ವರ್ಷ ಕೊನೆ ತಿಂಗಳು ಡಿಸೆಂಬರ್ ನಲ್ಲಿ ಜನಿಸಿದವರ ಶಕ್ತಿ ಏನು ಗೊತ್ತಾ? ತಿಳಿಯಿರಿ

0 0

ಮನುಷ್ಯನಿಗೆ ತನ್ನ ಗುಣ ಏನು ಎಂಬುದು ಗೊತ್ತಿದ್ದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇನ್ನು ಪ್ರಮುಖವಾಗಿ ಹುಟ್ಟಿದ ತಿಂಗಳಿನಿಂದ ಗುಣವನ್ನು ತಿಳಿದುಕೊಳ್ಳಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟಿದ ದಿನಾಂಕ, ಸಮಯ, ವಾರ ಎಲ್ಲವನ್ನೂ ನೋಡಿ ಭವಿಷ್ಯದ ವಿಚಾರವನ್ನು ತಿಳಿಸಲಾಗುತ್ತದೆ. ಹಾಗೆಯೇ ಆಯಾ ತಿಂಗಳು ಮತ್ತು ವಾರದಲ್ಲಿ ಹುಟ್ಟಿದವರ ಗುಣ ಸ್ವಭಾವವನ್ನು ತಿಳಿಯಬಹುದಾಗಿದೆ. ಒಂದೇ ತಿಂಗಳಿನಲ್ಲಿ ಹಲವರು ಜನಿಸಿರುತ್ತಾರೆ. ಒಬ್ಬರಿಗಿಂತ ಒಬ್ಬರು ಗುಣ, ಸ್ವಭಾವಗಳಲ್ಲಿ ಭಿನ್ನರಾಗಿದ್ದರೂ, ಕೆಲವು ಅಂಶಗಳು ಒಂದೇ ಆಗಿರುತ್ತವೆ. ಅದು ಆ ತಿಂಗಳ ಮಹಿಮೆ ಆಗಿರುತ್ತದೆ. ಹಾಗಾದರೆ ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

ಡಿಸೆಂಬರ್ ಮೊದಲ ಹದಿನೈದು ದಿನದ ಅವಧಿಯಲ್ಲಿ ಜನಿಸಿದವರು ಕಾಲ್ಪನಿಕ ಜಗತ್ತಿನಲ್ಲಿ ವಿಹರಿಸುವವರಾಗಿರುತ್ತಾರೆ. ಅಷ್ಟೇ ಭಾವನಾಜೀವಿಗಳು ಇವರಾಗಿರುತ್ತಾರೆ. ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಕುಂಟುಂಬದಿಂದ ದೂರವಿರುವುದು ಇವರಿಗೆ ಹೆಚ್ಚಿನ ನೋವನ್ನು ತರುವ ವಿಚಾರವಾಗಿರುತ್ತದೆ. ಡಿಸೆಂಬರ್ 15ರಿಂದ 31ರ ಅವಧಿಯಲ್ಲಿ ಜನಿಸಿದವರು ಕಲಾಕಾರರು ಮತ್ತು ದಾರ್ಶನಿಕರಾಗಿರುತ್ತಾರೆ. ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಸ್ವಪ್ರಯತ್ನದಿಂದಲೇ ಜೀವನದಲ್ಲಿ ಅತ್ಯುತ್ತಮ ಸ್ಥಿತಿಗೆ ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಡಿಸೆಂಬರ್‌ನಲ್ಲಿ ಜನಿಸಿದವರಲ್ಲಿ ಹೆಚ್ಚಿನವರದ್ದು ಧನು ರಾಶಿ ಆಗಿರುತ್ತದೆ. ಈ ರಾಶಿಚಕ್ರದ ಅಧಿಪತಿ ಗ್ರಹ ಗುರು. ಆದರೆ, ಈ ಮಾಸದಲ್ಲಿ ಜನಿಸಿದವರರು ಜಾತಕದ ಅನುಸಾರ ಸೋಮಾರಿಗಳಾಗಿದ್ದರೂ ಸ್ಮಾರ್ಟ್ ವರ್ಕ್ ಬಲ್ಲವರಾಗಿದ್ದಾರೆ. ಇವರು ಯಾರದ್ದೋ, ಯಾವುದೋ ಮುಲಾಜಿಗೆ ಒಳಗಾಗುವವರಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳಿಬಿಡುತ್ತಾರೆ. ಇದರಿಂದ ಕೆಲವರ ಕೆಂಗಣ್ಣಿಗೂ ಗುರಿಯಾಗುತ್ತಾರೆ. ಇನ್ನೊಬ್ಬರು ವೃಥಾ ಹೊಗಳುವ ಕೆಲಸ ಮಾಡದ ಇವರು ತಮಗನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಸತ್ಯವನ್ನೂ ಸಹ ಮರೆಮಾಚುವ ಸ್ವಭಾವ ಇವರದ್ದಲ್ಲ. ಇದರ ಜೊತೆಗೆ ಹೊಸ ವಿಚಾರಗಳನ್ನು ತಿಳಿಯುವುದು ಎಂದರೆ ಇವರಿಗೆ ತುಂಬಾ ಇಷ್ಟ. ಹೆಚ್ಚು ಮಾತನಾಡುವ ಇವರು ಬೇರೆಯವರ ಮಾತನ್ನು ಕೇಳಿಸಿಕೊಳ್ಳುವವರಲ್ಲ.

ಈ ತಿಂಗಳಿನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೊತೆಗೆ ನೋಡಲೂ ಆಕರ್ಷಕವಾಗಿರುತ್ತಾರೆ. ಇತರರನ್ನು ತಮ್ಮತ್ತ ಸೆಳೆಯುವ ಆಕರ್ಷಣೆ ಇವರಲ್ಲಿದೆ. ಜೊತೆಗೆ ಇವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಅಪ್ರಿಯ ಸತ್ಯ ಹೇಳದಿರುವುದೇ ಲೇಸು ಇವರ ‌ನೇರ ನುಡಿ ಕೆಲವೊಮ್ಮೆ ಒಳ್ಳೆಯದು ಮಾಡಿದರೆ, ಮತ್ತೆ ಹಲವು ಬಾರಿ ಸಂಕಷ್ಟವನ್ನು ತಂದೊಡ್ಡುತ್ತದೆ. ಇವರ ನಿಷ್ಠುರ ಗುಣದಿಂದ ಇತರರಿಗೆ ನೋವುಂಟಾಗುವ ಸಾಧ್ಯತೆ ಇರುತ್ತದೆ. ಅಪ್ರಿಯವಾದ ಸತ್ಯವನ್ನು ಹೇಳದಿರುವುದೇ ಒಳ್ಳೆಯದು ಎಂದು ಶಾಸ್ತ್ರ ಸಹ ಹೇಳುತ್ತದೆ.

ಯಾವುದೇ ಕೆಲಸವಾಗಲಿ ಆಸಕ್ತಿಯಿಂದ ಮಾಡುವ ಇವರು ತಮ್ಮ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಕೆಲಸದ ವಿಷಯದಲ್ಲಿ ಸೋಮಾರಿತನ ತೋರದ ಇವರು, ಕೆಲಸ ಮುಗಿಯುವವರೆಗೆ ಸಮಾಧಾನ ಇರದು. ಹಾಗಾಗಿ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಾರೆ. ಇವರು ಆತ್ಮವಿಶ್ವಾಸಿಗಳಾಗಿದ್ದು, ಎಲ್ಲರೂ ಇವರನ್ನು ಇಷ್ಟಪಡುತ್ತಾರೆ. ಹೀಗಾಗಿ ಇವರು ಬಹುಬೇಗ ಇತರರ ಮನಗೆಲ್ಲುತ್ತಾರೆ. ಅಲ್ಲದೆ, ಇವರಿದ್ದ ಕಡೆ ಖುಷಿ ಇರುತ್ತದೆ ಎಂದು ಸಹ ಹೇಳಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಸಾಧನೆ ಮಾಡುವ ಇವರು, ಸಮಸ್ಯೆಗಳು ಎದುರಾದರೆ ಯೋಚಿಸಿ ಪರಿಹಾರ ಕಂಡುಕೊಳ್ಳುತ್ತಾರೆ.

ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಇವರು, ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಚತುರತೆಯನ್ನು ಹೊಂದಿರುತ್ತಾರೆ. ಯಾವುದೇ ಕೆಲಸವಾಗಲಿ ಆಸಕ್ತಿಯಿಂದ ಮಾಡಿ ಮುಗಿಸುವವರಲ್ಲಿ ಡಿಸೆಂಬರ್‌ನಲ್ಲಿ ಜನಿಸಿದವರು ಮೊದಲಿಗರು. ಕೆಲಸದ ವಿಷಯದಲ್ಲಿ ಆಲಸೀತನವನ್ನು ತೋರದೆ ಹಿಡಿದ ಕೆಲಸ ಮುಗಿಯುವವರೆಗೆ ಶಾಂತಿಯಿಂದ ಕೂರುವುದೇ ಇಲ್ಲ. ಹಾಗಾಗಿ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಮನ್ನಣೆಯನ್ನು ಮತ್ತು ಯಶಸ್ಸನ್ನು ಕಾಣುವವರು ಇವರಾಗಿರುತ್ತಾರೆ.

ಡಿಸೆಂಬರ್‌ನಲ್ಲಿ ಹುಟ್ಟಿದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಗುರುವಿನ ಕೃಪೆ ಈ ತಿಂಗಳಿನಲ್ಲಿ ಜನಿಸಿದವರಿಗೆ ಹೆಚ್ಚಾಗಿರುತ್ತದೆಂದು ಸಹ ಹೇಳುತ್ತಾರೆ. ಸುಳ್ಳು ಹೇಳುವುದು ಇವರಿಗೆ ಆಗಿಬರದ ವಿಚಾರ. ಸತ್ಯವನ್ನು ಹಾಗೆ ಪಟ್ ಎಂದು ಹೇಳಿಬಿಡುವ ಇವರು ಹಲವರ ಸುಳ್ಳನ್ನು ಬಯಲಿಗೆಳೆಯುವಲ್ಲಿ ಸಫಲರಾಗುತ್ತಾರೆ. ಈ ತಿಂಗಳಿನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವುದರೊಂದಿಗೆ ನೋಡಲು ಆಕರ್ಷಕವಾಗಿರುತ್ತಾರೆ. ಇತರರನ್ನು ತಮ್ಮತ್ತ ಸೆಳೆದುಕೊಳ್ಳುವ ಆಕರ್ಷಣೆಯನ್ನು ಹೊಂದಿರುತ್ತಾರೆ.

Leave A Reply

Your email address will not be published.