ಹಲವು ಧಾನ್ಯಗಳಿಂದ ಸಾಕಷ್ಟು ಉಪಯೋಗವಿದೆ. ಅದರಂತೆ ಸಬ್ಜಾ ಬೀಜವನ್ನು ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಯಾರು ಸೇವಿಸಬಹುದು ಯಾರು ಸೇವಿಸಬಾರದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಬ್ಜಾ ಬೀಜ ಕಾಮ ಕಸ್ತೂರಿ ಬೇಸಿಲ್ ಸೀಡ್ಸ್ ಎನ್ನುವರು. ಬೇಸಿಗೆ ಕಾಲದಲ್ಲಿ ದೇಹದ ಉಷ್ಣಾಂಶ ಹೆಚ್ಚಾಗಿರುತ್ತದೆ ಆಗ ಕಾಮ ಕಸ್ತೂರಿ ಬೀಜದ ಜ್ಯೂಸ್ ಕುಡಿಯುವುದರಿಂದ ಉಷ್ಣಾಂಶ ಕಡಿಮೆಯಾಗುತ್ತದೆ. ಈ ಬೀಜದಲ್ಲಿ ಫೈಬರ್ ಅಂಶ ಇರುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಇದರಲ್ಲಿ ಮನುಷ್ಯನಿಗೆ ಬೇಕಾದ ಕಬ್ಬಿಣ, ಕಾಪರ್, ಇತರೆ ಖನಿಜಾಂಶಗಳು ಸಮೃದ್ಧಿಯಾಗಿರುತ್ತದೆ. ಇದನ್ನು ನಾವು ಪ್ರತಿದಿನ ಕುಡಿಯುವುದರಿಂದ ಜೀವ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಎಂಟಿ ಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಬ್ಯಾಕ್ಟೀರಿಯಾದಿಂದ ನಮ್ಮನ್ನು ರಕ್ಷಿಸುತ್ತದೆ. ಇದನ್ನು ರಾತ್ರಿ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ವೇಸ್ಟ್ ಅಥವಾ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಶಕ್ತಿ ಹೆಚ್ಚುವುದರಿಂದ ಗ್ಯಾಸ್, ಅಸಿಡಿಟಿ ನಿವಾರಣೆಯಾಗುತ್ತದೆ. ಒಂದು ತಿಂಗಳು ಎರಡು ಹೊತ್ತು ಎರಡು ಸ್ಪೂನ್ ತೆಗೆದುಕೊಳ್ಳುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಬೇಸಿಗೆ ಹೀಟ್ ನಿಂದ ನಾಲಿಗೆ ಹುಣ್ಣು, ಅಂಗೈ ಉರಿ, ಪಾದದಲ್ಲಿ ಉರಿ, ಹೊಟ್ಟೆ ಉರಿಯಾದಾಗ ಮಜ್ಜಿಗೆಯೊಂದಿಗೆ ಈ ಬೀಜವನ್ನು ಹಾಕಿ ಕುಡಿಯುವುದರಿಂದ ಗುಣವಾಗುತ್ತದೆ. 5ವರ್ಷದ ನಂತರದ ಮಕ್ಕಳಿಗೆ ಅರ್ಧ ಗಂಟೆ ನೆನೆಸಿಟ್ಟು ಸಬ್ಜಾ ಕುಡಿಸುವುದರಿಂದ ಹೊಟ್ಟೆ ತಂಪಾಗಿರುತ್ತದೆ.

ಯಾವುದೇ ಜ್ಯೂಸ್ ನಲ್ಲಿ ಒಂದು ಚಮಚ ಸಬ್ಜಾ ಬೀಜವನ್ನು ಸೇರಿಸಿ ಕುಡಿಯುವುದರಿಂದ ರುಚಿಯು ಹೆಚ್ಚುತ್ತದೆ ಮತ್ತು ಆರೋಗ್ಯವು ವೃದ್ದಿಯಾಗುತ್ತದೆ. ಈ ಬೀಜವನ್ನು ಸೇವಿಸುವುದರಿಂದ ಚರ್ಮದ ಸಮಸ್ಯೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ. ಬಿ.ಪಿ ಮತ್ತು ಶುಗರ್ ಇರುವವರು ಈ ಬೀಜವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಸಮತೋಲನದಲ್ಲಿರುತ್ತದೆ. ಗರ್ಭಿಣಿ ಸ್ತ್ರೀಯರು ಈ ಬೀಜವನ್ನು ಸೇವಿಸಬಾರದು ಇದರಿಂದ ಯುರಿನರಿ ಇನ್ ಫೆಕ್ಷನ್ ಆಗುತ್ತದೆ. ಮಕ್ಕಳಿಗೆ ಹಾಲು ಕುಡಿಸುವ ಮಹಿಳೆಯರು ಈ ಬೀಜವನ್ನು ಸೇವಿಸಬಾರದು. ಮಹಿಳೆಯರು ತಿಂಗಳಾನುಗಟ್ಟಲೆ ಇದನ್ನು ಸೇವಿಸುವುದರಿಂದ ಕೆಲವರಿಗೆ ಪೀರಿಯಡ್ ಸಮಸ್ಯೆ ಬರುವ ಚಾನ್ಸ್ ಇರುತ್ತದೆ. ಮಹಿಳೆಯರು ಅಪರೂಪಕ್ಕೆ ಕುಡಿದರೆ ಯಾವುದೇ ಸಮಸ್ಯೆಯಿಲ್ಲ. ಒಂದು ಚಮಚ ಸಬ್ಜಾ ಬೀಜವನ್ನು ಒಂದು ಪಾತ್ರೆಯಲ್ಲಿ ತುಂಬಾ ನೀರು ಹಾಕಿ ಒಂದು ರಾತ್ರಿ ನೆನಸಿಡಬೇಕು ನೆನೆಸಿಟ್ಟ ಬೀಜವನ್ನು ಒಂದು ಲೋಟ ನೀರಿಗೆ ಮಿಕ್ಸ್ ಮಾಡಿ ಹಾಗೆ ಕುಡಿಯಬಹುದು ಅಥವಾ ಹಾಲು ಅಥವಾ ಮಜ್ಜಿಗೆಯೊಂದಿಗೆ ಸೇರಿಸಿ ಕುಡಿಯಬಹುದು.

Leave a Reply

Your email address will not be published. Required fields are marked *