ಒಳಜ್ವರ ನಿವಾರಣೆಗೆ ಪರಿಹಾರ ನೀಡುವ ಮನೆಮದ್ದು

0 11

ಮಕ್ಕಳು ಸಾಮಾನ್ಯವಾಗಿ ಎದುರಿಸುವ ಒಳಜ್ವರಕ್ಕೆ ಮನೆಯಲ್ಲಿ ಸುಲಭವಾಗಿ ಮಾಡುವ ಮನೆಮದ್ದನ್ನು ಹಾಗೂ ಅದರ ಸೇವನೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಒಳಜ್ವರ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆಯಾದರೂ ಬರುತ್ತದೆ. ಬಾಯಿ ಕಹಿಯಾಗುವುದು ಊಟ ಸೇರದೆ ಇರುವುದು, ಸುಸ್ತಾಗುವುದು. ಇದಕ್ಕೆ ಕಾರಣ ನಮ್ಮ ದೇಹದಲ್ಲಿ ಟಾಕ್ಸಿನ್ ಜಾಸ್ತಿಯಾಗಿ ಇಮ್ಯುನಿಟಿ ಪವರ್ ಕಡಿಮೆಯಾಗುತ್ತದೆ ಇದರಿಂದ ಒಳಜ್ವರ ಬರುತ್ತದೆ ಹೊರಗಿನಿಂದ ಟೆಂಪರೇಚರ್ ಕಾಣಿಸಿಕೊಳ್ಳುವುದಿಲ್ಲ. ಈ ಒಳಜ್ವರಕ್ಕೆ ಮನೆಯಲ್ಲಿ ಸುಲಭವಾಗಿ ಮನೆಮದ್ದನ್ನು ಮಾಡಿಕೊಳ್ಳಬಹುದು ಅದೇನೆಂದರೆ ಒಂದು ಪಾತ್ರೆಯಲ್ಲಿ ಒಂದು ಲೋಟ ಅಥವಾ ಬೇಕಾದಷ್ಟು ನೀರನ್ನು ಕುದಿಯಲು ಇಡಬೇಕು ಒಂದು ಸ್ಪೂನ್ ಕಹಿಜೀರಿಗೆ ಅಥವಾ ಕಾಳುಜೀರಿಗೆ ಇದು ಕಹಿಯಿದ್ದು, ಹೀಟ್ ಆಗುವ ಸಾಧ್ಯತೆ ಇದೆ ಹಾಗಾಗಿ ಜಾಸ್ತಿ ಹಾಕಬಾರದು.

ಚೆನ್ನಾಗಿ ಕುದಿದ ನಂತರ ಬಣ್ಣ ಬಿಡುತ್ತದೆ. ಇದನ್ನು ರಾತ್ರಿ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಬೇಕು. ಥೈರಾಯಿಡ್ ಇದ್ದವರು ಅದಕ್ಕೆ ಸಂಬಂಧಿಸಿದ ಮಾತ್ರೆಯನ್ನು ತೆಗೆದುಕೊಂಡು ಅರ್ಧ ತಾಸಿನ ನಂತರ ಇದನ್ನು ಕುಡಿಯಬಹುದು. ಒಂದು ವರ್ಷದ ಮಕ್ಕಳಿಂದ ಇದನ್ನು ಕುಡಿಯಬಹುದು. ಒಂದು ವರ್ಷದ ಮಕ್ಕಳಿದ್ದರೆ 2-3 ಸ್ಪೂನ್ ಸಾಕು, ದೊಡ್ಡವರಾದರೆ ಸಣ್ಣ ಲೋಟದಲ್ಲಿ ಅರ್ಧಲೋಟ ಅಂದರೆ 30ml ಕುಡಿಯಬಹುದು ಮಕ್ಕಳಾಗಲಿ, ದೊಡ್ಡವರಾಗಲಿ ಕುಡಿಯುವ ಮೊದಲು ನಿಂಬೆಹಣ್ಣು ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ ಕುಡಿಯಬೇಕು. 15 ದಿನ ಅಥವಾ ಒಂದು ತಿಂಗಳಿಗೆ ಒಮ್ಮೆ ಕುಡಿಯಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಜಾಸ್ತಿ ಕುಡಿಯುವುದರಿಂದ ಕೆಲವರಿಗೆ ಹೀಟ್ ಆಗುವ ಸಾಧ್ಯತೆ ಇರುತ್ತದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿರುವ ಟಾಕ್ಸಸ್ ಹೊರಹೋಗಿ ಒಳಜ್ವರ ನಿಯಂತ್ರಣವಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ತಿಳಿಸಿ.

Leave A Reply

Your email address will not be published.