ದೇಹದ ತೂಕ ಇಳಿಸಲು ಮಾರ್ನಿಂಗ್ ವರ್ಕೌಟ್ ಹೀಗಿರಲಿ, ವಿಡಿಯೋ ನೋಡಿ

0 10

ಅತಿಯಾದ ತೂಕ ಹೊಂದುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದ ತೂಕ ಹೊಂದುವುದರಿಂದಲೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ತೂಕ ಇಳಿಸಿಕೊಳ್ಳಲು ಬೆಳಗಿನ ಸಮಯ ವ್ಯಾಯಾಮ ಮಾಡುವುದು ಒಂದು ಪ್ರಮುಖ ಪರಿಹಾರವಾಗಿದೆ. ವ್ಯಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವ್ಯಾಯಾಮ ನಮ್ಮ ಜೀವನದಲ್ಲಿ ಬಹಳ ಮುಖ್ಯ, ಆಹಾರ ಎಷ್ಟು ಮುಖ್ಯವೋ ಅಷ್ಟೇ ವ್ಯಾಯಾಮವೂ ಮುಖ್ಯವಾಗಿದೆ. ಮನುಷ್ಯನನ್ನು ಸೃಷ್ಟಿಮಾಡಿದ್ದು ಕೆಲಸ ಮಾಡಲು ಪ್ರತಿಯೊಬ್ಬರೂ ಏನಾದರೂ ಕೆಲಸ ಮಾಡುತ್ತಿರಬೇಕು ಕೆಲಸ ಮಾಡುವುದೇ ವ್ಯಾಯಾಮ. ಇತ್ತೀಚಿನ ಬದಲಾದ ಜನರು ವ್ಯಾಯಾಮವನ್ನು ಮಾಡುವುದಿಲ್ಲ ಏಕೆಂದರೆ ಇಂದಿನ ದಿನಗಳಲ್ಲಿ ಕೆಲಸ ಮಾಡುವ ರೀತಿ ಬದಲಾಗಿದೆ ಇಡೀ ದಿನ ಕಂಪ್ಯೂಟರ್ ಮುಂದೆ ಆಫೀಸ್ ನಲ್ಲಿ ಕುಳಿತುಕೊಳ್ಳಬೇಕು ಇದರಿಂದ ತೂಕ ಹೆಚ್ಚಾಗುತ್ತದೆ. ಹಳ್ಳಿಯಲ್ಲಿರುವ ಜನರಿಗೆ ವ್ಯಾಯಾಮದ ಅವಶ್ಯಕತೆ ಇಲ್ಲ ಅವರು ಇಡೀ ದಿನ ಕೆಲಸ ಮಾಡುತ್ತಿರುತ್ತಾರೆ.

ವ್ಯಾಯಾಮವೆಂದರೆ ಬೆವರು ಸುರಿಸಬೇಕು ಎಂದು ಹೇಳುತ್ತಾರೆ ಆದರೆ ಅದು ತಪ್ಪು ವ್ಯಾಯಾಮವೆಂದರೆ ಕೈಕಾಲುಗಳಿಗೆ ಕೆಲಸ ಕೊಡಬೇಕು. ದಿನದಲ್ಲಿ ಕಡಿಮೆಯೆಂದರೂ 20 ನಿಮಿಷ ವ್ಯಾಯಾಮ ಮಾಡಬೇಕು ಆಗ ಮಾತ್ರ ಆರೋಗ್ಯವಾಗಿರಬಹುದು. ಓಡುವುದು ನಮ್ಮ ಆರೋಗ್ಯಕ್ಕೆ ಹಾಳು, ನಾವು ಬೆಳಗಿನ ಸಮಯದಲ್ಲಿ ನಿಧಾನವಾಗಿ ನಡೆದುಕೊಂಡು ವಾಕಿಂಗ್ ಮಾಡಬೇಕು ಇದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಲ್ಲದೆ ಯೋಗ ಮಾಡುವುದರಿಂದಲೂ ತೂಕ ಕಡಿಮೆ ಆಗುತ್ತದೆ. ಓಡುವವರಿಗೆ ಮೊಣಕಾಲು ಗಂಟುಗಳ ನೋವಿರುತ್ತದೆ ಅಲ್ಲದೆ ಸೊಂಟ ನೋವು ಬರುತ್ತದೆ. ಕೆಲವರು ಓಡುತ್ತಲೇ ಸತ್ತ ಘಟನೆಗಳನ್ನು ನಾವು ನೋಡಬಹುದು. ಭೂಪಾಲ್ ದುರಂತದಂತಹ ಅವಘಡ ಸಂಭವಿಸಿದಾಗ ಹೆದರಿಕೆಯಿಂದ ಓಡಿ ಹಾರ್ಟ್ ಅಟ್ಯಾಕ್ ನಿಂದ ಸತ್ತಿದ್ದಾರೆ. ನಮ್ಮ ಆರೋಗ್ಯಕ್ಕೆ ಏನೆಲ್ಲ ಬೇಕು ಅದನ್ನು ಪ್ರಕೃತಿ ನಮಗೆ ಕೊಟ್ಟಿದೆ. ಪ್ರಕೃತಿಯ ವಿರುದ್ಧ ನಾವು ಕೆಲಸ ಮಾಡಬಾರದು.

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತೂಕ ಹೆಚ್ಚುವುದು, ಕಾಲು ನೋವು, ಮಂಡಿ ನೋವು, ಸೊಂಟ ನೋವು ಇರುತ್ತದೆ ಆದರೆ ಬಹಳ ವರ್ಷಗಳ ಹಿಂದಿನ ಜನರಿಗೆ ಯಾವ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ ಕಾರಣ ಆಗಿನ ಕೆಲಸಗಳು ಕೈ ಕಾಲುಗಳಿಗೆ ಶಕ್ತಿ ಬರುವಂತೆ ವ್ಯಾಯಾಮ ಆಗುತ್ತಿತ್ತು. ಈಗಿನ ಕೆಲಸಗಳು ಕೈಕಾಲುಗಳಿಗೆ ಯಾವುದೇ ಶಕ್ತಿ ಸಿಗುವಂಥದ್ದಲ್ಲ. ಹೀಗಾಗಿ ದೇಹದಲ್ಲಿ ನೋವುಗಳೇ ಹೆಚ್ಚಾಗಿದೆ ಆದ್ದರಿಂದ ಪ್ರತಿನಿತ್ಯ ವ್ಯಾಯಾಮ ಮಾಡಲೇಬೇಕು.

ವ್ಯಾಯಾಮವನ್ನು ನಮ್ಮ ಕರ್ತವ್ಯ ಅಥವಾ ನಮ್ಮ ಕೆಲಸ ಎಂದು ತಿಳಿದುಕೊಂಡು ಶ್ರದ್ಧೆಯಿಂದ ಮಾಡಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ, ಪ್ರಕೃತಿಯ ಅನುಸಾರ ನಡೆದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಪ್ರತಿದಿನ ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಿ.

Leave A Reply

Your email address will not be published.