ತರಕಾರಿಗಳಲ್ಲಿ ಒಂದು ಈರುಳ್ಳಿ. ಕೆಲವೊಂದು ಪ್ರಾಂತ್ಯಗಳಲ್ಲಿ ಇದಕ್ಕೆ ಉಳ್ಳಾಗಡ್ಡೆ ಎಂದು ಕರೆಯುತ್ತಾರೆ.ಬಯಲು ಸೀಮೆಯ ಜನರಿಗೆ ಈರುಳ್ಳಿ ಇಲ್ಲದೆ ದಿನವೇ ಕಳೆಯುವುದಿಲ್ಲ. ಇದರಿಂದ ಹಲವಾರು ಪ್ರಯೋಜನ ಇದೆ. ಯಾರು ಇದನ್ನು ಬಳಸಿದರೆ ಒಳ್ಳೆಯದು ಮತ್ತು ಯಾರು ಇದನ್ನು ಬಳಸಿದರೆ ಕೆಟ್ಟದ್ದು ಅವುಗಳನ್ನು ನಾವು ಇಲ್ಲಿ ನೋಡೋಣ.

ಇದು ಉಳ್ಳಾಗಡ್ಡೆ ಅಲ್ಲ ಒಳ್ಳೆಯ ಗಡ್ಡೆ.ಒಳ್ಳೆಯಗಡ್ಡೆ ಎಂದು ಹೇಳಿ ಹೇಳಿ ಅಪಭ್ರಂಶವಾಗಿ ಉಲ್ಲಾಗಡ್ಡೆ ಎಂದು ಹೆಸರು ಬಂತು. ಇನ್ನು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ “ಒನ್ಯನ್” ಎಂದು ಕರೆಯುತ್ತಾರೆ.ಈರುಳ್ಳಿಯ ಗುಣಧರ್ಮ ತಿಳಿದುಕೊಳ್ಳಬೇಕು.

ಈರುಳ್ಳಿಯ ಪ್ರಯೋಜನ ಬಹಳ ಇದೆ.ಇದನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ತೂಕ ಕಡಿಮೆ ಆಗುತ್ತದೆ. ಈರುಳ್ಳಿ ಜೀರ್ಣಕಾರಕವಾಗಿದೆ.ತಲೆಯಲ್ಲಿರುವ ಕ್ರಿಮಿ ಕೀಟಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಬಳಸಲಾಗುತ್ತದೆ. ತಲೆಯಲ್ಲಿ ಹೊಟ್ಟು, ಶಿಗುರುಗಳನ್ನು ಹೋಗಲಾಡಿಸಲು ಒಳ್ಳೆಯ ಮದ್ದು ಇದು. ಇದರ ರಸವನ್ನು ತಲೆಗೆ ಹಚ್ಚುವುದರಿಂದ ಹೊಟ್ಟು, ಹೇನುಗಳಿಂದ ಮುಕ್ತಿ ಪಡೆಯಬಹುದು.

ಆದರೆ ಆಧ್ಯಾತ್ಮ ಸಾಧಕರು ಈರುಳ್ಳಿಯನ್ನು ತಿನ್ನಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ಕಾಮೋತ್ತೇಜಕ. ಇದು ದೇಹದಲ್ಲಿ ಕಾಮ ಉತ್ತೇಜಿಸುತ್ತದೆ. ಆಧ್ಯಾತ್ಮ ಸಾಧನೆಗೆ ತೊಂದರೆ ಆಗಬಾರದು ಎಂದು ಈರುಳ್ಳಿಯನ್ನು ತಿನ್ನುವುದಿಲ್ಲ. ಆದರೆ ಸಂಸಾರಸ್ಥರು ಈರುಳ್ಳಿಯ ಬಳಕೆ ಮಾಡಿದರೆ ಯಾವುದೇ ತೊಂದರೆ ಇಲ್ಲ. ಬ್ರಹ್ಮಚರ್ಯ ಪಾಲನೆ ಮಾಡುವವರು, ಭಗವಂತನಲ್ಲಿ ಲೀನ ಆಗಬೇಕು ಎನ್ನುವಂತವರು ಈರುಳ್ಳಿಯ ಬಳಕೆ ಕಡಿಮೆ ಮಾಡುವುದು ಒಳಿತು.

By

Leave a Reply

Your email address will not be published. Required fields are marked *