ಜನವರಿಯ ಸಂತಸ ಗಳಿಗೆಗಾಗಿ ಎದುರು ನೋಡುತ್ತಿದ್ದ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಡೆಗೂ ಆ ದಿನ ಬಂದಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 11ರ ಮಧ್ಯಾಹ್ನ ಹೆಣ್ಣು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದಾರೆ ಎಂದು ವಿರಾಟ್ ಕೊಹ್ಲಿ ಸಂತಸ ಹಂಚಿಕೊಂಡಿದ್ದಾರೆ. 2017ರಲ್ಲಿ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಅನುಷ್ಕಾ 2018ರಲ್ಲಿ ತೆರೆಕಂಡಿದ್ದ ಝೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು. ನಂತರ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು ಪಾತಾಳ್ ಲೋಕ್, ಬುಲ್ಬುಲ್ ಸರಣಿ ಚಿತ್ರಗಳನ್ನು ನಿರ್ಮಿಸಿದ್ದರು.

ಈ ಚಿತ್ರಗಳು 2020ರಲ್ಲಿ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗಿದ್ದವು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ವಿರಾಟ್ ಕೊಹ್ಲಿ, ನಾವು ಹೆಣ್ಣು ಮಗುವನ್ನು ಸ್ವಾಗತಿಸಿದ್ದೇವೆ ಎಂದು ಹೇಳಲು ಬಹಳ ಖುಷಿಯಾಗುತ್ತಿದೆ. ಅನುಷ್ಕಾ ಮತ್ತು ಮಗುವಿನ ಬಗ್ಗೆ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು, ಅನುಷ್ಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಖಾಸಗಿತನವನ್ನು ನೀವು ಗೌರವಿಸುತ್ತೀರಾ ಎಂದು ಬಯಸಿದ್ದೇನೆ ಎಂದು ಕೊಹ್ಲಿ ಪೋಸ್ಟ್ ಹಾಕಿದ್ದಾರೆ.

ಅನುಷ್ಕಾ ಮತ್ತು ಕೊಹ್ಲಿ ಅಭಿಮಾನಿಗಳು ಈ ಸುದ್ದಿ ತಿಳಿಯುತ್ತಿದ್ದಂತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. 2021ನೇ ವರ್ಷದ ಆರಂಭದಲ್ಲಿ ಒಳ್ಳೆಯ ಸುದ್ದಿ ಎಂದು ಶುಭಾಶಯ ತಿಳಿಸುತ್ತಿದ್ದಾರೆ. 2020 ಆಗಸ್ಟ್ ತಿಂಗಳಲ್ಲಿ ಅನುಷ್ಕಾ ಶರ್ಮಾ ಗರ್ಭಿಣಿ ಎಂದು ಕೊಹ್ಲಿ ದಂಪತಿ ಅನೌನ್ಸ್ ಮಾಡಿದ್ದರು. ”2021ರಲ್ಲಿ ನಾವು ಮೂವರು ಆಗಲಿದ್ದೇವೆ, ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಲಿದ್ದಾರೆ ಎಂದು ಹೇಳಿ ಬೇಬಿ ಬಂಪ್​ ಫೋಟೋ ಹಂಚಿಕೊಂಡಿದ್ದರು. ಈ ವೇಳೆ ಪ್ರಧಾನಿ ಮೋದಿ ಸೇರಿದಂತೆ ಅವರ ಅಭಿಮಾನಿಗಳು ಶುಭಾಯಶಗಳ ಮಹಾಪೂರ ಹರಿಸಿದ್ದರು. ಅನುಷ್ಕಾ ಶರ್ಮಾ ಜನವರಿ ಆರಂಭದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಟೂರ್ನಿಯಿಂದ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು.

ಕಳೆದವಾರವಷ್ಟೇ ತುಂಬು ಗರ್ಭಿಣಿಯಾಗಿದ್ದ ನಟಿ ಅನುಷ್ಕಾ ವೋಗ್​ ಮ್ಯಾಗಜೀನ್​ಗಾಗಿ ಕ್ಯಾಮೆರಾಗೆ ಫೋಸ್​ ಕೊಟ್ಟು ಎಲ್ಲರಲ್ಲೂ ಹುಬ್ಬೇರಿಸಿದ್ದರು. ಅಲ್ಲದೇ, ಬಸಿರ ಬಯಕೆಯಂತೆ ತಮ್ಮಿಷ್ಟದ ಆಹಾರವನ್ನು ಕೂಡ ತಿನ್ನುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆಸ್ಟೇಲಿಯಾ-ಇಂಡಿಯಾ ಮೊದಲ ಪಂದ್ಯ ಮುಗಿದಾಕ್ಷಣ ಭಾರತಕ್ಕೆ ಮರಳಿದ ವಿರಾಟ್​ ಅನುಷ್ಕಾ ಜೊತೆ ಜೊತೆಯಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದರು. ಈ ವೇಳೆ ಅವರ ಖಾಸಗಿತನಕ್ಕೆ ಅಡ್ಡಿಯಾದ ಹಿನ್ನಲೆ ಅವರು ಕಿಡಿಕೂಡ ಕಾರಿದ್ದರು. ಮಗುವಿನ ಪಾದದ ಫೋಟೋ ಶೇರ್ ಮಾಡಿರುವ ವಿಕಾಸ್ ಕೊಹ್ಲಿ, ‘ಖುಷಿ ತುಂಬಿದೆ, ಮನೆಯಲ್ಲಿ ದೇವತೆ ಇದ್ದಾಳೆ’ ಎಂದು ಫೋಟೋಕ್ಕೆ ಕ್ಯಾಪ್ಶನ್ ನೀಡಿದ್ದಾರೆ.

ಇನ್ನು ವಿರಾಟ್ ಕೂಡ ಸೋಮವಾರ ಮಧ್ಯಾಹ್ನ ನಾವು ಹೆಣ್ಣು ಮಗು ಪಡೆದಿದ್ದೇವೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬ ಖುಷಿಯಾಗುವುದು. ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಅನೇಕರು ಮಹಾಲಕ್ಷ್ಮೀ ಆಗಮನವಾಗಿದೆ, ಇನ್ನು ಮುಂದೆ ಕಪ್ ನಮ್ದೇ ಎನ್ನುತ್ತಿದ್ದಾರೆ. ಕ್ರಿಕೆಟ್ ಮಂದಿ, ಚಿತ್ರರಂಗದ ಗಣ್ಯರು, ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿ ಅನೇಕರು ವಿರುಷ್ಕಾಗೆ ಶುಭಾಶಯ ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *