ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ಹೊರಗೆ ಆದಾಗ ಮನೆಯಲ್ಲಿನ ಯಾವ ವಸ್ತುಗಳನ್ನು ಸಹ ಮುಟ್ಟಲು ಬಿಡುತ್ತಿರಲಿಲ್ಲ. ಆ ಹೆಣ್ಣು ಮಗಳಿಗೆ ವಿಶ್ರಾಂತಿ ಸಿಗಲಿ ಎಂದು ಹೀಗೆ ಮಾಡುತ್ತಾ ಇದ್ದರು ನಮ್ಮ ಹಿರಿಯರು. ಆದರೆ ಕಾಲ ಕಳೆದಂತೆ ಸಣ್ಣ ಸಣ್ಣ ಕುಟುಂಬಗಳು ಆದಾಗ ವಿಶ್ರಾಂತಿ ಪಡೆಯಲು ಸಾಧ್ಯ ಆಗಲ್ಲ. ಮನೆಯಲ್ಲಿ ಹೆಂಗಸರು ಮುತ್ತಿನ ಸಮಯದಲ್ಲಿ ಮರೆತೂ ಕೂಡ ಇಂತಹ ಕೆಲಸಗಳನ್ನು ಮಾಡಬಾರದು. ಆರ್ಥಿಕ ಸಂಕಷ್ಟಗಳು ಹೆಚ್ಚು ಆಗುತ್ತವೆ. ಪ್ರತೀ ನಿತ್ಯ ನಾವು ಹಾಗೂ ನಮ್ಮ ಕುಟುಂಬ ಚೆನ್ನಾಗಿ ಇರಬೇಕು ಎಂದು ಭಾವಿಸಿ ಹೆಣ್ಣು ಮಕ್ಕಳು ಕಷ್ಟ ಪಡುತ್ತಾರೆ ಆದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಕೆಲವು ತಪ್ಪುಗಳನ್ನು ಮಾಡುವುದರಿಂದ ಹಲವಾರು ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಯಾವ ತಪ್ಪನ್ನು ಮಾಡಬಾರದು, ಹೆಣ್ಣು ಮಕ್ಕಳು ಹೊರಗೆ ಆದಂತಹ ಸಂದರ್ಭದಲ್ಲಿ ಯಾವ ನಿಯಮವನ್ನು ಪಾಲಿಸಿದರೆ ಕುಟುಂಬಕ್ಕೂ ಒಳ್ಳೆಯದು ಆಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ವಿವರವಾಗಿ ತಿಳಿಸಿಕೊಡುತ್ತಿವಿ.

ಅಪ್ಪಿ ತಪ್ಪಿಯೂ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಪೂಜಾ ವಸ್ತುಗಳನ್ನು ಮುಟ್ಟಬಾರದು. ನಿಮ್ಮ ಮನೆಯಲ್ಲಿ ಏನಾದರೂ ಪೂಜಾ ಸಾಮಗ್ರಿಗಳನ್ನು ಪೂಜಾ ಕೋಣೆಯಿಂದ ಹೊರಗೆ ಇಟ್ಟಿದ್ದರೆ, ಅಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಶ ಮಾಡಬಾರದು. ಆ ೫ ದಿನಗಳ ನಂತರ ಮನೆಯನ್ನ ಉಪ್ಪು ಕಲಸಿದ ನೀರು ಅಥವಾ ಗೋಮೂತ್ರದಿಂದ ಪೋಜಾ ಕೋಣೆಯನ್ನು ಹಾಗೂ ಮನೆಯನ್ನು ಸ್ವಚ್ಛಗೊಳಿಸಬೇಕು. ಮುಖ್ಯವಾಗಿ ಮನೆಯಲ್ಲಿ ಮನೆ ದೇವರ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಪ್ರತಿ ತಿಂಗಳು ಮುಟ್ಟು ಮುಗಿದ ನಂತರ ಮನೆಯನ್ನ ವಿಶೇಷವಾಗಿ ಸ್ವಚ ಮಾಡಿಕೊಳ್ಳಬೇಕು. ಮನೆ ಒರೆಸುವಾಗ ನೀರಿಗೆ ಸ್ವಲ್ಪ ಉಪ್ಪು ಹಾಗೂ ಅರಿಶಿನವನ್ನು ಹಾಕಿಕೊಂಡು ಮನೆಯನ್ನ ಒರೆಸಬೇಕು. ಗೋಮೂತ್ರ ಸಿಕ್ಕಿದ್ರೆ ಅಂತೂ ತುಂಬಾ ಒಳ್ಳೆಯದು. ಗೋಮೂತ್ರವನ್ನು ನೀರಿಗೆ ಹಾಕಿಕೊಂಡು ಸಹ ದೇವರ ಕೋಣೆ ಮತ್ತು ಮನೆಯನ್ನ ಸ್ವಚ್ಛ ಮಾಡಿಕೊಳ್ಳಬಹುದು.

ಮುಟ್ಟಾದಂತಃ ಸಮಯದಲ್ಲಿ ದುಡ್ಡು ಹಾಗೂ ಬಟ್ಟೆ ಇದುವಂತಹ ಜಾಗಗಳನ್ನು, ಬೀರು, ಪೆಟ್ಟಿಗೆ ಇವುಗಳನ್ನು ಮುಟ್ಟಬಾರದು. ನೀವು ಏನಾದರೂ ಆ ೫ ದಿನ ಬಟ್ಟೆ ಇರುವ ಬೀರು ಅಥವಾ ಪೆಟ್ಟಿಗೆಗಳನ್ನು ಮುಟ್ಟಿದರೆ ಅದೂ ಕೂಡ ಮೈಲಿಗೆ ಆಗತ್ತೆ. ಹಾಗಾಗಿ ಅಂತಹ ತಪ್ಪುಗಳನ್ನ ಮಾಡಬಾರದು ಹಾಗೂ ೫ ದಿನಗಳ ಕಾಲ ವಿಶೇಷವಾದ ಜಾಗ್ರತೆಯನ್ನ ವಹಿಸಬೇಕು. ಹಿಂದೆ ಹಿರಿಯರು ಈ ಒಂದು ಮಾತನ್ನ ಹೇಳುತ್ತಾ ಇದ್ದರು ಏನೂ ಅಂದರೆ, ಆ ೫ ದಿನಗಳ ಕಾಲ ಉಪ್ಪಿಕಾಯಿಯನ್ನು ಮುಟ್ಟಬಾರದು ಎಂದು. ಯಾಕಂದರೆ , ಆ ೫ ದಿನಗಳ ಕಾಲದ ಮುಟ್ಟಿನ ಸಮಯದಲ್ಲಿ ಉಪ್ಪಿಕಾಯಿಯನ್ನು ಮುಟ್ಟಿದರೆ ಉಪ್ಪಿನ ಕಾಯಿಗೂ ಸಹ ಹುಳ ಬೀಳುತ್ತದೆಯಂತೆ. ಆದರೆ ಈ ಮಾತನ್ನ ಎಷ್ಟೋ ಜನ ನಂಬಲ್ಲ ಕೆಲವು ಜನ ನಂಬುತ್ತಾರೆ ಆದರೆ ಇದಂತೂ ಸತ್ಯ.

ಮುಟ್ಟಿನ ಸಮಯದಲ್ಲಿ ಹೆಂಗಸರು ಇಂತಹ ಸಮಸ್ಯೆಗಳನ್ನ ಪಾಲಿಸಲೇಬೇಕು ಇಲವಾದರೆ ಮನೆಯಲ್ಲಿ ಏನಾದರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗಂಡ ಹೆಂಡತಿ ಮಕ್ಕಳು ಎಲ್ಲರೂ ಚೆನ್ನಾಗಿ ಇರಬೇಕು ಎಂದು ಎಷ್ಟೋ ಪ್ರಯತ್ನ ಮಾಡಿರುತ್ತೀರಾ ಆದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಕೆಲವು ತಪ್ಪುಗಳನ್ನು ಮಾಡುವುದರಿಂದ ಪೂಜೆ ಮಾಡುವಾಗ, ಹಬ್ಬ ಹರದಿನಗಳಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಾ ಇರುತ್ತೀರ. ಹಬ್ಬ ಹರದಿನಗಳಲ್ಲಿ, ಏಕಾದಶಿ, ದ್ವಾದಶಿ ಇಂತಹ ದಿನಗಳಲ್ಲಿ ಏನಾದರೂ ನೀವು ಮುಟ್ಟು ಆಗಿದ್ದರೆ ಆ ಸಮಯದಲ್ಲಿ ಮಾಡಿದ ಅಡುಗೆಯನ್ನು ದೇವರಿಗೆ ನೈವೇದ್ಯವಾಗಿ ಇಡಬಾರದು. ಮನೆಯಲ್ಲಿ ಬೇರೆ ಯಾರಾದ್ರೂ ಇದ್ದರೆ ಅವರ ಬಳಿ ಅಡುಗೆ ಮಾಡಿಸಿ ದೇವರಿಗೆ ನೈವೇದ್ಯ ಅರ್ಪಿಸಬಹುದು. ಆದರೆ, ಯಾವುದೇ ಕಾರಣಕ್ಕೂ ನೀವು ಮಾಡಿದ ಅಡುಗೆಯನ್ನು ಮಾತ್ರ ದೇವರಿಗೆ ಅರ್ಪಿಸಬಾರದು. ಇದರಿಂದ ದೋಷ ಉಂಟಾಗುತ್ತದೆ. ಇಂತಹ ತಪ್ಪುಗಳನ್ನ ಅಪ್ಪು ತಪ್ಪಿಯೂ ಮಾಡಬಾರದು. ಇಂತಹ ಆಚಾರ ವಿಚಾರಗಳನ್ನು ಹಿಂದಿನಿಂದಲೂ ನಮ್ಮ ಪೂರ್ವಿಕರು ಮಾಡಿಕೊಂಡು ಬಂದಿದ್ದಾರೆ. ಸಾಧ್ಯ ಆದಷ್ಟು ಆ ಸಮಯದಲ್ಲಿ ಯಾವುದೇ ಕೆಲಸ ಮಾಡದೆ ವಿಶ್ರಾಂತಿಯನ್ನು ತೆಗೆದು ಕೊಳ್ಳಬೇಕಾಗುತ್ತದೆ. ವಿಶ್ರಾಂತಿಯನ್ನು ತೆಗೆದುಕೊಳ್ಳುವ ಉದ್ದೇಶದಿಂದಲೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇಂತಹ ಆಚರಣೆಗಳು ಇವೆ. ಈಗ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಅದನ್ನ ತಿದ್ದಿಕೊಂಡು ವಿಶೇಷವಾದ ಆಚರಣೆಯನ್ನು ಅನುಸರಿಸುತ್ತಾ ಬನ್ನಿ.

Leave a Reply

Your email address will not be published. Required fields are marked *