ಪುದಿನ ಬರಿ ಅಡುಗೆಗೆ ಅಷ್ಟೇ ಅಲ್ಲ ಇದರಲ್ಲಿದೆ 10 ಬೇನೆಗಳಿಗೆ ಮನೆಮದ್ದು

0 5

ರಿಫ್ರೆಶಿಂಗ್ ಮಿಂಟ್ ಎನ್ನುವ ಪದವನ್ನು ನಾವು ಸಾಕಷ್ಟು ಜಾಹೀರಾತುಗಳಲ್ಲಿ ಹಲವಾರು ಬಾರಿ ಕೇಳಿಯೇ ಇರುತ್ತೇವೆ. ಈ ರಿಫ್ರೆಶಿಂಗ್ ಮಿಂಟ್ ಅನ್ನೋದು ಬೇರೆ ಯಾವುದೂ ಅಲ್ಲ ಪುದೀನಾ ಎಲೆ ಆಗಿದೆ. ಪುದಿನ ಗಿಡವನ್ನು ನಾವು ಎಲ್ಲಿ ಬೆಳೆಸಿದರು ಇದು ಬೆಳೆಯುತ್ತದೆ. ಮಾರ್ಕೆಟ್ನಲ್ಲಿ ಸಿಗುವಂತಹ , ನಾವು ಪ್ರತಿನಿತ್ಯ ಬಳಕೆ ಮಾಡುವಂತಹ ಟೂತ್ಪೇಸ್ಟ್, ಬಬಲ್ ಗಮ್, ಬಾಯಿಯ ವಾಸನೆ ಹೋಗಿಸಲು ತಿನ್ನುವ ರಿಫ್ರೇಶ್ನರ್, ಕ್ಯಾಂಡಿ ಹಾಗೂ ಮೂಗು ಕಟ್ಟಿದಾಗ ತೆಗೆದುಕೊಳ್ಳುವ ಇನ್ಹೇಲರ್ ಇವೆಲ್ಲವುಗಳಲ್ಲಿ ಕೂಡಾ ಪುದೀನಾ ಫ್ಲೇವರ್ ಇದ್ದೆ ಇರುತ್ತದೆ. ಬೇಸಿಗೆಯಲ್ಲಿ ಪುದೀನಾ ಬಳಕೆ ಮಾಡುವುದರಿಂದ ದೇಹ ತಂಪಾಗಿ ಇರುತ್ತದೆ ಹಾಗೂ ಉಷ್ಣತೆ ಸಮತೋಲನದಲ್ಲಿ ಇರುತ್ತದೆ ಹಾಗೂ ಪಿತ್ತದ ಸಮಸ್ಯೆ ಕೂಡಾ ನಿಯಂತ್ರಣದಲ್ಲಿ ಇರುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ನಮ್ಮ ಭಾರತೀಯ ಅಡುಗೆ ಪದ್ಧತಿಯಲ್ಲಿ ಅನಾದಿಕಾಲದಿಂದಲೂ ಸಹ ಪುದೀನಾ ಚಟ್ನಿ, ಪುದೀನಾ ಬಾತ್, ಪುದೀನಾ ತಂಬುಳಿ ಹಾಗೂ ಪುದೀನಾ ಹಾಗೂ ನಿಂಬೆ ಪೇಯವನ್ನು ಮಾಡುವುದನ್ನು ಅನುಸರಿಸುತ್ತ ಇದ್ದೇವೆ. ಈ ಪುದೀನಾ ನೋಡೋಕೆ ತುಂಬಾ ಚಿಕ್ಕದಾಗಿ ಇರುವ ಗಿಡ ಅಂತ ಅನ್ನಿಸಿದರೂ ಕೂಡಾ ಇದರಿಂದ ನಮಗೆ ಉಂಟಾಗುವ ಲಾಭಗಳು ಸಾಕಷ್ಟು ಇವೆ. ಪುದೀನಾ ಸೊಪ್ಪಿನ ಕೆಲವು ಪ್ರಯೋಜನಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

ಕೆಲವು ಪುದೀನಾ ಎಲೆಗಳನ್ನು ಗ್ರೀನ್ ಟೀ ಜೊತೆಗೆ ಬೆರೆಸಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆ ದೂರವಾಗುವುದು. ಪುದೀನಾ ಎಲೆಯನ್ನು ಸೇವಿಸುವುದರಿಂದ ಆಸಿಡಿಟಿ ಕಡಿಮೆಯಾಗುವುದು ಹಾಗೂ ಗ್ಯಾಸ್ಟ್ರಿಕ್, ವಾಂತಿ ಹೊಟ್ಟೆಯುಬ್ಬರ ಹೊಟ್ಟೆನೋವಿನ ಅಂತಹ ಸಮಸ್ಯೆ ಇದ್ದರೂ ಕೂಡ ಕಡಿಮೆಯಾಗುವುದು. ಇನ್ನು ನಾವು ಏನಾದರೂ ತಿಂದ ತಕ್ಷಣ ಬಾಯಿಯಲ್ಲಿ ಲಾಲಾರಸ ಹೆಚ್ಚಾಗಿ ಬರುತ್ತದೆ. ಜೀರ್ಣಕ್ರಿಯೆಗೆ ಸಹಾಯಕಾರಿ ಆಗುವ ಕಿಣ್ವಗಳು ಸರಿಯಾಗಿ ಉತ್ಪತ್ತಿ ಆಗಿ ಮುಂದೆ ನಾವು ತಿನ್ನುವಂತಹ ಆಹಾರವನ್ನೂ ಅರಗಿಸಿಕೊಳ್ಳಲು ನಮ್ಮ ಹೊಟ್ಟೆ ಸಿದ್ಧವಾಗಿ ಇರುತ್ತದೆ. ಊಟಕ್ಕೆ ಮುಂಚೆ ಪುದೀನ ಎಲೆಯ ಪಾನಿಯವನ್ನು ಮಾಡಿಕೊಂಡು ಕುಡಿಯುವುದು ಪಾಶ್ಚಾತ್ಯ ದೇಶಗಳಲ್ಲಿ ಒಂದು ರೀತಿಯ ಅಭ್ಯಾಸವಾಗಿಬಿಟ್ಟಿದೆ. ಇನ್ನು ನಾವು ಪುದೀನ ಎಲೆಯ ವಾಸನೆಯನ್ನು ಸೇವಿಸುವುದರಿಂದ ತಲೆನೋವು ಬಹುಬೇಗ ಕಡಿಮೆಯಾಗುವುದು. ಅದಕ್ಕಾಗಿ ನಾವು ವೀಕ್ಸ್ ಅಥವಾ ಜಂಡು ಬಾಂಬ್ ಹಚ್ಚಿಕೊಂಡಾಗ ಅದರಲ್ಲಿ ಪುದಿನ ಅಂಶ ಇರುವುದರಿಂದ ಬಹುಬೇಗ ನಮಗೆ ತಲೆನೋವು ಕಡಿಮೆಯಾಗುವುದು. ಶೀತವಾಗಿ ಮೂಗು ಕಟ್ಟಿದ್ದರೆ ಪುದಿನ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿದ್ದು ಕಡಿಮೆಯಾಗುವುದು. ಶೀತದಿಂದ ಮೂಗು ಕಟ್ಟಿದ್ದರೆ ಬಿಸಿ ನೀರಿಗೆ ಒಂದು ಹಿಡಿ ಪುದಿನ ಎಲೆಯನ್ನು ಹಾಕಿ ಹಬೆಯಲ್ಲಿ ಬರುವ ಪುದಿನ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿದ ಸಮಸ್ಯೆ ನಿವಾರಣೆಯಾಗುವುದು. ಹಾಗೂ ಅಷ್ಟೇ ಅಲ್ಲದೇ ತಲೆ ಭಾರ ಕೂಡಾ ಕಡಿಮೆ ಆಗುವುದು.

ಇನ್ನು ಕೆಲವರಿಗೆ ಏನಾದರೂ ತಿಂದ ತಕ್ಷಣವೇ ಹೊಟ್ಟೆ ಹಿಂಡಿದ ಅನುಭವ ಆಗಿ ಬಾತ್ ರೂಮಿಗೆ ಹೋಗಲೇಬೇಕಾಗಿರುತ್ತದೆ. ಪ್ರತೀ ದಿನ ಹೀಗೆ ಆದರೆ ಅದಕ್ಕೆ ಊಟ ಆದ ನಂತರ ಪುದೀನಾ ಕಷಾಯವನ್ನು ಕುಡಿಯಬೇಕು. ಆಸ್ತಾಮಾ ತೊಂದರೆ ಇರುವವರು ಪುದೀನಾ ಕಷಾಯ ಕುಡಿಯುವುರಿಂದ ಉಸಿರಾಟದ ಸಮಸ್ಯೆ ಕಡಿಮೆ ಆಗುವುದು. ಪುದೀನಾ ಎಲೆಯನ್ನು ಜಜ್ಜಿ ರಸ ತೆಗೆದು ಅದಕ್ಕೆ ಶುಂಠಿ ಮತ್ತು ತುಳಸಿ ರಸ ಹಾಗೂ ಸ್ವಲ್ಪ ಜೇನುತುಪ್ಪ ಸೇರಿಸಿ ಮಕ್ಕಳಿಗೆ ನೀಡುವುದರಿಂದ ಶೀತ ಹಾಗೂ ಕಫ ನಿವಾರಣೆಯಾಗುವುದು. ಪುದೀನಾ ಎಲೆಯನ್ನು ಸೇರಿಸಿದ್ದರಿಂದ ಕರುಳಿನ ಅಲ್ಸರ್ ಸಮಸ್ಯೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು . ಒಂದು ಹಿಡಿ ಪುದೀನಾ ಎಲೆಯನ್ನು ಸೋಸಿಕೊಂಡು ಅದನ್ನು ಜಜ್ಜಿ ಅದಕ್ಕೆ ಒಂದು ಸ್ವಲ್ಪ ಶುಂಠಿ ಜೇನುತುಪ್ಪ ಹಾಗೂ ಜೀರಿಗೆಯನ್ನು ಸೇರಿಸಿ ಪ್ರತಿದಿನ ಮೂರರಿಂದ ನಾಲ್ಕು ಕಪ್ ಕುಡಿಯುವುದರಿಂದ ರಕ್ತ ಶುದ್ಧಿಯಾಗುವುದು. ಚರ್ಮದ ಅಲರ್ಜಿಯನ್ನು ಕೂಡ ಕಡಿಮೆ ಮಾಡುತ್ತದೆ. ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡುತ್ತದೆ. ಪುದಿನ ಎಲೆಗಳಲ್ಲಿ ಕ್ಯಾಲ್ಸಿಯಂ ಫಾಸ್ಪರಸ್ ಮತ್ತು ವಿಟಮಿನ್ ಸಿ , ಡಿ ಅಂಶಗಳು ಇರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಪುದಿನ ಎಲೆ ಸೇವನೆ ಮಾಡುವುದರಿಂದ ಹಲ್ಲು ಹುಳುಕಾಗುವುದನ್ನೂ ಕೂಡ ನಿವಾರಣೆ ಮಾಡುತ್ತದೆ. ಸ್ವಲ್ಪ ಪುದೀನಾ ಎಲೆಗಳನ್ನು ಅಗಿದು ತಿನ್ನುವುದರಿಂದ ಬಾಯಿಯ ದುರ್ನಾತ ಕಡಿಮೆಯಾಗುವುದು. ಪುದೀನಾ ಎಲೆಯನ್ನು ಅಗಿದು ತಿನ್ನುವುದರಿಂದ ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಕ್ಯಾನ್ಸರನ್ನು ಗುಣಪಡಿಸಬಹುದಾದ ಅಂಶ ಕೂಡ ಪುದಿನ ಎಲೆಯಲ್ಲಿ ಇದೆಯಂತೆ. ಶ್ವಾಸಕೋಶ ಹಾಗೂ ಕರುಳಿಗೆ ಸಂಬಂಧಿಸಿದ ಕ್ಯಾನ್ಸರ್ ಅನ್ನು ತಡೆಗಟ್ಟುವ ಅಂಶಗಳು ಇವೆ ಹಾಗಾಗಿ ನಾವು ಹೆಚ್ಚಾಗಿ ಪುದೀನ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಲಾಭಗಳೆ ಹೆಚ್ಚಾಗಿದೆ ಹೊರತು ಯಾವುದೇ ಅಡ್ಡಪರಿಣಾಮಗಳು ಇದರಿಂದ ಆಗದು.

Leave A Reply

Your email address will not be published.