ಬೆಳಗ್ಗೆ ಎದ್ದ ತಕ್ಷಣ ಮೈ ಕೈ ನೋವು ಮೂಳೆಗಳ ಗಂಟು, ತಲೆಭಾರ ಇಂತಹ ಸಮಸ್ಯೆಗೆ ಮನೆಮದ್ದು

0 31

ಆಮವಾತವು ಬಹಳಷ್ಟು ಜನರನ್ನು ಕಾಡುತ್ತಿದೆ ಇದರಿಂದ ನೋವನ್ನು ಅನುಭವಿಸುತ್ತಾರೆ ಇದಕ್ಕೆ ಕಾರಣ ಮತ್ತು ಮನೆಮದ್ದುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಆಮವಾತ ಇದು ಸಣ್ಣ ಸಣ್ಣ ಗಂಟುಗಳು ನೋವು ಬರುತ್ತದೆ. ಬೆಳಿಗ್ಗೆ ಎದ್ದಕೂಡಲೆ ನೋವು ಬರುತ್ತದೆ ಮಳೆಗಾಲದಲ್ಲಿ, ಚಳಿಗಾಲದಲ್ಲಿ ನೋವು ಹೆಚ್ಚಾಗಿರುತ್ತದೆ. ರಕ್ತ ಪರೀಕ್ಷೆ ಮಾಡಬೇಕು. ಸಿ.ಆರ್.ಪಿ, ಈ.ಎಸ್.ಆರ್, ಎಂಟಿ ಸಿಸಿಪಿ ಮತ್ತು ಎ.ಎನ್.ಎ ಈ ರೀತಿಯ ರಕ್ತ ಪರೀಕ್ಷೆ ಮಾಡಿದ ನಂತರ ಆಮವಾತ ಇದೆಯೊ ಇಲ್ಲವೊ ತಿಳಿಯುತ್ತದೆ. ಇದಕ್ಕೆ ಆಧುನಿಕ ಔಷಧಿ ಮಾಡಿದರೆ ಲಿವರ್ ಸಮಸ್ಯೆ ಬರಬಹುದು. ಅದಕ್ಕೆ ಭಾರತೀಯ ಔಷಧ ಮಾಡಬೇಕು.

ಕರುಳಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾದಿಂದ ಅಂದರೆ ನಮ್ಮ ರಕ್ತ ಕಣಗಳ ಮೇಲೆ ನಮ್ಮ ದೇಹವೆ ಆಕ್ರಮಣ ಮಾಡುವುದಾಗಿದೆ. ಆಮವಾತದ ನಿವಾರಣೆಗೆ 10 ದಿನಗಳವರೆಗೆ ಪಂಚಕರ್ಮ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು. ಒಮೆಗಾ ತ್ರಿ ಫಾಟಿಯಾಸಿಡ್ ನ್ನು ಬೆಳಿಗ್ಗೆ ಹಾಗೂ ಸಾಯಂಕಾಲ ತೆಗೆದುಕೊಳ್ಳಬೇಕು. ಪ್ರೀಪ್ರೊಬಯೋಟಿಕ್ಸನ್ನು ತೆಗೆದುಕೊಳ್ಳಬೇಕು. ಇದಕ್ಕೆ ಇರುವ ಮನೆಮದ್ದುಗಳು ಯಾವುವೆಂದರೆ 80% ಹುತ್ತದ ಮಣ್ಣು 20% ಸಾಸಿವೆಯನ್ನು ಮಿಕ್ಸಿ ಮಾಡಿ ಸ್ವಲ್ಪ ಬಿಸಿ ಮಾಡಿ ಗಂಟುಗಳಿಗೆ ಹಚ್ಚಿಕೊಳ್ಳಬೇಕು.

ರಾತ್ರಿ ಮಲಗುವಾಗ ಮತ್ತು ಬೆಳಿಗ್ಗೆ ಬಿಸಿ ನೀರಿಗೆ ಉಪ್ಪು ಹಾಕಿ ಕೈ ಕಾಲುಗಳನ್ನು ಅದ್ದಿ ಇಟ್ಟುಕೊಳ್ಳಬೇಕು. ಒಂದು ಚಮಚ ಕೊತ್ತಂಬರಿ, ಒಂದು ಚಮಚ ಜೀರಿಗೆ, ಕಾಲು ಚಮಚ ಒಣ ಶುಂಠಿ ಪುಡಿ, 5, 6ಕಾಳುಮೆಣಸು ಇದಿಷ್ಟು ಪುಡಿ ಮಾಡಿ ಇಟ್ಟುಕೊಂಡು ಒಂದು ಒಂದೂವರೆ ಚಮಚ ಪುಡಿಯನ್ನು ಹಾಕಿ ಕಷಾಯ ಮಾಡಿ ಕುಡಿಯಬೇಕು. ಅರಿಷ್ಣವನ್ನು ಬಳಸಬೇಕು. ಹರಳೆಣ್ಣೆ ಗಿಡದ ಎಲೆಯನ್ನು ಬಿಸಿ ಮಾಡಿ ನೋವು ಇರುವ ಜಾಗದಲ್ಲಿ ಇಟ್ಟುಕೊಳ್ಳಬೇಕು. ಹುರುಳಿ ಕಾಳು, ಅಮೃತಬಳ್ಳಿ ಚೂರ್ಣ, ಒಣಶುಂಠಿ ಮತ್ತು ಜೇನುತುಪ್ಪ, ಹುರುಳಿಕಾಳುಗಳನ್ನು ಪುಡಿ ಮಾಡಿಟ್ಟುಕೊಳ್ಳಬೇಕು ಆ ಪುಡಿಗೆ ಅಮೃತ ಬಳ್ಳಿ ಚೂರ್ಣ, ಶುಂಠಿಯನ್ನು ಜೇನುತುಪ್ಪದಲ್ಲಿ ಕಲಸಿ ಉಂಡೆ ಮಾಡಿ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಸಂಜೆ ತೆಗೆದುಕೊಳ್ಳಬೇಕು.

ಓಮಕಾಳು ಮತ್ತು ಶುಂಠಿ ಪುಡಿ ಮತ್ತು ಹರಳೆಣ್ಣೆ ಎಲೆಯನ್ನು ಜಜ್ಜಿ ಕ್ರೀಂನಂತೆ ಮಾಡಿಕೊಂಡು ಹಚ್ಚಿಕೊಳ್ಳಬೇಕು. ಸೊಲಿಬಲ್ ಫೈಬರ್ ನ್ನು ಊಟದ ಮೊದಲು ನಾಲ್ಕು ಚಮಚ ಸೇರಿಸಿ 3 ತಿಂಗಳವರೆಗೆ ಕುಡಿಯಬೇಕು ಇದರಿಂದ ಕರುಳಿನಲ್ಲಿ ಒಳ್ಳೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇಂಗ್ಲೀಷ್ ಅಥವಾ ಅಲೋಪತಿ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಪೂರ್ಣವಾಗಿ ಉಪಶಮನವಾಗುವುದಿಲ್ಲ. ಆದ್ದರಿಂದ ಮನೆ ಮದ್ದು ಮತ್ತು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಗುಣವಾಗುತ್ತದೆ.

Leave A Reply

Your email address will not be published.