ನೆಗೆಟೀವ್ ಯೋಚನೆಗಳು ದೇಹದ ಆರೋಗ್ಯದ ಮೇಲೆ ನೆಗೆಟೀವ್ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ನೆಗೆಟೀವ್ ಆಲೋಚನೆಗಳ ಸಮಸ್ಯೆಯನ್ನು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ ಆದರೆ ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ಈ ಸಮಸ್ಯೆಗೆ ಔಷಧಿಯಿಲ್ಲದೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲ್ಲರಲ್ಲೂ ನೆಗೆಟೀವ್ ಯೋಚನೆಗಳು ಇರುತ್ತದೆ ಆದರೆ ಕೆಲವರಲ್ಲಿ ಅತಿರೇಕಕ್ಕೆ ಹೋಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಅಲ್ಲದೇ ದೈಹಿಕವಾಗಿಯೂ ಸಮಸ್ಯೆಯನ್ನು ಎದುರಿಸುತ್ತಾರೆ. ನನಗೆ ಆಕ್ಸಿಡೆಂಟ್ ಆಗುತ್ತೇನೊ, ಹೊರಗಡೆ ಹೋದರೆ ಏನಾದರೂ ಸಮಸ್ಯೆ ಆಗಬಹುದು, ಪರೀಕ್ಷೆಯಲ್ಲಿ ಫೇಲ್ ಆದರೆ ಏನು ಮಾಡುವುದು. ಒಬ್ಬರತ್ತಿರ ಮಾತನಾಡಿದರೆ ಅವರು ನನ್ನನು ತಪ್ಪು ತಿಳಿಯುತ್ತಾರೆನೊ ಇಂತಹ ವಿಚಾರಗಳು ಬಹಳ ಜನರನ್ನು ಆವರಿಸಿಕೊಂಡಿರುತ್ತದೆ. ಕೆಲವರು ನಾನು ನೆಗೆಟೀವ್ ಯೋಚನೆ ಮಾಡುವುದರಿಂದಲೇ ನನಗೆ ಒಳ್ಳೆಯದಾಗುತ್ತದೆ ಎಂದು ತಿಳಿದುಕೊಂಡೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

ಬೆಳಗ್ಗಿನ ಒಂದುವರೆ ಗಂಟೆ ನಮ್ಮ ಮನಸು ಸೂಕ್ಷ್ಮವಾದ ಸ್ಥಿತಿಯಲ್ಲಿರುತ್ತದೆ. ನಮ್ಮ ಪೂರ್ವಜರು ಎದ್ದ ತಕ್ಷಣ ಕೈಯನ್ನು ನೋಡಿಕೊಂಡು ಮಂತ್ರ ಹೇಳುವುದು, ಭೂಮಿ ತಾಯಿಗೆ ನಮಸ್ಕಾರ ಮಾಡುವುದು, ಸೂರ್ಯ ನಮಸ್ಕಾರ ಮಾಡುವುದು, ಗೋಮಾತೆಗೆ ನಮಸ್ಕಾರ ಮಾಡುವುದರ ಮೂಲಕ ತಮ್ಮ ದಿನವನ್ನು ಶುರು ಮಾಡುತ್ತಿದ್ದರು. ಅವರು ಹೃದಯದಿಂದ ದಿನವನ್ನು ಶುರು ಮಾಡುತ್ತಿದ್ದರು ಅಂದರೆ ಸಕಾರಾತ್ಮಕ ವಿಚಾರಗಳಿಂದ ಶುರು ಮಾಡುತ್ತಿದ್ದರು. ಇದರಿಂದ ನಮ್ಮ ಹೃದಯದಿಂದ ಹೊರಹೊಮ್ಮುವ ಧನಾತ್ಮಕ ವಿಚಾರಗಳು ಎನರ್ಜಿ ಫೀಲ್ಡ್ ಲ್ಲಿ ಸ್ಪ್ರೆಡ್ ಆಗಿ ಅದು ಪೊಸಿಟೀವ್ ವೈಬ್ಸ್ ನ್ನು ಹೆಚ್ಚು ಅಟ್ರಾಕ್ಟ್ ಮಾಡುವ ಪೊಸಿಬಿಲಿಟಿಯನ್ನು ಕ್ರಿಯೇಟ್ ಮಾಡುತ್ತದೆ.

ಯಾವ ಮನುಷ್ಯ ಬೆಳಗ್ಗೆ ಸಂಜೆ ಅಥವಾ ಧ್ಯಾನ ಸ್ಥಿತಿಯಲ್ಲಿ ಆಗಾಗ ಧನ್ಯತಾ ಮನೋಭಾವನೆಯನ್ನು ಡೆವಲಪ್ ಮಾಡಿಕೊಳ್ಳುತ್ತಾರೊ ಅವರಲ್ಲಿ ಫಿಸಿಕಲಿ ಕೂಡ ಕಾಯಿಲೆಯಿಂದ ಹೊರಬರುವ ಪವರ್ ಹೆಚ್ಚಾಗುತ್ತದೆ ಎಂದು ಸಂಶೋಧನೆ ಪ್ರಕಾರ ಪ್ರೂವ ಆಗಿದೆ. ವೇದಿಕ್ ಕಾಲದಿಂದಲೂ ಹೃದಯದಲ್ಲಿರುವ ಬೆಳಕನ್ನು, ಪರಬ್ರಹ್ಮನನ್ನು, ಧನ್ಯತಾ ಮನೋಭಾವನೆಯನ್ನು ನೆನೆಸಿಕೊಂಡು ದಿನವನ್ನು ಶುರುಮಾಡುವುದರಿಂದ ಆತ್ಮಕ್ಕಷ್ಟೆ ಅಲ್ಲ ಎಲ್ಲಾ ರೀತಿಯ ವಿಚಾರದಲ್ಲೂ ಲಾಭವಾಗುತ್ತದೆ ಎಂದು ಸಾಕಷ್ಟು ಮಂತ್ರಗಳಲ್ಲಿ ಉಲ್ಲೇಖವಾಗಿದೆ. ಬಹಳಷ್ಟು ಜನರಿಗೆ ನಿದ್ರೆ ಮಾಡುವಾಗ ಮತ್ತು ಬೆಳಗ್ಗೆ ಏಳುವಾಗ ನೆಗೆಟೀವ್ ವಿಚಾರಗಳು ಬರುತ್ತದೆ. ಹಾಗಾಗಿ ಇನ್ನೇನು ನಿದ್ರೆ ಬರುತ್ತದೆ ಎನ್ನುವಾಗ ಬೆಳಗ್ಗೆಯಿಂದ ಸಂಜೆವರೆಗೆ ಯಾವ ಸಂಗತಿ ನಮ್ಮ ಜೀವನದಲ್ಲಿ ಚೆನ್ನಾಗಿತ್ತು, ಖುಷಿ ಕೊಟ್ಟಿತು ಎನ್ನುವುದನ್ನು ರಿಕಾಲ್ ಮಾಡಬೇಕು ಏಕೆಂದರೆ ಬಹಳಷ್ಟು ಜನ ಬೇಜಾರು, ಸಂಕಟ, ದುಃಖ, ಕಿರಿಕಿರಿ, ಧ್ವೇಷ ಈ ರೀತಿಯ ವಿಚಾರಗಳಲ್ಲೆ ಮಲಗಿಕೊಳ್ಳುತ್ತಾರೆ ಇದರಿಂದ ನಮ್ಮ ಸುಪ್ತ ಮನಸ್ಸಿಗೆ ಇಳಿದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಇಲ್ಲಿ ಯಾವ ಸಂಗತಿ ನೆನಪಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಲ್ಲ ಯಾವ ಫೀಲಿಂಗ್ ನಲ್ಲಿರುತ್ತೀವಿ ಎನ್ನುವುದು ಮುಖ್ಯ. ಒಂದು ವೇಳೆ ದೈಹಿಕ ಕಾಯಿಲೆಯಿಂದ ಬಳಲುತ್ತಿದ್ದರೆ ದೇಹದ ಯಾವ ಅಂಗ ಚೆನ್ನಾಗಿ ಕೆಲಸ ಮಾಡುತ್ತಿದೆ ಅದರ ಬಗ್ಗೆ ಅಂದರೆ ನನ್ನ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ, ನನ್ನ ದೃಷ್ಟಿ ಚೆನ್ನಾಗಿದೆ ಎಂದು ಯೋಚಿಸಬೇಕು. ಈ ರೀತಿ ಮೆದುಳಿಗೆ ಟ್ರೇನ್ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ನಿಯಂತ್ರಣವಾಗಿ ಉತ್ತಮ ರೀತಿಯ ಪರಿವರ್ತನೆಯಾಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *