ನಮಗೆಲ್ಲರಿಗೂ ನೀರು ಬೇಕೆ ಬೇಕು. ನೀರಿನ ಮೂಲ ನಮಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇತ್ತೀಚಿಗೆ ನೀರಿನ ಮೂಲ ಕೊಳವೆ ಬಾವಿಗಳು ಆಗಿವೆ. ಕೊಳವೆ ಬಾವಿಗಳನ್ನು ತೆಗೆಯುವ ಸಂದರ್ಭದಲ್ಲಿ ರೈತರು ನೀರು ಬರದೆ ಇದ್ದಾಗ ಹಲವಾರು ರೀತಿಯಲ್ಲಿ ಕಷ್ಟ ಪಡುತ್ತಾರೆ. ಅಂತಹ ಸಂದರ್ಭದಲ್ಲಿ ಹಲವಾರು ರೈತರು ತಾವು ಇನ್ನು ಮುಂದೆ ಮತ್ತು ಬಾವಿ ತೆಗೆಯಬೇಕಾ? ತೆಗೆದರೂ ನೀರು ಬರುತ್ತದಾ? ಎಂದು ಯೋಚನೆ ಮಾಡ್ತಾ ಇರುತ್ತಾರೆ. ಹೀಗೆ ಚಿಂತೆಯಲ್ಲಿ ಇರುವವರಿಗೆ ಇಲ್ಲಿದೆ ಒಂದು ಮಾಹಿತಿ.

ಬೋರ್ವೆಲ್ ಕೊರೆಯುವಾಗ ಸಾಮಾನ್ಯವಾಗಿ ಸಾವಿರ ಅಡಿ ದಾಟಿದ ನಂತರ ಇನ್ನೂ ನೀರು ಬಂದಿಲ್ಲ ಎಂದು ಚಿಂತೆ ಆಗುವುದು ಸಾಮಾನ್ಯ. ಎಷ್ಟೋ ಜನ ಬೋರ್ವೆಲ್ ತೋಡಿಸುವಾಗ ಅಮಾವಾಸ್ಯೆ, ರಾಹುಕಾಲ ವಾರ ಇವುಗಳನ್ನೆಲ್ಲ ನೋಡಿಕೊಂಡು ಈ ದಿನಗಳಲ್ಲಿ ಬೋರ್ವೆಲ್ ತೆಗಿಸಲ್ಲ. ಕೆಲವರಿಗೆ ಎಷ್ಟೇ ಆಳ ಬೋರ್ ತೆಗೆದರೂ ಸಹ ನೀರೆ ಬರಲ್ಲ ಆಗ ಎಲ್ಲರಿಗೂ ಕೂಡ ಗಾಬರಿ ಚಿಂತೆ ಆಗೋಕೆ ಶುರು ಆಗತ್ತೆ. ಆಳ ತೆಗೆದಷ್ಟು ಬರೀ ಧೂಳು ಸಿಗುತ್ತದೆಯೇ ಹೊರತು ನೀರು ಮಾತ್ರ ಬರಲ್ಲ. ಆದರೆ ನೀರು ಬಂದಿಲ್ಲ ಅಂದ ಮಾತ್ರಕ್ಕೆ ಬೋರ್ವೆಲ್ ಕೊರೆಯುವುದನ್ನ ನಿಲ್ಲಿಸಬಾರದು. ವಿಜ್ಞಾನಿಗಳು ಎಷ್ಟು ಆಳ ತೊಡಬೇಕು ಎಂದು ಸಲಹೆ ನೀಡಿರುತ್ತಾರೋ ಅಷ್ಟು ಆಳ ತೊಡಬೇಕು.

ಒಂದು ಸಾವಿರ ಫೀಟ್ ಕೋರೆದಾಗ ಅಲ್ಲಿ ಸ್ವಲ್ಪ ತೇವಾಂಶ ಬಂದರೆ ಆ ಜಾಗದಲ್ಲಿ ಒಂದು ಇಂಚು ನೀರು ಇದೆ ಎಂದು ಅರ್ಥ. ಆದರೆ ಒಂದು ಇಂಚು ನೀರು ಇದ್ದರೆ ನೀರು ಹೊರಗೆ ಬರಲ್ಲ ಹಾಗೂ ಯಾವುದೇ ಪ್ರಯೋಜನಕ್ಕೆ ಕೂಡ ಬರಲ್ಲ. ಹಾಗಾಗಿ ಒಂದು ಇಂಚಿಗೂ ಹೆಚ್ಚು ನೀರು ಇರಬೇಕು ಹಾಗಿದ್ದ ಮಾತ್ರ ಬೋರ್ವೆಲ್ ನಿಂದ ನೀರು ಹೊರಗೆ ಬರತ್ತೆ ಮತ್ತೆ ನಮಗೆ ಉಪಯೋಗಕ್ಕೆ ಕೂಡ ಬರತ್ತೆ. ಈಗ ಅತ್ಯಾಧುನಿಕ ತಂತ್ರಜ್ಞಾನದಿಂದ ಕೇವಲ ಐದು ನಿಮಷದೊಳಗೆ ಸಾಕಷ್ಟು ಆಳ ಕೊರೆಯುವುದರಿಂದ ನೀರು ಬರದೆಯು ಇರಬಹುದು. ಇದರಿಂದ ಹತಾಶರಾಗದೆ ಕಾಯಬೇಕು.

ಒಂದುವೇಳೆ ನೀರು ಬರದೆ ಇದ್ದರೆ ಅದನ್ನ ಮಣ್ಣು ಹಾಕಿ ಮುಚ್ಚಬಾರದು. ನೀರು ಬರಲಿ ಬಿಡಲಿ ಆದರೆ ಪೈಪ್ ಅನ್ನು ಮಾತ್ರ ತೆಗೆಯದೆ ಹಾಗೆಯೇ ಇಟ್ಟುಕೊಳ್ಳಬೇಕು. ಒಂದು ಅಥವಾ ಎರಡು ತಿಂಗಳುಗಳ ನಂತರ ಆ ಬೋರ್ವೆಲ್ ನಲ್ಲಿ ನೀರು ಬರುವ ಸಾಧ್ಯತೆ ಹೆಚ್ಚು ಇರತ್ತೆ ಹಾಗಾಗಿ ಹತಾಶರಾಗದೆ, ತೆಗೆದಂತಹ ಕೊಳವೆ ಬಾವಿಯನ್ನು ಮುಚ್ಚಬಾರದು. ಲಕ್ಷಾಂತರ ಹಣ ಕರ್ಚು ಮಾಡಿ ಅದನ್ನ ಮುಚ್ಚದೇ ಸ್ವಲ್ಪ ದಿನ ಹಾಗೆ ಬಿಟ್ಟು ಮರು ಪೂರ್ಣ ಮಾಡುವುದರಿಂದ ಕೊನೇ ಪಕ್ಷ ಎರಡು ಎಕರೆಗೆ ಆಗುವಷ್ಟು ಆದರೂ ನೀರು ಬಂದೆ ಬರುತ್ತದೆ. ನಂತರ ಅದಕ್ಕೆ ತಕ್ಕಂತೆ ಮೋಟಾರ್ ಕೂಡ ಸೆಟ್ ಮಾಡಿ ಹಾಕಬೇಕು.

By

Leave a Reply

Your email address will not be published. Required fields are marked *