ಮಾನಸಿಕ ಕಾಯಿಲೆಗೆ ಮಾತ್ರೆಗಳಿಲ್ಲ, ಪ್ರತಿ ಪೋಷಕರು ನಿಜಕ್ಕೂ ಇದನ್ನ ತಿಳಿಯಬೇಕು

0 5

ಮನುಷ್ಯನ ದೇಹದಲ್ಲಿ ಕಂಡುಬರುವ ಪ್ರತಿಯೊಂದು ಕಾಯಿಲೆಗಳನ್ನು ಗುಣಪಡಿಸುವುದಕ್ಕೆ ಮಾತ್ರೆಗಳು ಸಿಗುವುದಿಲ್ಲ. ಪ್ರತಿಯೊಂದು ಮಾತ್ರೆ ತೆಗೆದುಕೊಳ್ಳುವುದರ ಹಿಂದೆ ಒಂದು ಕಾಯಿಲೆ ಇರುತ್ತದೆ. ಕೆಲವೊಂದು ಸಲ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಮತ್ತೊಂದು ಕಾಯಿಲೆ ಹುಟ್ಟಿಕೊಳ್ಳುವ ಸಂಭವ ಇರುತ್ತದೆ. ಹಾಗಾಗಿ ಪ್ರತಿಯೊಂದು ಮಾತ್ರೆಯನ್ನು ತೆಗೆದುಕೊಳ್ಳುವಾಗಲು ಜಾಗೃತಿಯನ್ನು ವಹಿಸಬೇಕು.

ಕೆಲವು ಮಾನಸಿಕ ಕಾಯಿಲೆಗಳಿವೆ ಅವುಗಳಿಗೆ ಔಷಧಿಯನ್ನು ಕೊಡಲೇಬೇಕು ಅದು ಯಾವಾಗ ಎಂದರೆ ಮಾನಸಿಕ ರೋಗಿಗಳು ಭಯಂಕರವಾಗಿ ಹಲ್ಲೆಯನ್ನು ಮಾಡುವುದಕ್ಕೆ ಮುಂದಾದಾಗ, ಅಥವಾ ಸ್ಕಿಜೋಫ್ರಿನಿಯ ಇರುವವರು ಇನ್ನೊಬ್ಬನನ್ನು ಕೊಲ್ಲುತ್ತೇನೆ ಎಂದು ಹೊರಟಾಗ ಅಂತಹ ಸಂದರ್ಭದಲ್ಲಿ ಅವರಿಗೆ ಯಾವುದಾದರೂ ಔಷಧಿಯನ್ನು ಕೊಡಬೇಕು ಅದು ಕಾಯಿಲೆಗೆ ಅಲ್ಲ ಅವರನ್ನು ಸೌಮ್ಯ ಗಳಿಸುವುದಕ್ಕೆ ಅವರನ್ನು ಸುಮ್ಮನೆ ಮಲಗಿ ಸುವುದಕ್ಕೆ ಒಂದು ಔಷಧಿಯನ್ನು ಕೊಡಬೇಕಾಗುತ್ತದೆ.

ಹಿಂದಿನ ಕಾಲದಲ್ಲಿ ಮಾನಸಿಕ ರೋಗಿಗಳನ್ನು ಜೈಲಿನಲ್ಲಿ ಬಂಧಿಸಿಡುತ್ತಿದ್ದರು. ಯುರೋಪಿನಲ್ಲಿ ಆಗಿನ ಕಾಲದಲ್ಲಿ ಮಾನಸಿಕ ರೋಗಿಗಳಿಗೆ ಜೈಲುಗಳಿರುತ್ತಿದ್ದವು ಮುವತ್ತು ವರ್ಷ ನಲವತ್ತು ವರ್ಷಗಳ ಕಾಲ ಮಾನಸಿಕ ರೋಗಿಗಳನ್ನು ಜೈಲಿನಲ್ಲಿ ಬಂಧಿಸಿಡುತ್ತಿದ್ದರು. ಸ್ವೀಡನ್ ನಲ್ಲಿ ಐವತ್ತು ವರ್ಷ ಮಾನಸಿಕ ರೋಗಿಗಳನ್ನು ಬಂದಿಸಿರುವ ದಾಖಲೆ ಇದೆ.

ಆದರೆ ಈಗ ಅಂತಹ ರೋಗಿಗಳಿಗೆ ಔಷಧಿಗಳನ್ನು ಕೊಟ್ಟು ಮನೆಯಲ್ಲೇ ಇಡಬಹುದು ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ಯಾವುದೇ ಮಾನಸಿಕ ಕಾಯಿಲೆಯನ್ನು ಕಡಿಮೆ ಮಾಡುವುದಕ್ಕೆ ಔಷಧಿ ಇಲ್ಲ ಆದರೆ ಅವರಲ್ಲಿರುವ ಕ್ರೋಧ ಕ್ರೂರತೆಯನ್ನು ಕಡಿಮೆ ಮಾಡುವುದಕ್ಕೆ ಅದು ಹೊರಬರದೆ ಇರುವ ಹಾಗೆ ಮಾಡುವುದಕ್ಕೆ ಆ ಸಂದರ್ಭದಲ್ಲಿ ಅವರಿಗೆ ಔಷಧಿಯನ್ನು ಕೊಟ್ಟಾಗ ಅವರು ಸೌಮ್ಯ ವಾಗುತ್ತಾರೆ ಮಲಗಿಕೊಳ್ಳುತ್ತಾರೆ ಆದರೆ ಅವರು ಗುಣ ಆಗುವುದಿಲ್ಲ.

ಮಾನಸಿಕ ರೋಗಿಗಳು ಗುಣವಾಗುವುದಕ್ಕೆ ಅವರಿಗೆ ಇನ್ನೊಂದು ಮನಸ್ಸು ಬೇಕಾಗುತ್ತದೆ ಎಲ್ಲಾ ಮಾನಸಿಕ ಕಾಯಿಲೆಗಳಿಗೆ ಅದನ್ನು ಅರ್ಥ ಮಾಡಿಕೊಳ್ಳುವ ಇನ್ನೊಂದು ಮನಸ್ಸಿನಿಂದ ಮಾತ್ರ ಅದನ್ನ ಕಡಿಮೆ ಮಾಡಬಹುದು. ಮಾನಸಿಕ ರೋಗಿಗಳನ್ನು ಅರ್ಥ ಮಾಡಿಕೊಳ್ಳುವ ಇನ್ನೊಂದು ಮನಸ್ಸಿದ್ದರೆ ಅವರನ್ನು ಸರಿಮಾಡಬಹುದು ತಂದೆತಾಯಿಗಳು ಮಕ್ಕಳನ್ನು ಸರಿಮಾಡಬಹುದು. ಮಾನಸಿಕ ರೋಗಿಗಳಿಗೆ ಔಷಧಿ ಬೇಕಾಗಿರುವುದು ಕೇವಲ ಶೇಕಡ ಒಂದರಷ್ಟು ಮಾತ್ರ ನಾವು ಅವರಿಗೆ ಶೇಕಡ ತೊಂಬತೊಂಬತ್ತರಷ್ಟಕ್ಕೆ ಔಷಧಿಯನ್ನು ಕೊಡುತ್ತೇವೆ ಆ ಒಂದು ಪರ್ಸೆಂಟೇಜ್ ಗೆ ಔಷಧಿಯನ್ನು ಕೊಡುವುದಿಲ್ಲ.

ಈ ರೀತಿಯಲ್ಲಿಯೇ ಮಕ್ಕಳಿಗೂ ಕೂಡ ಅವರನ್ನು ಅರ್ಥ ಮಾಡಿಕೊಂಡು ಅವರಿಗೆ ತಿಳಿಹೇಳುವ ಮನಸ್ಸು ಅವರೊಂದಿಗೆ ಇರಬೇಕು ಇಲ್ಲದಿದ್ದಾಗ ಮಕ್ಕಳು ಕಿನ್ನತೆಗೆ ಒಳಗಾಗುತ್ತಾರೆ. ಮಕ್ಕಳನ್ನ ಬೆಳೆಸುವಲ್ಲಿ ತಂದೆ-ತಾಯಿಗಳ ಶ್ರಮ ತುಂಬಾ ವಹಿಸಬೇಕು. ಇವತ್ತಿನ ದಿನ ತಂದೆ-ತಾಯಿಗೆ ಮಕ್ಕಳ ಹತ್ತಿರ ಮಾತನಾಡುವುದಕ್ಕೆ ಸಮಯವೇ ಸಿಗುವುದಿಲ್ಲ ತಾಳ್ಮೆ ಇರುವುದಿಲ್ಲ. ಆ ಮಕ್ಕಳಿಗೆ ಏನಾದರೂ ಸ್ವಲ್ಪ ಹೆಚ್ಚು ಕಮ್ಮಿ ಆದರೆ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾರೆ ಔಷಧಿಯನ್ನು ಕೊಡಿಸುತ್ತಾರೆ ಆದರೆ ಮಕ್ಕಳ ಬಳಿ ಮನ ಬಿಚ್ಚಿ ಮಾತನಾಡುವುದಿಲ್ಲ ಅವರಿಗೆ ಸಮಯವೇ ಕೊಡುವುದಿಲ್ಲ.

ತಂದೆ-ತಾಯಿಗಳು ಹಣಗಳಿಸುವುದಕ್ಕಾಗಿ ದುಡಿಮೆಗೆ ಹೋಗುತ್ತಾರೆ ಆದರೆ ಮಕ್ಕಳಿಗೆ ಮನೆ ದೊಡ್ಡ ಶಾಲೆ ಯಾಗಿರುತ್ತದೆ ಮಗು ಶಾಲೆಯಲ್ಲಿ ಆರು ಗಂಟೆ ಇದ್ದರೆ ಹದಿನೆಂಟು ಗಂಟೆಗಳ ಕಾಲ ಮನೆಯಲ್ಲಿ ಇರುತ್ತದೆ. ಅದು ಹೆಚ್ಚಿನದನ್ನು ಮನೆಯಲ್ಲಿ ತಂದೆ ತಾಯಿಯಿಂದ ಕಲಿಯುತ್ತದೆ. ಹಾಗಾಗಿ ತಂದೆ ತಾಯಿಗೆ ತುಂಬಾ ಜವಾಬ್ದಾರಿಯಿರುತ್ತದೆ ಅವರು ಯಾವುದೇ ಹೆಜ್ಜೆಯಿಡುವುದಿದ್ದರೂ ತಪ್ಪು ಹೆಜ್ಜೆಯನ್ನು ಇಡಬಾರದು ಯಾಕೆಂದರೆ ಆ ಮಗು ತಂದೆ ತಾಯಿಯನ್ನು ಪ್ರತಿಕ್ಷಣ ಗಮನಿಸುತ್ತಿರುತ್ತದೆ.

ಹಾಗಾಗಿ ಮೊದಲನೆಯದಾಗಿ ತಂದೆತಾಯಿಗಳು ತಮ್ಮ ಮಕ್ಕಳಿಗೆ ಆದರ್ಶ ಶಿಕ್ಷಕರಾಗಿರಬೇಕು. ತಾಯಿ ಮಗುವಿಗೆ ಮೊದಲ ಗುರು ಆಗಿರುತ್ತಾಳೆ ತಾಯಿ ಹೇಳಿಕೊಟ್ಟಿದ್ದನ್ನು ಮಕ್ಕಳು ಕರೆಯುತ್ತಾರೆ ಅದೇ ರೀತಿ ತಂದೆ ಮಾಡುವುದನ್ನು ನೋಡಿ ಅದನ್ನು ಮಕ್ಕಳು ಕಲಿತುಕೊಳ್ಳುತ್ತಾರೆ. ಒಂದು ಮನೆಯಲ್ಲಿ ತಂದೆ ಮೋಸ ಮಾಡಿ ಮಗುವಿಗೆ ಒಳ್ಳೆಯವನಾಗು ಎಂದರೆ ಅದು ಸ್ವಲ್ಪ ಕಷ್ಟವಾಗುತ್ತದೆ ಕೆಲವೊಂದು ಮಕ್ಕಳು ಅದನ್ನು ಮೆಟ್ಟಿ ನಿಲ್ಲುತ್ತಾರೆ ಅದಕ್ಕೆ ತುಂಬಾ ಬುದ್ಧಿ ಬೇಕು. ಸಾಮಾನ್ಯ ಮಕ್ಕಳು ತಂದೆ ತಾಯಿಗಳು ಏನು ಮಾಡುತ್ತಾರೆ ಅದನ್ನು ಅನುಸರಿಸುತ್ತಾರೆ.

ಮನೆಯಲ್ಲಿ ತಂದೆ-ತಾಯಿಗಳು ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಮಕ್ಕಳಿಗೆ ತಿಳಿಸಿ ಹೇಳಿಕೊಡಬೇಕು ಆಗ ಮಕ್ಕಳು ಒಳ್ಳೆಯ ರೀತಿ ನೀತಿಯನ್ನು ಕಲಿತುಕೊಳ್ಳುತ್ತವೆ. ನೋಡಿದ್ರಲ್ಲ ಸ್ನೇಹಿತರೆ ಮಕ್ಕಳನ್ನು ಬೆಳೆಸುವಾಗ ತಂದೆ-ತಾಯಿಗಳು ಅವರ ಬಗ್ಗೆ ತುಂಬಾ ಎಚ್ಚರಿಕೆಯನ್ನು ವಹಿಸಬೇಕು ಮಕ್ಕಳಿಗೆ ಅವರಿಗೆ ಬೇಕಾದ ಪ್ರೀತಿ ವಾತ್ಸಲ್ಯವನ್ನು ನೀಡಬೇಕು ಅವರೊಟ್ಟಿಗೆ ಮಾತುಗಳನ್ನಾಡಬೇಕು ಈ ರೀತಿಯಾಗಿ ಮಕ್ಕಳೊಂದಿಗೆ ನೀವು ಬೆರೆತಾಗ ಅವರು ಖುಷಿ ಇರುತ್ತಾರೆ.

ಒಂದು ವೇಳೆ ನೀವು ಮಕ್ಕಳೊಂದಿಗೆ ಬೆರೆತಾಗ ಅವರ ಇಷ್ಟ-ಕಷ್ಟಗಳ ಬಗ್ಗೆ ಕೇಳದಿದ್ದಾಗ ಅವರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಆದ್ದರಿಂದ ನೀವು ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಮತ್ತು ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.