ಪೇಟೆಯಲ್ಲಿ ಸಿಗುವ ಹಣ್ಣುಗಳನ್ನು ಪೇಟೆಯ ಕಡೆ ವಾಸಿಸುವವರು ಹೆಚ್ಚಾಗಿ ನೋಡಿರುತ್ತಾರೆ. ಹಾಗೆಯೇ ಹೆಚ್ಚಾಗಿ ತಿಂದಿರುತ್ತಾರೆ. ಹಳ್ಳಿಯಲ್ಲಿ ವಾಸಿಸುವ ಜನರು ಹಳ್ಳಿಯಲ್ಲಿ ಬೆಳೆಯುವ ಹಣ್ಣುಗಳ ಬಗ್ಗೆ ಹೆಚ್ಚು ತಿಳಿದಿರುತ್ತಾರೆ. ಆಯಾ ಸೀಸನ್ ಗಳಲ್ಲಿ ಸಿಗುವ ಎಲ್ಲಾ ಹಣ್ಣುಗಳನ್ನು ತಿನ್ನುತ್ತಾರೆ. ಏಕೆಂದರೆ ಹಣವನ್ನು ಕೊಡುವ ಅವಶ್ಯಕತೆ ಇಲ್ಲ. ಎಷ್ಟು ಬೇಕಾದರೂ ಯಾವಾಗ ಬೇಕಾದರೂ ತಿನ್ನಬಹುದು. ನಾವು ಇಲ್ಲಿ ಹಳ್ಳಿಯಲ್ಲಿ ಸಿಗುವ ಒಂದು ಜಾತಿಯ ಹಣ್ಣಿನ ಬಗ್ಗೆ ತಿಳಿಯೋಣ.

ಮನುಷ್ಯ ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನಬೇಕು. ಏಕೆಂದರೆ ಪ್ರತಿಯೊಂದು ಹಣ್ಣುಗಳು ಅದರದೇ ಆದ ವಿಟಮಿನ್ ಗಳನ್ನು ಹೊಂದಿರುತ್ತದೆ. ಆಯಾ ಕಾಲಮಾನಕ್ಕೆ ಆಗುವ ಎಲ್ಲಾ ಹಣ್ಣುಗಳನ್ನು ತಿನ್ನಬೇಕು.

ಈ ಹಣ್ಣನ್ನು ಬಹಳಷ್ಟು ಜನ ತಿಂದಿರುತ್ತಾರೆ. ಆದರೆ ಇದರ ಬಗ್ಗೆ ತಿಳಿದವರು ಬಹಳ ಕಡಿಮೆ.ಇದು ಕಾಯಿ ಇದ್ದಾಗ ಹಸಿರು ಬಣ್ಣ ಇರುತ್ತದೆ. ಹಂಪಾದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಪೂರ್ತಿಯಾಗಿ ಹಣ್ಣಾದಾಗ ಕೆಂಪಾಗುತ್ತದೆ.ಇದು ಮರಕ್ಕೆ ಗೊಂಚಲು ಗೊಂಚಲಿನ ಹಾಗೆ ಬೆಳೆಯುತ್ತದೆ. ಅದೇ ಹತ್ತಿಹಣ್ಣು. ಆಂಗ್ಲ ಭಾಷೆಯಲ್ಲಿ “ಫಿಕಸ್ ರೇಸ್ ಮೋಸಾ” ಎಂದು ಕರೆಯುತ್ತಾರೆ.

ಇದು ನಮ್ಮ ದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹತ್ತಿಹಣ್ಣು ಮತ್ತು ಈ ಮರದ ಎಲೆಗಳಲ್ಲಿ ಔಷಧೀಯ ಗುಣಗಳಿವೆ.ಆದ್ದರಿಂದ ಆಗಿನ ಕಾಲದಲ್ಲಿ ಈ ಹತ್ತಿಹಣ್ಣು ಮತ್ತು ಅದರ ಎಲೆಗಳನ್ನು ಔಷಧಿಗಾಗಿ ಬಳಸುತ್ತಿದ್ದರು. ಈ ಹಣ್ಣಿನಲ್ಲಿ ಔಷಧೀಯ ಗುಣಗಳು ಹೆಚ್ಚಾಗಿ ಇರುತ್ತದೆ.

ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಡಯಾಬಿಟಿಸ್ ನ್ನು ಹತೋಟಿಗೆ ತರುತ್ತದೆ. ಲಿವರ್ ಗೆ ಸಂಬಂಧ ಪಟ್ಟ ಯಾವುದೇ ಖಾಯಿಲೆಗಳು ಬರುವುದಿಲ್ಲ. ಯಾವುದೇ ರೀತಿಯ ಉಸಿರಾಟದ ತೊಂದರೆ ಇರುವುದಿಲ್ಲ. ಯೂರಿನರಿ ಡಿಸೀಸಸ್ ಕೂಡ ಇರುವುದಿಲ್ಲ.

By

Leave a Reply

Your email address will not be published. Required fields are marked *