ಆಚಾರ್ಯ ಚಾಣಕ್ಯರು ಮಹಾನ್ ಜ್ಞಾನಿ ಆಗಿದ್ದು ಒಳ್ಳೆಯ ನೀತಿಕಾರರು ಆಗಿದ್ದರು. ಇವರು ತಮ್ಮ ನೀತಿಗಳಲ್ಲಿ ಮನುಷ್ಯನ ಜೀವನವನ್ನು ಸುಖವಾಗಿ ಇರಿಸಲು ತುಂಬಾನೆ ಮಹತ್ವಪೂರ್ಣ ಆದ ಮಾತುಗಳನ್ನ ತಿಳಿಸಿದ್ದಾರೆ. ಈ ಲೇಖನದಲ್ಲಿ ನಾವು ನಿಮಗೆ ನಾಲ್ಕು ಸ್ಥಳಗಳ ಬಗ್ಗೆ ಹೇಳುತ್ತೇವೆ. ಈ ನಾಲ್ಕು ಸ್ಥಳಗಳಲ್ಲಿ ಇರುವವರಿಗೆ ಯಶಸ್ಸು ಸಿಗುವುದಿಲ್ಲವಂತೆ ಹಾಗಾದ್ರೆ ಆ ನಾಲ್ಕು ಸ್ಥಳಗಳ ಯಾವುದು ಅನ್ನೋದನ್ನ ತಿಳಿದುಕೊಳ್ಳೋಣ.

ಆಚಾರ್ಯ ಚಾಣಕ್ಯರು ತಮ್ಮ ಒಂದು ಗ್ರಂಥದಲ್ಲಿ ಹೇಳಿರುವುದು ಏನು ಅಂದರ್, “ಯಸ್ಮಿನ್ ದೇಶೇ ನ ಸಮ್ಮಾನ ನ ವೃತ್ತಿಹಿ ನ ಬಾಂಧವಾಹ. ನಾ ಚ ವಿಧ್ಯಾಗಮೊಪ್ಯಸ್ತಿ ವಾಸಸ್ತತ್ರ ನ ಕಾರಯೆತ್”. ಈ ಶ್ಲೋಕದಲ್ಲಿ ನಾಲ್ಕು ಸ್ಥಳಗಳ ಬಗ್ಗೆ ವರ್ಣಿಸಲಾಗಿದೆ. ಅವುಗಳೆಂದರೆ,

ಮೊದಲನೆಯದಾಗಿ ಪರಿಚಯ ಇಲ್ಲದ ಸ್ಥಳಗಳು. ಆಚಾರ್ಯ ಚಾಣಕ್ಯರು ಹೇಳುವಂತೆ, ಯಾವ ಸ್ಥಳದಲ್ಲಿ ನಮ್ಮವರು ಅಥವಾ ಪರಿಚಯ ಇಲ್ಲದವರು ಇರುತ್ತಾರೋ ಅಂತಹ ಸ್ಥಳವನ್ನು ಬಿಟ್ಟುಬಿಡುವುದು ಒಳ್ಳೆಯದು. ಯಾಕಂದ್ರೆ, ಯಾವಾಗ ಸಂಕಟ, ಕಷ್ಟ ಬರುತ್ತದೋ ಆಗ ತಮ್ಮವರು ನೆನಪಿಗೆ ಬರುತ್ತಾರೆ ಮತ್ತು ಆ ಸಮಯದಲ್ಲಿ ತನ್ನವರು ಎನಿಸಿಕೊಂಡವರು ಯಾರೂ ಸಹಾಯಕ್ಕೆ ಬರದೆ ಇದ್ದರೆ ಆ ವ್ಯಕ್ತಿ ಬಹಳ ಭಯ ಪಡುತ್ತಾನೆ ಇಂತಹ ಸಮಯದಲ್ಲಿ ತಪ್ಪು ಹೆಜ್ಜೆಗಳನ್ನು ಇಡಬಹುದು. ಹಾಗಾಗಿ ಪರಿಚಯ ಇರುವವರು ಇರುವ ಸ್ಥಳಗಳಲ್ಲಿ ಇರುವುದೇ ಒಳ್ಳೆಯದಾಗಿದೆ.

ಎರಡನೆಯದು ವಿದ್ಯಾಲಯ ಇಲ್ಲದ ಸ್ಥಳಗಳು. ಆಚಾರ್ಯರು ಹೇಳುವ ಪ್ರಕಾರ ಯಾವ ಊರಿನಲ್ಲಿ ವಿದ್ಯೆಯನ್ನು ಕಲಿಸುವ ವಿಧ್ಯಾಲಗಳು ಇರುವುದಿಲ್ಲವೋ ಅಂತಹ ಸ್ಥಳಗಳಲ್ಲಿ ವಿದ್ಯಾವಂತರು ಇರಲ್ಲ. ಇಂತಹ ಸ್ಥಳಗಳನ್ನ ಬಿಟ್ಟುಬಿಡುವುದು ಒಳ್ಳೆಯದು. ಯಾಕಂದರೆ ವಿಧ್ಯೆ ಇಲ್ಲದೇ ಮನುಷ್ಯನ ಜೀವನಕ್ಕೆ ಬೆಲೆ ಇರುವುದಿಲ್ಲ. ನಾವು ಜೀವನದಲ್ಲಿ ಮುಂದೆ ಸಾಗಲು ವಿದ್ಯೆಯೇ ಸಹಾಯ ಮಾಡುತ್ತದೆ. ವಿಧ್ಯೆ ಇಲ್ಲದವನ ಬಾಳು ಹದ್ದಿಗಿಂತಲು ಕೀಳು. ಒಂದು ಪ್ರಾಣಿಯ ಹಾಗೆ ಜೀವನ ನಡೆಸಬೇಕಾಗುತ್ತದೆ.

ಮೂರನೆಯದಾಗಿ ಉದ್ಯೋಗ ಇಲ್ಲದ ಸ್ಥಳ. ಆಚಾರ್ಯರು ಹೇಳುವ ಪ್ರಕಾರ, ಯಾವ ಸ್ಥಳದಲ್ಲಿ ಮನುಷ್ಯನ ಜೀವನ ಹಾಗೂ ಕುಟುಂಬ ನಿರ್ವಹಣೆ ಮಾಡಲು ಪಾಲನೆ ಮಾಡಲು ಬೇಕಾದ ಹಣ ಸಿಗುವುದಿಲ್ಲವೋ ಅಂತಹ ಸ್ಥಳದಲ್ಲಿ ಇರಬಾರದು. ಮನುಷ್ಯನ ಬಳಿ ಹಣ ಇಲ್ಲದೆ ಇದ್ದರೆ ಆತ ದುಃಖವನ್ನು ಅನುಭವಿಸುತ್ತಾನೆ. ಆತನ ಬಳಿ ಆಗ ಯಾರೂ ಕೂಡ ಹಣ ಇಲ್ಲ ಎಂದು ಹತ್ತಿರವೂ ಸುಳಿಯುವುದಿಲ್ಲ. ಇಂತಹ ಮನುಷ್ಯರು ಜೇವನದಲ್ಲಿ ಅನೇಕ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಉದ್ಯೋಗ ಇರುವ ಸ್ಥಳವನ್ನು ಹುಡುಕಿಕೊಂಡು ಅಲ್ಲಿ ಇರುವುದು ಒಳ್ಳೆಯದು

ಇನ್ನು ಆಚಾರ್ಯ ಚಾಣಕ್ಯರು ಹೇಳುವ ನಾಲ್ಕನೆಯ ಹಾಗೂ ಕೊನೆಯ ಸ್ಥಳ ಎಂದರೆ, ಯಾವ ಸ್ಥಳದಲ್ಲಿ ಬುದ್ಧಿವಂತರಿಗೆ ಗೌರವ ಹಾಗೂ ಸನ್ಮಾನ ಸಿಗುವುದಿಲ್ಲವೋ ಅಂತಹ ಸ್ಥಳವನ್ನು ಬಿಟ್ಟುಬಿಡಬೇಕು. ಯಾಕಂದರೆ ಅಂತಹ ಸ್ಥಳಗಳಲ್ಲಿ ಬರೀ ದುಷ್ಟರಿಗೆ ಮಾತ್ರ ಗೌರವ ನೀಡುತ್ತಾರೆ. ಹಾಗಾಗಿ ಇಂತಹ ಸ್ಥಳದಲ್ಲಿ ಇರುವುದು ಒಳ್ಳೆಯದು ಅಲ್ಲ. ಇದರಿಂದ ನಿಮ್ಮ ಆತ್ಮ ವಿಶ್ವಾಸವೂ ಕುಗ್ಗುತ್ತದೆ. ಇವಿಷ್ಟು ಆಚಾರ್ಯ ಚಾಣಕ್ಯ ಅವರು ಹೇಳಿದ ನಮ್ಮ ಏಳಿಗೆಗೆ ಹೇಳಿರುವ ಸೂತ್ರಗಳಲ್ಲಿ ಇದೂ ಕೂಡ ಒಂದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!