ಎಂತಹ ಜ್ವರ ಇದ್ರೂ ತಕ್ಷಣ ರಿಲೀಫ್ ನೀಡುವ ಮನೆಮದ್ದು

0 16

ಬೇಸಿಗೆ ಶುರುವಾಯಿತು ಎಂದರೆ ಸಾಕು ಜ್ವರದ ಸಮಸ್ಯೆ ಶುರುವಾಗುತ್ತದೆ. ಅದರಲ್ಲಿಯೂ ನಗರಪ್ರದೇಶದ ಜನರಲ್ಲಿ ಚಿತ್ರ ವಿಚಿತ್ರವಾದ ಜ್ವರಗಳು ಕಾಣಿಸಿಕೊಳ್ಳುತ್ತವೆ. ಚಿಕನ್ ಗುನ್ಯಾ, ಡೆಂಗ್ಯೂ ಬಹಳಷ್ಟು ಖಾಯಿಲೆಗಳು ಬರುತ್ತದೆ. ಬೇಸಿಗೆ ಬಂತೆಂದರೆ ಜ್ವರಗಳಿಗೆ ಹಬ್ಬ. ಅದರಲ್ಲೂ ಡೆಂಗ್ಯೂ ಜ್ವರ ಒಂದು ದಶಕದಿಂದ ಸಾಕಷ್ಟು ಹೆಚ್ಚಾಗುತ್ತಿದೆ.ಈ ಜ್ವರವನ್ನು ನಿರ್ಲಕ್ಷಿಸಿದರೆ ವ್ಯೆದ್ಯರು ಏನು ಮಾಡಲು ಸಾಧ್ಯವಿಲ್ಲ. ಆದರೆ ಈ ಜ್ವರಕ್ಕೆ ಮನೆಯಲ್ಲಿ ಔಷಧಿ ಎನ್ನುವುದನ್ನು ಮರೆತುಬಿಡುತ್ತೇವೆ. ಅಂತಹ ಒಂದು ಮನೆಮದ್ದಿನ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಡೆಂಗ್ಯೂ ಆದ ನಾಲ್ಕು ದಿನಗಳಿಗೆ ಬಿಳಿರಕ್ತಕಣಗಳ ಸಂಖ್ಯೆ ಕಡಿಮೆ ಆಗುತ್ತದೆ. ಅದರಿಂದ ಜ್ವರಕ್ಕೆ ತುತ್ತಾದ ವ್ಯಕ್ತಿಗೆ ಅಪಾಯ ಕೂಡ ಆಗಬಹುದು. ಬಿಳಿರಕ್ತಕಣಗಳನ್ನು ವೃದ್ಧಿಸುವ ಶಕ್ತಿ ಈ ಗಿಡಕ್ಕಿದೆ.ಅದೇ ಪರಂಗಿಗಿಡ ಅಥವಾ ಪಪ್ಪಾಯ.

ಪಪ್ಪಾಯ ಗಿಡಕ್ಕೆ ಇಂತಹದೊಂದು ಶಕ್ತಿ ಇದೆ. ಬಿಳಿರಕ್ತಕಣಗಳು ಡೆಂಗ್ಯೂ ಆದಾಗ ಕಡಿಮೆ ಇರುತ್ತದೆ. ಆಗ ಈ ಎಲೆಯ ಸೇವನೆಯಿಂದ ಬಿಳಿರಕ್ತಕಣಗಳು ದಿಢೀರ್ ಅಂತ ಹೆಚ್ಚುತ್ತದೆ. ಬೀದಿ ಬದಿಯಲ್ಲಿ ಪಪ್ಪಾಯಿಹಣ್ಣು ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದ ಜನ ಪಪ್ಪಾಯಿಗಿಡ ಕಂಡರೆ ಸಾಕು ಎಲೆಯನ್ನು ಖರೀದಿಸಲು ಶುರು ಮಾಡಿದರು. ಪಪ್ಪಾಯಿ ಹಣ್ಣಿನ ದರ ಕೂಡ ಜಾಸ್ತಿ ಆಯಿತು.

ಇಂಗ್ಲೀಷ್ ಮೆಡಿಸಿನ್ ನಿಂದ ಕಡಿಮೆ ಆಗದ ಡೆಂಗ್ಯುವನ್ನು ಸಾಕಷ್ಟು ಜನರು ಕೇವಲ ಪಪ್ಪಾಯಿಎಲೆಯ ರಸದಿಂದ ಕಡಿಮೆ ಮಾಡಿಕೊಂಡಿದ್ದಾರೆ.ಮೊದ ಮೊದಲು ಈ ಜ್ವರಕ್ಕೆ ತುಂಬಾ ಭಯ ಭೀತರಾಗುತ್ತಿದ್ದ ಜನ ಈಗ ಸರಳವಾಗಿ ಪಪ್ಪಾಯಿ ರಸ ಸೇವಿಸಿ ಗುಣಪಡಿಸಿಕೊಳ್ಳುತ್ತಿದ್ದಾರೆ.

2016ಕ್ಕೆ ಹೋಲಿಸಿದರೆ ಇವತ್ತು ಡೆಂಗ್ಯೂಗೆ ಬಲಿಯಾಗುವವರ ಸಂಖ್ಯೆ ಬಹಳ ಇಳಿಮುಖ ಇದೆ.ಇದಕ್ಕೆ ಕಾರಣ ರಾಮಬಾಣವಾಗಿ ಕೆಲಸ ಮಾಡುವ ಪಪ್ಪಾಯಿ ರಸ ಎಂದರೆ ತಪ್ಪಿಲ್ಲ. ಶರೀರದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವ ಶಕ್ತಿ ಕೂಡ ಪಪ್ಪಾಯಿ ರಸಕ್ಕಿದೆ.ಪಪ್ಪಾಯಿ ಹಣ್ಣನ್ನು ನಿಯಮಿತವಾಗಿ ದಿನವೂ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

ಜೀವನಿರೋಧಕ ಶಕ್ತಿ ಹೆಚ್ಚಿಸೋ ಗುಣ ಇದಕ್ಕಿದೆ. ಜೀವನಿರೋಧಕ ಶಕ್ತಿ ಇದೆ ಎಂಬ ಉದ್ದೇಶದಿಂದ ಊಟದಲ್ಲಿ ಇದನ್ನು ಬಳಸುವ ಪದ್ಧತಿ ನಮ್ಮಲ್ಲಿದೆ. ಆದ್ದರಿಂದ ಪಪ್ಪಾಳೆಕಾಯಿಯ ಪದಾರ್ಥ ಮಾಡುವ ಅಭ್ಯಾಸ ಅನೇಕ ಮನೆಗಳಲ್ಲಿ ಇರುತ್ತದೆ. ಹಾಗೆಯೇ ಮಕ್ಕಳು ಜಂತುಹುಳುವಿನ ಸಮಸ್ಯೆಯಿಂದ ಕೂಡ ಪಾರಾಗಬಹುದು.

ಪಪ್ಪಾಯಿ ಹಣ್ಣನ್ನು ಜೇನುತುಪ್ಪದ ಜೊತೆ ದಿನವೂ ಸೇವನೆ ಮಾಡುವುದರಿಂದ ಹೃದಯ ಹಾಗೂ ನರದೌರ್ಬಲ್ಯಗಳನ್ನು ನಿವಾರಿಸಿಕೊಳ್ಳಬಹುದು.ನಾವು ಇದರ ಒಳಗಿನ ಕಪ್ಪನೆಯ ಬೀಜವನ್ನು ತೆಗೆಯುತ್ತೇವೆ. ಆದರೆ ಆ ಬೀಜಕ್ಕೆ ನಮ್ಮ ದೇಹದ ಹೊಟ್ಟೆನೋವನ್ನು ನಿವಾರಿಸುವ ಶಕ್ತಿ ಇದೆ.ಒಂದು ಚಮಚ ಪಪ್ಪಾಯದ ಪುಡಿಯನ್ನು ನೀರಿನಲ್ಲಿ ಬೆರೆಸಿ ದಿನವೂ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆ ಆಗುತ್ತದೆ. ನೀವೂ ಕೂಡ ಪಪ್ಪಾಯಿ ಹಣ್ಣು ಮತ್ತು ಎಲೆಗಳನ್ನು ಬಳಸಿ ಅದರ ಪ್ರಯೋಜನ ಪಡೆದುಕೊಳ್ಳಿ.

Leave A Reply

Your email address will not be published.