ಜೀವನವೆ ಬೇಡ ಅನಿಸಿದರೆ ಬೇಸರವಾದ್ರೆ ಚಾಣಿಕ್ಯ ಹೇಳಿದ ಈ ಮಾತು ಸ್ಮರಿಸಿಕೊಳ್ಳಿ

0 10

ಜೀವನದಲ್ಲಿ ಬೇಸರವಾದರೆ, ಜೀವನವೇ ಬೇಡ ಎನಿಸಿದರೆ ಚಾಣಕ್ಯ ಹೇಳಿರುವ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಜೀವನದ ಬಗ್ಗೆ ಚಾಣಕ್ಯ ಹೇಳಿರುವ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ ಎಲ್ಲ ತಪ್ಪುಗಳನ್ನು ನೀವೊಬ್ಬರೆ ಮಾಡಲು ಆಯಸ್ಸು ಸಾಲುವುದಿಲ್ಲ. ಅತಿ ಪ್ರಾಮಾಣಿಕರಾಗದಿರಿ ನೇರವಾದ ಮರಗಳು ಮೊದಲು ನೆಲಕ್ಕುರುಳುತ್ತವೆ ಆನಂತರ ಡೊಂಕು ಮರಗಳು ನೆಲಕ್ಕುರುಳುತ್ತವೆ. ಒಂದು ಹಾವು ವಿಷಯುಕ್ತವಲ್ಲದಿದ್ದರೂ ವಿಷಯುಕ್ತದಂತೆ ಬುಸುಗುಡುತ್ತಿರಬೇಕು. ಅತ್ಯಂತ ದೊಡ್ಡ ಗುರುಮಂತ್ರವೆಂದರೆ ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ ಅವೆ ಮುಳ್ಳಾಗುತ್ತದೆ. ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೆ ಇರುತ್ತದೆ. ಸ್ವಾರ್ಥರಹಿತ ಸ್ನೇಹವೆ ಇಲ್ಲ ಇದೊಂದು ಕಹಿಸತ್ಯ. ಪ್ರತಿ ಕಾರ್ಯಕ್ಕೆ ತೊಡಗುವ ಮುನ್ನ ತಮಗೆ ತಾವೇ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಈ ಕಾರ್ಯ ನಾನೇಕೆ ಮಾಡುತ್ತಿದ್ದೇನೆ, ಈ ಕಾರ್ಯದ ಫಲಗಳೇನು, ಈ ಕಾರ್ಯದಲ್ಲಿ ನಾನು ಸಫಲನಾಗುತ್ತೇನೆಯೆ ಈ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಸ್ಪಷ್ಟ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಿರಿ. ಇಲ್ಲದಿದ್ದರೆ ಈ ಪ್ರಯತ್ನ ವ್ಯರ್ಥ.

ಭಯ ನಿಮ್ಮನ್ನು ಆವರಿಸಲು ಹತ್ತಿರ ಬರುತ್ತಿದ್ದಂತೆ ಅದರ ಮೇಲೆ ಆಕ್ರಮಣ ಮಾಡಿ ಅದನ್ನು ವಿನಾಶಗೊಳಿಸಿಬಿಡಿ. ವಿಶ್ವದ ಅತ್ಯಂತ ದೊಡ್ಡ ಶಕ್ತಿಯೆಂದರೆ ಯುವಶಕ್ತಿ ಹಾಗೂ ಯುವತಿಯ ಸೌಂದರ್ಯ. ಒಂದು ಕಾರ್ಯ ಕೈಗೆತ್ತಿಕೊಂಡ ಬಳಿಕ ವಿಫಲವಾಗುವ ಭಯದಿಂದ ಮಧ್ಯದಲ್ಲಿ ನಿಲ್ಲಿಸಬೇಡಿ, ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರೆ ಅತ್ಯಂತ ಸುಖಿಗಳು. ಹೂವಿನ ಸುಗಂಧ ಗಾಳಿಯಿರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ ಆದರೆ ಒಬ್ಬ ವ್ಯಕ್ತಿಯ ಒಳ್ಳೆತನ ಎಲ್ಲ ದಿಕ್ಕಿನಲ್ಲಿ ಪಸರಿಸುತ್ತದೆ. ದೇವರು ವಿಗ್ರಹಗಳಲ್ಲಿ ಇಲ್ಲ ನಿಮ್ಮ ಭಾವನೆಗಳೇ ನಿಮ್ಮ ದೇವರು, ನಿಮ್ಮ ಆತ್ಮವೇ ದೇವಸ್ಥಾನ. ಓರ್ವ ವ್ಯಕ್ತಿ ತನ್ನ ಕರ್ಮಗಳಿಂದ ದೊಡ್ಡ ಮನುಷ್ಯನಾಗುತ್ತಾನೆ ಹೊರತು ಹುಟ್ಟಿನಿಂದಲ್ಲ. ನಿಮ್ಮ ಅಂತಸ್ತಿಗಿಂತ ಮೇಲಿರುವ ಮತ್ತು ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಕು ಆ ಸ್ನೇಹ ಎಂದಿಗೂ ಸಂತೋಷ ನೀಡುವುದಿಲ್ಲ. ವಿದ್ಯೆಯೆ ನಿಜವಾದ ಸ್ನೇಹಿತ, ವಿದ್ಯಾವಂತನಿಗೆ ಎಲ್ಲೂ ಮನ್ನಣೆಯಿದೆ, ವಿದ್ಯೆ ನಿಜವಾದ ಭೂಷಣ, ವಿದ್ಯೆ ಎಂದಿಗೂ ಯೌವನ. ಚಾಣಕ್ಯನ ಈ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಎಂದಿಗೂ ಬೇಸರಿಸುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.