Ultimate magazine theme for WordPress.

ಚರ್ಮ ರೋಗ ನಿವಾರಣೆಗೆ ತುಳಸಿ ಮದ್ದು

0 56

ಚರ್ಮದಲ್ಲಿ ತುರಿಕೆ ಶುರು ಆಗುವುದು ಸಾಮಾನ್ಯ ಸಮಸ್ಯೆಯೇ ಹೊರತು ದೊಡ್ಡ ರೋಗವಲ್ಲ.ಇನ್ನು ತುರಿಕೆ, ಗಜಕರ್ಣ, ಕಜ್ಜಿಯಂತಹ ಸಮಸ್ಯೆಗಳು ನಮ್ಮ ಸುತ್ತಮುತ್ತಲಿನ ವಾತಾವರಣದಿಂದ, ಅತಿಯಾದ ಬೆವರುವಿಕೆ,ಅಲರ್ಜಿ,ಸೊಳ್ಳೆ ಕಡಿತ,ಚರ್ಮದ ಸೋಂಕು, ತೇವಾಂಶ ಇಲ್ಲದ ಪರಿಸರ,ಕೆಲವು ಸೋಪುಗಳ, ಡಿಟರ್ಜೆಂಟ್ ಗಳ ಬಳಕೆಯಿಂದ ಕಾಣಿಸಿಕೊಳ್ಳಬಹುದು. ಎಲ್ಲರೆದುರಲ್ಲಿ ಮೈ ಪರಚಿಕೊಳ್ಳುವುದನ್ನು ಯಾರು ಇಷ್ಟಪಡುವುದಿಲ್ಲ. ಮಾರ್ಕೆಟ್ ನ ದುಬಾರಿಯ ಔಷಧಿ ಮಾಡಿ ಬೇಸತ್ತು ಹೋಗಿದ್ದಾರೆ. ಮುಖ್ಯವಾಗಿ ನಮ್ಮ ದೇಹವನ್ನು ಸ್ವಚ್ಛವಾಗಿ ಇಡದೇ ಇಟ್ಟುಕೊಳ್ಳುವುದರಿಂದ ಚರ್ಮದ ಸಮಸ್ಯೆಗಳಿಂದ ದೂರ ಇರಬಹುದು.ಮನೆಯಲ್ಲಿ ಸಿಗುವ ಕೆಲ ಪದಾರ್ಥಗಳಿಂದ ಕಜ್ಜಿ, ತುರಿಕೆಗಳನ್ನು ದೂರ ಇಡಬಹುದು.ಅವುಗಳನ್ನು ನಾವು ಇಲ್ಲಿ ನೋಡೋಣ.

ಎಲ್ಲರ ಮನೆಯ ಮುಂದೆ ಸಾಮಾನ್ಯವಾಗಿ ಬೆಳೆಯುವ ಗಿಡ ತುಳಸಿ. ತುಳಸಿ ಗಿಡವನ್ನು “ಗಿಡಮೂಲಿಕೆಗಳರಾಣಿ” ಎಂದು ಕರೆಯಲಾಗುತ್ತದೆ.ತುಳಸಿಯನ್ನು ಜ್ವರ, ಶೀತ, ತಲೆನೋವು, ಕಿಡ್ನಿಕಲ್ಲಿನ ಸಮಸ್ಯೆ,ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹೊಳೆವ ತ್ವಚೆ ಪಡೆಯಲು, ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ತುಳಸಿಯನ್ನು ಬಳಸಲಾಗುತ್ತದೆ.

ತುಳಸಿಯನ್ನು ಈ ರೀತಿಯಾಗಿ ಬಳಸುವುದರಿಂದ ತುರಿಕೆ, ಗಜ್ಜಿ, ಗಜಕರ್ಣ ಮುಂತಾದವುಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. 15ರಿಂದ20 ತುಳಸಿದಳವನ್ನು ತೆಗೆದು ಸರಿಯಾಗಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅದನ್ನು ಒಂದು ಮಿಕ್ಸಿಜಾರಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.ರುಬ್ಬಿಕೊಳ್ಳುವಾಗ ಸ್ವಲ್ಪ ನೀರು ಬಳಸಬಹುದು.ನಂತರ ತಿನ್ನುವ ಸುಣ್ಣವನ್ನು ರುಬ್ಬಿದ ಮಿಶ್ರಣಕ್ಕೆ ಒಂದು ಚೀಟಿಗೆಯಷ್ಟು ಹಾಕಿ ಚೆನ್ನಾಗಿ ಕಲಸಿ ನಿಮ್ಮ ದೇಹದ ಯಾವುದೇ ಜಾಗದಲ್ಲಿ ಆದ ಕಜ್ಜಿ, ಗಜಕರ್ಣ,ಅಲರ್ಜಿ ಮುಂತಾದವುಗಳಿಗೆ ಹಚ್ಚಬೇಕು.

ಬಳಸುವ ಮೊದಲು ಚರ್ಮವನ್ನು ಶುಚಿಗೊಳಿಸಬೇಕು. ಈ ಮಿಶ್ರಣವನ್ನು ಚರ್ಮದಲ್ಲಿ ತುರಿಕೆ ಇರುವ ಜಾಗದಲ್ಲಿ ಸ್ವಲ್ಲ ಹತ್ತಿಯನ್ನು ಬಳಸಿ ಮೊದಲು ಇದರಲ್ಲಿರುವ ರಸವನ್ನು ಹಚ್ಚಿ.ನಂತರ ದಪ್ಪದ ಮಿಶ್ರಣವನ್ನು ಹಚ್ಚಿ.2ಗಂಟೆಯ ಕಾಲ ಹಾಗೆಯೇ ಬಿಡಿ. ಸುಣ್ಣ ಹಾಕಿರುವುದರಿಂದ ಸ್ವಲ್ಪ ಉರಿಯಾಗುತ್ತದೆ.

ಇದನ್ನು ಮೊದಲ ಬಾರಿಗೆ ಬಳಸಿದಾಗಲೇ ಇದರ ಪ್ರಯೋಜನ ತಿಳಿಯುತ್ತದೆ.ರಾತ್ರಿ ಮಲಗುವಾಗ ಇದನ್ನು ಬಳಸುವುದು ಉತ್ತಮ. 2ರಿಂದ3ಬಾರಿ ಬಳಸಿದರೆ ಸಾಕು ಚರ್ಮದ ರೋಗ ನಿವಾರಣೆ ಆಗುತ್ತದೆ. ಆದರೆ ಹೆಚ್ಚು ತುರಿಕೆ ಆಗಿ ಗಾಯಗಳಾಗಿದ್ದರೆ ತಕ್ಷಣ ವ್ಯೆದ್ಯರನ್ನು ಭೇಟಿ ಮಾಡಿ.

Leave A Reply

Your email address will not be published.