ನಿಮ್ಮ ಗ್ರಾಮಪಂಚಾಯ್ತಿಯ ಕಾರ್ಯಗಳು: ಈ ವಿಷಯ ನಿಮಗೆ ಗೊತ್ತಿರಲೇಬೇಕು

0 48

ಗ್ರಾಮ ಪಂಚಾಯತ ಎಂದರೆ ಒಂದು ಗ್ರಾಮದ ಸುವ್ಯವಸ್ಥೆಗೆ ಮತ್ತು ಗ್ರಾಮದ ಶ್ರೇಯೋಭಿವೃದ್ಧಿಗೆ,  ಶಿಕ್ಷಣ ವ್ಯವಸ್ಥೆಗೆ ಇನ್ನೂ ಹಲವಾರು ಗ್ರಾಮೀಣ ಯೋಜನೆಗಳಿಗಾಗಿ ಪಂಚಾಯತ್ ರಾಜ್ ಕಾಯ್ದೆ 1993 ರ ಕಾಯ್ದೆಯಂತೆ ಗ್ರಾಮ ಪಂಚಾಯತ ಎಲ್ಲ ಕೆಲಸಗಳನ್ನು ನಿರ್ವಹಿಸುವುದಾಗಿದೆ. ಗ್ರಾಮ ಪಂಚಾಯತ್ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಗ್ರಾಮೀಣ ಸ್ಥಳೀಯ ಸರಕಾರದಲ್ಲಿ ಮೂರು ವಿಭಾಗಗಳಿವೆ. ಅವುಗಳೆಂದರೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಎಂದು ವಿಭಾಗಿಸಲಾಗಿದೆ. ಈ ಗ್ರಾಮ ಪಂಚಾಯತದ ಕಾರ್ಯಗಳಲ್ಲಿಯೂ ಎರಡು ಭಾಗಗಳಿವೆ. ಅವುಗಳೆಂದರೆ ಮೊದಲನೆಯದಾಗಿ ಸಾಮಾನ್ಯ ಕಾರ್ಯಗಳು ಮತ್ತು ಎರಡನೆಯದಾಗಿ ಐಚ್ಛಿಕ ಕಾರ್ಯಗಳು. ಮೊದಲನೆಯದಾಗಿ ಸಾಮಾನ್ಯ ಕಾರ್ಯಗಳಲ್ಲಿ ಬರುವ ಕೆಲಸಗಳೆಂದರೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅಭಿವೃದ್ಧಿಗಾಗಿ ವಾರ್ಷಿಕ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಗ್ರಾಮ ಪಂಚಾಯಿತಿ ಆಯವ್ಯಯ ಪಟ್ಟಿಯನ್ನು ಸಿದ್ಧಪಡಿಸುವುದು ಹಾಗೂ ನೈಸರ್ಗಿಕ ವಿಕೋಪಗಳಿಗೆ ತುತ್ತಾದವರಿಗೆ ಸೂಕ್ತ ಪರಿಹಾರವನ್ನು ನೀಡುವುದು. ಸಾರ್ವಜನಿಕ ಸ್ವತ್ತಿನ ಅತಿ ಕ್ರಮವನ್ನು ತಡೆಯುವುದು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು  ಕ್ರೋಢೀಕರಿಸುವುದು ಗ್ರಾಮಪಂಚಾಯತಿಯ ಕಾರ್ಯವಾಗಿದೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದು ಮತ್ತು ಅಭಿವೃದ್ಧಿ ಪಡಿಸುವುದು ಒಂದು ಮುಖ್ಯ ಕೆಲಸವಾಗಿದೆ. ಕೃಷಿಗಾಗಿ ಯೋಜನೆಗಳನ್ನು ರೂಪಿಸಿ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು. ಜನರ ಸ್ವಉದ್ಯೋಗ ಅಭಿವೃದ್ಧಿ ಪಡಿಸುವುದಕ್ಕಾಗಿ ಕೃಷಿಯ ಜೊತೆಜೊತೆಗೆ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಗೆ ಪ್ರೋತ್ಸಾಹವನ್ನು ನೀಡುವುದು ಪಂಚಾಯತದ ಕಾರ್ಯವಾಗಿದೆ. ಆಯಾಭಾಗದ ಅನುಕೂಲಕ್ಕೆ ತಕ್ಕಹಾಗೆ ಅಂದರೆ ಕೆರೆ ಸಮುದ್ರ, ಹಳ್ಳಗಳ ಪ್ರದೇಶದ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದು ಒಂದು ಕಾರ್ಯವಾಗಿದೆ.

ಗ್ರಾಮ ಪಂಚಾಯತ್ ಇನ್ನೊಂದು ಮುಖ್ಯ ಕಾರ್ಯವೆಂದರೆ ಗ್ರಾಮೀಣ ಮತ್ತು ಗೃಹ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದು.  ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರಿನ ಬಾವಿ ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಡುವುದು,ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದು ಮುಖ್ಯ ಕಾರ್ಯವಾಗಿದೆ. ಪರಿಸರದ ಸ್ವಚ್ಛತೆಯನ್ನು ಕಾಪಾಡಿ ಜಲಮಾಲಿನ್ಯವನ್ನು ನಿಯಂತ್ರಣ ಮಾಡುವುದು. ರಸ್ತೆ, ಸೇತುವೆ ಇತರ ಸಂಪರ್ಕ ಮಾರ್ಗಗಳ ನಿರ್ವಹಣೆ ಮತ್ತು ನಿರ್ಮಾಣಕಾರ್ಯವನ್ನು ಪಂಚಾಯಿತಿ ಒಳಗೊಂಡಿರುತ್ತದೆ. ಗ್ರಾಮಪಂಚಾಯಿತಿಯಲ್ಲಿ ಬರುವ ಹಳ್ಳಿಗಳಿಗೆ ಗ್ರಾಮೀಣ ವಿದ್ಯುದೀಕರಣ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು ಕೂಡ ಗ್ರಾಮಪಂಚಾಯಿತಿಯ ಕಾರ್ಯವಾಗಿದೆ. ಗ್ರಾಮ ಪಂಚಾಯತಿಯಲ್ಲಿ ಸಿಗುವ ಅಸಂಪ್ರದಾಯಕ ಶಕ್ತಿಯ ಮೂಲಗಳನ್ನು ಅಭಿವೃದ್ಧಿಪಡಿಸುವುದು. ಇವತ್ತು ವಯಸ್ಕ ಶಿಕ್ಷಣ ಹಾಗೂ ಅನೌಪಚಾರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಗ್ರಾಮ ಪಂಚಾಯಿತಿಯ ಕಾರ್ಯವಾಗಿದೆ. ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡುವುದು ಗ್ರಾಮ ಪಂಚಾಯಿತಿಯ ಕಾರ್ಯವಾಗಿದೆ. ಹೀಗೆ ಗ್ರಾಮ ಪಂಚಾಯತ್ ಅವು ಗ್ರಾಮೀಣ ಭಾಗದ ಅಭಿವೃದ್ಧಿಗೆ ಮತ್ತು ವ್ಯವಸ್ಥಿತ ಜೀವನಕ್ಕಾಗಿ ಕೆಲಸ ನಿರ್ವಹಿಸುತ್ತದೆ.

Leave A Reply

Your email address will not be published.