ಹಾಲಿನಲ್ಲಿ ಕೆನೆ ದಪ್ಪವಾಗಿ ತಗೆಯುವ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

0 31

ನಾವು ಈ ಲೇಖನದ ಮೂಲಕ ರೊಟ್ಟಿಗಿಂತ ದಪ್ಪವಾಗಿ ಹಾಲಿನ ಕೆನೆಯನ್ನು ಹೇಗೆ ತೆಗೆಯುವುದು ಅನ್ನೋದನ್ನು ತಿಳಿದುಕೊಳ್ಳೋಣ. ಮೊದಲು ಹಾಲು ಕಾಯಿಸುವ ಪಾತ್ರೆಯನ್ನು ಸ್ವಲ್ಪ ನೀರು ಹಾಕಿ ತೊಳೆದು ಕೊಂಡು ನಂತರ ಅದಕ್ಕೆ ಹಾಲನ್ನು ಹಾಕಬೇಕು. ಪ್ಯಾಕೆಟ್ ಹಾಲಾದರೂ ಸರಿ ಅಥವಾ ಮನೆಯ ಹತ್ತಿರ ಸಿಗುವ ಹಾಲು ಆದರೂ ಸರಿ ಅಥವಾ ಮನೆಯಲ್ಲಿಯೇ ಸಿಗುವ ಹಾಲು ಆದರೂ ಸರಿಯೇ ಹಾಲನ್ನು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಹಾಲಿನ ಪಾತ್ರೆಯನ್ನು ಸ್ಟೋವ್ ಮೇಲೆ ಇಟ್ಟು ಮೊದಲಿಗೆ ದೊಡ್ಡ ಉರಿಯಲ್ಲಿ ಕಾಯಿಸಿಕೊಳ್ಳಬೇಕು.

ಇಲ್ಲಿ ನಾವು ಒಂದು ಜಾಣತನವನ್ನು ಬಳಸಬಹುದು. ಹಾಲು ಕಾಯಲು ಇಟ್ಟಾಗ ಉಕ್ಕಿ ಬಂದು ಚೆಲ್ಲಿ ಹೋಗುತ್ತದೆ ಆಗ ನಾವು ಹಾಲು ಕಾಯುವವರೆಗೂ ಅಲ್ಲಿಯೇ ನಿಂತಿರಬೇಕು. ಹಾಗೆ ಆಗದಂತೆ ಹಾಲು ಕಾಯಿಸಲು ಇತ್ತ ಪಾತ್ರೆಗೆ ಸ್ವಲ್ಪ ಎಡ್ಜ್ ಅಲ್ಲಿ ತುಪ್ಪವನ್ನು ಹಚ್ಚಿದರೆ ಹಾಲು ಉಕ್ಕಿ ಬಂದು ಚೆಲ್ಲುವುದಿಲ್ಲ. ಹಾಲು ಉಕ್ಕಿ ಬರುವವರೆಗೂ ದೊಡ್ಡ ಉರಿಯಲ್ಲಿಯೇ ಕಾಯಿಸಬೇಕು. ಉಕ್ಕಿ ಮೇಲೆ ಬಂದ ತಕ್ಷಣ ಸ್ಟೋವ್ ಉರಿಯನ್ನು ಸಣ್ಣ ಮಾಡಬೇಕು. ಸಣ್ಣ ಉರಿಯಲ್ಲಿ ಐದು ನಿಮಿಷಗಳ ಕಾಲ ಚೆನ್ನಾಗಿ ಹಾಲನ್ನು ಕಾಯಿಸಿ ನಂತರ ಸ್ಟೋವ್ ಆಫ್ ಮಾಡಬೇಕು. ನಂತರ ಹಾಲಿನ ಪಾತ್ರೆಯನ್ನು ಒಂದು ಕಡೆ ಇತ್ತು , ಪದೇ ಪದೇ ಮುಟ್ಟದೆ ಹಾಲಿನ ಪಾತ್ರೆಗೆ ಒಂದು ಪ್ಲೇಟ್ ಮುಚ್ಚಬೇಕು. ಪ್ಲೇಟ್ ಮುಚ್ಚುವಾಗ ಪೂರ್ತಿಯಾಗಿ ಮುಚ್ಚಬಾರದು ಹಾಗೇ ಒಂದರಿಂದ ಒಂದೂವರೆ ಗಂಟೆಗಳ ಕಾಲ ಅರ್ಧ ಪಾತ್ರೆಗೆ ಮಾತ್ರ ಮುಚ್ಚಿಡಬೇಕು. ನಂತರ ಸಂಪೂರ್ಣವಾಗಿ ಹಾಲು ತಣ್ಣಗಾದ ನಂತರ ಹಾಲಿನ ಪಾತ್ರೆಯನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು. ನಂತರ ಎರಡೂ ವರೆ ಗಂಟೆಗಳ ನಂತರ ಫ್ರಿಡ್ಜ್ ನಿಂದ ಹಾಲಿನ ಪಾತ್ರೆಯನ್ನು ಹೊರಗೆ ತೆಗೆದು ಕೆನೆಯ ಸುತ್ತಲೂ ಚಾಕುವಿನ ಸಹಾಯದಿಂದ ಸೈಡ್ ಬಿಡಿಸಿಕೊಂಡು ಕೆನೆಯನ್ನು ತೆಗೆದಿಟ್ಟುಕೊಳ್ಳಬಹುದು. ಈ ಕೆನೆಯನ್ನು ನೀವು ಬೇಕಿದ್ದರೆ ಕ್ರೀಮ್ ಆಗಿಯೂ ಬಳಸಬಹುದು ಅಥವಾ ಬೆಣ್ಣೆ ಮಾಡಿಕೊಳ್ಳಲು ಕೂಡಾ ಬಳಸಿಕೊಳ್ಳಬಹುದು.

ಈ ರೀತಿ ಹಾಲಿನಿಂದ ಕೆನೆ ತೆಗೆದು ಅದರಿಂದ ಬೆಣ್ಣೆ ತೆಗೆಯುವುದರಿಂದ ದುಡ್ಡನ್ನು ಕೂಡಾ ಉಳಿತಾಯ ಮಾಡಬಹುದು. ಒಂದು ಕಡೆ ಪ್ರತೀ ತಿಂಗಳು ಹಾಲಿಗೂ ದುಡ್ಡು ಕೊಡಬೇಕು ಇನ್ನೂ ಬೆಣ್ಣೆ, ತುಪ್ಪ ತಿನ್ನುವವರು ಇದ್ದರೆ ಅದಕ್ಕೂ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕು. ಅದರ ಬದಲು ಹೀಗೆ ಹಾಲಿನಿಂದ ದಪ್ಪವಾದ ಕೆನೆ ತೆಗೆದುಕೊಂಡು ಅದರಿಂದಲೇ ಬೆಣ್ಣೆ ತುಪ್ಪವನ್ನು ತಯಾರಿಸಿಕೊಳ್ಳಬಹುದು.

Leave A Reply

Your email address will not be published.