ರಾಯರ ನಂಬಿ ಕೆಟ್ಟವರಿಲ್ಲ ಮನುಜ ಎನ್ನುವ ಮಾತಿದೆ ಪೂಜ್ಯಾಯ ರಾಘವೇಂದ್ರ ಸತ್ಯ ಧರ್ಮ ರತಾಯಚ ಭಾಜತಂ ಕಲ್ಪ ವೃಕ್ಷಾಯ ನಮತಃ ಕಾಮಧೇನು ನಮಃ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ ಪೂಜಿಸಿದರೆ ಶ್ರೀ ರಾಘವೇಂದ್ರ ಸ್ವಾಮಿಯ ಕೃಪಾಕಟಾಕ್ಷ ನಮ್ಮ ಪಾಲಿಗೆ ಸದಾ ಇರುತ್ತೆ. ಇನ್ನು ರಾಯರ ಪವಾಡ ಬಗ್ಗೆ ಎಲ್ಲರಿಗೂ ಗೊತ್ತಿರುವಂತೆ ಎಷ್ಟೋ ಜನರಿಗೆ ಸಂತಾನ ಭಾಗ್ಯ ಹಾಗೂ ಹಲವಾರು ಭಕ್ತರ ಕಷ್ಟ ಕಾರ್ಪಣ್ಯ ನಿರ್ಮೂಲನೆ ಮಾಡಿದ್ದಾರೆ ಇನ್ನು ಗುರುವಾರ ರಾಯರ ಆರಾಧನೆ ಭಕ್ತಿಯಿಂದ ಪೂಜಿಸಿದಲ್ಲಿ ಅವರ ಸಕಲ ಕಷ್ಟ ನೆರವೇರುವುದು

ಹಲವಾರು ಪುಣ್ಯ ಕ್ಷೇತ್ರದಲ್ಲಿ ತೀರ್ಥದ ಜೊತೆ ಮಂತ್ರಾಕ್ಷತೆಯನ್ನು ನೀಡುತ್ತಾರೆ ಇದರಿಂದ ಮಹತ್ವವನ್ನು ಇಂದಿನ ಯುವಪೀಳಿಗೆ ಅರಿವಿಲ್ಲ ಇನ್ನು ರಾಯರ ಮಠದಲ್ಲಿ ಕೊಡುವ ಮಂತ್ರಾಕ್ಷತೆ ತುಂಬಾ ಶಕ್ತಿಯುತ ಆಗಿದ್ದು ಇಂದು ಮಂತ್ರಾಕ್ಷತೆಯನ್ನು ಅರ್ಧ ತಲೆ ಮೇಲೆ ಇಲ್ಲ ನೆಲ ಮೇಲೆ ಹಾಗೂ ತಮ್ಮ ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ ಇದು ಅಕ್ಷರಶಃ ತಪ್ಪು. ಅಕ್ಷತೆಗೆ ಅದರದೇ ಆದ ಮಹಿಮೆ ಇದೆ ಮದುವೆಯಲ್ಲಿ ವಧು ವರರ ಮೇಲೆ ಹಾಕುವ ಆಕ್ಷತೆಗೆ ಸಾವಿರಾರು ಪ್ರಾರ್ಥನೆ ಇರುವುದು ಇನ್ನು ಮಂತ್ರಾಲಯದ ಅಲ್ಲಿ ನೀಡುವ ರಾಯರ ಆರ್ಶಿವಾದ ಮಂತ್ರಾಕ್ಷತೆಯ ರಹಸ್ಯದ ಬಗ್ಗೆ ಇಂದಿನ ಲೇಖನದಲ್ಲಿ ಅಲ್ಲಿ ತಿಳಿಯೋಣ .

ಮಂತ್ರಾಲಯದಲ್ಲಿ ರಾಯರ ದರ್ಶನದ ನಂತರ ಅಲ್ಲಿ ನೀಡುವ ಮಂತ್ರಾಕ್ಷತೆಗೆ ಅಪಾರ ಶಕ್ತಿ ಇದ್ದು ಅದನ್ನು ಸ್ವೀಕರಿಸಿದ ಮೇಲೆ ನೆಲಕ್ಕೆ ಚೆಲ್ಲದೇ ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿ ದೇಹದ ಬಲಭಾಗದ ಜೇಬಿನಲ್ಲಿ ಇಟ್ಟುಕೊಂಡು ಮನೆಗೆ ಹೋದಮೇಲೆ ದೇವರ ಮನೆಯಲ್ಲಿ ಇಟ್ಟು ನಂತರ ಶ್ರೀಗಂಧ ನೀರಿನಲ್ಲಿ ಕಲೆಸಿ ಅದುಕ್ಕೆ ಒಂದೆರಡು ತುಳಸಿ ದಳವನ್ನು ಹಾಕಿ ತಲೆಯ ಮೇಲೆ ಪ್ರೋಕ್ಷಣೆ ಮಾಡುತ್ತ ಗುರು ರಾಯರ ನೆನೆಯುತ ತಮ್ಮ ಕೆಲಸದ ಬಗ್ಗೆ ರಾಯರಲ್ಲಿ ಬೇಡಿದಲ್ಲಿ ಅವರು ಅಂದುಕೊಂಡ ಕೆಲಸ ಯಶಸ್ಸು ಕಟ್ಟಿಟ್ಟ ಬುತ್ತಿ ರಾಯರ ಮಂತ್ರಾಕ್ಷತೆಯನ್ನು ಶೇಕರಣೆ ಮಾಡಿಟ್ಟುಕೊಂಡು ದಿನ ಹೊರಗೆ ಹೋಗುವ ವೇಳೆಯಲ್ಲಿ ಎರಡು ಕಾಳನ್ನು ರಾಯರ ನೆನೆಯುತ ತಲೆ ಮೇಲೆ ಹಾಕಿಕೊಂಡರೆ ಯಾವುದೇ ದುಷ್ಟ ಶಕ್ತಿ ಹತ್ತಿರ ಸುಳಿಯೋಲ್ಲ ಮತ್ತು ಅಂದುಕೊಂಡ ಕೆಲಸ ಯಶಸ್ಸು ಸಿಗುವುದು ಹಾಗೂ ಆರೋಗ್ಯ ಸಮಸ್ಯೆ ಕೂಡ ನಿವಾರಣೆ ಸಾಧ್ಯ . ಹಾಗಾಗಿ ಮಂತ್ರಾಕ್ಷತೆಯನ್ನು ಜೀವನ ಅಮೃತ ಎಂದು ಕರೆಯುತ್ತಾರೆ

ಮಂತ್ರಿಸಿದ ಮಂತ್ರ ಪೂರ್ವಕವಾದ ಅಕ್ಷತೆಯನ್ನು ಮಂತ್ರಾಕ್ಷತೆ ಎಂದು ಕರೆಯುತ್ತಾರೆ ಗುರುವಿನ ಮೂಲಕ ಪಡೆಯುವ ಅಕ್ಷತೆಯನ್ನು ಸುವರ್ಣ ಮಂತ್ರಾಕ್ಷತೆ ಎಂದು ಕರೆಯುತ್ತಾರೆ ದೇಹ ಪ್ರಾಣ ಹಾಗೂ ಆತ್ಮಗಳಿಗೆ ಪೋಷಕ ಆಗಿದೆ ಇದು ದೇಹಕ್ಕೆ ಕವಚ ಇದ್ದ ಹಾಗೆ ಇಷ್ಟ ಪ್ರಾಪ್ತಿ ಅನಿಷ್ಟ ನಿವೃತ್ತಿ ದೌರ್ಭಾಗ್ಯ ನಾಶ ಹಾಗೂ ದಿವ್ಯತ್ವದ ಉದಯ ಈ ಮಂತ್ರಾಕ್ಷತೆಗಿದೆ ಅರ್ಪಣೆ ಹಾಗೂ ಅನುಗ್ರಹ ದ್ವಿಮುಖ ಸಂಹವನನ್ನು ಈ ಮಂತ್ರಾಕ್ಷತೆ ನಿಭಾಯಿಸುತ್ತದೆ ಆದ್ಯತ್ಮಿಕವಾಗಿ ಹೇಳುವುದಾದರೆ ಈ ಅಕ್ಷತೆ ಫಲಾಪೇಕ್ಷೆ ಕೂಡ ಹೌದು ಒಂದು ಬೀಜ ಮೊಳಕೆ ಒಡೆದು ಪಕ್ವವಾಗಿ ಹೆಮ್ಮರವಾಗಿ ಸಿಗುವ ಫಲವು ಹೌದು ಧಾರ್ಮಿಕ ವಿಧಿ ವಿಧಾನ ಅಲ್ಲಿ ಉಪಯೋಗಿಸುವ ಅಕ್ಷತೆಯಲ್ಲಿ ಶ್ರೇಯಸ್ಸು ಅರ್ಶಿವಾದ ಪ್ರತೀಕ ಆಗಿದೆ

ಹಿಂದೆ ಗುರು ರಾಯರ ಹತ್ತಿರ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬರುತ್ತಿದ್ದರು ಅವರಲ್ಲಿ ಬಡವ ಸಿರಿವಂತ ಎನ್ನುವ ಬೇಧಭಾವ ಇರಲಿಲ್ಲ ಒಮ್ಮೆ ಒಬ್ಬ ಬಡ ವಿದ್ಯಾರ್ಥಿ ರಾಯರಲ್ಲಿ ತನ್ನ ಬಡತನದ ಕಷ್ಟ ಹೇಳಿಕೊಳ್ಳುತ್ತಾನೆ ಹಾಗೂ ನೀವು ಅನುಗ್ರಹಿಸಬೇಕೆಂದು ಬೇಡಿಕೊಳ್ಳುತ್ತಾನೆ ಆಗ ಸ್ನಾನ ಸಮಯದಲ್ಲಿ ಇದ್ದ ರಾಯರ ಬಳಿ ಏನು ಇರುವುದಿಲ್ಲ ನಿನಗೆ ಕೊಡಲು ಏನು ಇಲ್ಲ ಆಗ ಆ ವಿದ್ಯಾರ್ಥಿಯು ನಿಮ್ಮ ಕೃಪೆಯಿಂದ ಒಂದು ಹಿಡಿ ಅಕ್ಷತೆ ಅನ್ನು ನೀಡಿ ಎಂದಾಗ ಒಂದು ಹಿಡಿ ಅಕ್ಷತೆ ತನ್ನ ಮಂತ್ರದಿಂದ ಮಂತ್ರಾಕ್ಷತೆ ಆಗಿ ಮಾಡಿ ನೀಡುತ್ತಾರೆ ಅದುನ್ನು ತೆಗೆದುಕೊಂಡ ವಿದ್ಯಾರ್ಥಿ ತನ್ನ ಊರಿನ ಕಡೆ ಪ್ರಯಾಣ ಬೆಳೆಸುತ್ತಾನೆ ಊರು ತಲುಪಲು ಇನ್ನು ದೂರ ಇರುವುದನ್ನು ಯೋಚಿಸಿ ಅಲ್ಲೇ ಒಂದು ಮನೆಯಲ್ಲಿ ತಂಗುತ್ತಾರೆ

ಆ ಮನೆಯ ಮಾಲೀಕನ ಹೆಂಡ್ತಿ ತುಂಬು ಗರ್ಭಿಣಿ ಆಗಿರುತ್ತಾರೆ ರಾತ್ರಿಯ ವೇಳೆಯಲ್ಲಿ ಒಂದು ಪಿಶಾಚಿ ಆ ಮಗು ಹುಟ್ಟುವ ಮೊದಲೇ ಸಾಯಿಸಲು ಬಂದಾಗ ಆ ಮನೆಯ ಮುಖ್ಯದ್ವಾರ ಅಲ್ಲಿ ರಾಯರ ಭಕ್ತ ಮಲಗಿರುವುದನ್ನು ನೋಡಿ ಅವನ ಹತ್ತಿರ ಇದ್ದ ಮಂತ್ರಾಕ್ಷತೆ ಶಕ್ತಿಯಿಂದ ಆ ಪಿಶಾಚಿ ಸುಟ್ಟು ಬೂದಿ ಆಗಿತ್ತು ಎಂದು ಈ ಕಥೆ ಸಾರುತ್ತದೆ . ಹೀಗಾಗಿ ಇಂದಿಗೂ ರಾಯರ ಸನ್ನಿಧಾನದಲ್ಲಿ ಮಂತ್ರಾಕ್ಷತೆಯನ್ನು ಪ್ರತಿಯೊಬ್ಬ ಭಕ್ತನಿಗೆ ನೀಡುತ್ತಾರೆ ಇದರಿಂದ ದೇಹದ ಮಾಲಿನ್ಯ ತೊಲಗಿ ದೇಹವು ಪರಿಶುದ್ಧ ಆಗುವುದು ಇನ್ನು ಯಾವುದೇ ಆಘಾತ ಗಂಡಾಂತರ ಇಂದ ತಪ್ಪಿಸುವ ಶಕ್ತಿ ಈ ಅಕ್ಷತೆ ಇದೆ ಇನ್ನು ಯಾವುದೇ ಕಾರಣಕ್ಕೂ ಅಕ್ಷತೆಯ ಬಗ್ಗೆ ಅಸಡ್ಡೆ ತೋರಿಸದೆ ಎಲ್ಲೂ ಎಸಿಯದೆ ಅದನ್ನು ಭಕ್ತಿಯಿಂದ ಪೂಜಿಸಿ ದಿನಾಲೂ ತಲೆ ಮೇಲೆ ಹಾಕಿಕೊಂಡು ತನ್ನ ಕಾರ್ಯಕ್ಕೆ ಸಾಗಿ ಆ ರಾಯರ ಕೃಪೆಗೆ ಪಾತ್ರರಾಗಿ ಹಾಗೂ ಜೀವನದಲ್ಲಿ ಒಮ್ಮೆ ಆದರೂ ಮಂತ್ರಾಲಯಕ್ಕೆ ಬೇಟಿ ನೀಡಿ ರಾಯರ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಹಾಗೂ ಮಂತ್ರಾಕ್ಷತೆಯನ್ನು ಪಡೆದು ತಮ್ಮ ಜೀವನದಲ್ಲಿ ಒಳಿತನ್ನು ನೋಡಿ.

Leave a Reply

Your email address will not be published. Required fields are marked *