ನಮ್ಮನ್ನ ಬಹಳಷ್ಟು ಕಾಡುತ್ತವೆ. ಇಂತಹ ಸಮಸ್ಯೆಗಳಿಗೆ ಎಷ್ಟೇ ಔಷಧಿಗಳನ್ನ ಹಾಗೂ ಮಾತ್ರೆಗಳನ್ನ ತೆಗೆದುಕೊಂಡರು ಕಡಿಮೆಯಾಗುವ ಯಾವುದೇ ಲಕ್ಷಣಗಳು ಸಹ ಕಾಣುವುದಿಲ್ಲ, ಇಂದು ನಿಮಗೆ ತಿಳಿಸಿಕೊಡುವ ಮನೆ ಮದ್ದು ಉಪಯೋಗಿಸಿದರೆ ನಿಮ್ಮ ಶೀತದ ಹಲವು ಸಮಸ್ಯೆಗಳು ಕೆಲವು ನಿಮಿಷಗಳಲ್ಲಿಯೇ ಕಡಿಮೆಯಾಗುತ್ತವೆ. ಹಾಗಾದರೆ ಬನ್ನಿ ಮನೆಮದ್ದು ತಯಾರಿಸೋದು ಹೇಗೆ ಅನ್ನೋದನ್ನ ತಿಳಿಯೋಣ.

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು: ಶುಂಠಿ ಒಂದಿಂಚು ಹಾಗೂ ಸ್ವಲ್ಪ ಬೆಲ್ಲ, ಅರ್ಧ ಚಮಚ ಓಂ ಕಾಳು, ಅರಿಶಿನ ಚಿಟಿಕೆ, ಬಾದಾಮಿ ೫ ರಿಂದ ೬ ಹಾಗೂ ಕಪ್ಪು ಉಪ್ಪು ಸ್ವಲ್ಪ ಬೇಕಾಗುತ್ತದೆ. ಇಷ್ಟು ಪದಾರ್ಥಗಳು ಈ ಶೀತದಿಂದ ಉಂಟಾಗುವಂತ ಕಫ ನೆಗಡಿ ಕೆಮ್ಮು ಗಂಟಲುನೋವು ನಿವಾರಿಸಲು ಸಹಕಾರಿ ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ತಿಳಿಯೋಣ ಮುಂದೆ ನೋಡಿ.

ತಯಾರಿಸುವ ವಿಧಾನ: ಮೊದಲು ನೀವು ಶುಂಠಿಯನ್ನ ಚನ್ನಾಗಿ ತುರಿದು ಅದರ ರಸವನ್ನ ತೆಗೆದಿಟ್ಟುಕೊಳ್ಳಿ, ನಂತರ ಬಾದಾಮಿಯನ್ನು ಸಹ ತುರೇಮಣಿಯ ಸಹದಿಂದ ತುರಿದಿಟ್ಟುಕೊಳ್ಳಿ, ಇದಾದ ಬಳಿಕ ಒಂದು ಬಾಣಲೆಯನ್ನ ಒಲೆ ಮೇಲಿಟ್ಟು ಉರಿಯನ್ನ ಸಣ್ಣಗೆ ಇಡಿ. ಬಾಣಲೆಗೆ ತುರಿದ ಶುಂಠಿಯ ರಸ ಹಾಗೂ ಬಾದಾಮಿಯ ಪುಡಿಯನ್ನ ಹಾಕಿ, ಅದಕ್ಕೆ ಬೆಲ್ಲವನ್ನು ಸಹ ಸೇರಿಸಿ, ಸ್ವಲ್ಪ ಕುದಿ ಬಂದ ಬಳಿಕ ಓಂ ಕಾಳು, ಕಪ್ಪು ಉಪ್ಪು ಹಾಗೂ ಅರಿಶಿಣವನ್ನ ಹಾಕಿ ಚನ್ನಾಗಿ ಕುಡಿಸಿ ಒಲೆಯನ್ನ ಆರಿಸಿ ಒಂದು ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಿ.

ಇದನ್ನ ಚಿಕ್ಕ ಮಕ್ಕಳಿಗಾದರೆ ಬೆಳಗ್ಗೆ ಹಾಗೂ ಸಂಜೆ ಅರ್ಧ ಚಮಚದಷ್ಟು ಕೊಡಿ, ದೊಡ್ಡವರಾದರೆ ಒಂದು ಚಮಚದಂತೆ ದಿನಕ್ಕೆರಡು ಬರಿ ಕುಡಿಯಿರಿ ಹೀಗೆ ಕೇವಲ ಎರಡು ದಿನಗಳವರೆಗೆ ಮಾಡಿದರೆ ಸಾಕು ನಿಮ್ಮ ಶೀತದ ತೊಂದರೆಗಳು ನಿಚಾರಣೆಯಾಗುತ್ತವೆ. ಇದನ್ನ ಮೊದಲ ಬಾರಿ ಕುಡಿದಾಗೆಲೆ ನಿಮಗೆ ವ್ಯತ್ಯಾಸ ಕಾಣುತ್ತದೆ. ಒಮ್ಮೆ ತಯಾರಿಸಿದ್ದನ್ನು ಒಂದು ವಾರಗಳವರೆಗೆ ಶೇಖರಿಸಿಡಬಹುದು.

Leave a Reply

Your email address will not be published. Required fields are marked *