ಎಲ್ಲಾ ರೀತಿಯ ಪೀರಿಯಡ್ಸ್ ಸಮಸ್ಯೆಗಳಿಗೆ ಇಲ್ಲಿದೆ ಮನೆ ಮದ್ದು. ಸರಿಯಾಗಿ ಪೀರಿಯಡ್ಸ್ ಆಗದೆ ಇರುವುದು, ತುಂಬಾ ಹೆಚ್ಚು ಹಾಗೂ ಕಡಿಮೆ ಬ್ಲೀಡಿಂಗ್ ಆಗ್ತಾ ಇದ್ದರೆ, ವೈಟ್ ಡಿಸ್ಚಾರ್ಜ್, ಹೊಟ್ಟೆ ನೀವು, ಕಾಲುನೋವು, PCOD ಈ ಎಲ್ಲದಕ್ಕೂ ಸುಲಭವಾದ ಮನೆಮದ್ದುಗಳು ಇವೆ. ಅವು ಏನೂ ಹೇಗೆ ಮಾಡೋದು ಅನ್ನೋದನ್ನ ನೋಡೋಣ.

ಮೊದಲಿಗೆ ಗೊಂಗುರ ಅಥವಾ ಪುಂಡಿ ಸೊಪ್ಪಿನ ಕಷಾಯ. ಈ ಸೊಪ್ಪು ಹೆಣ್ಣು ಮಕ್ಕಳಿಗೆ ತುಂಬಾ ಒಳ್ಳೆಯದು. ೪/೫ ಗೊಂಗೂರ ಸೊಪ್ಪನ್ನು ತಂದು ಕ್ಲೀನ್ ಮಾಡಿಕೊಂಡು, ಸ್ಟೋವ್ ಮೇಲೆ ೧೫೯ml ನೀರನ್ನ ಸ್ಟೀಲ್ ಅಥವಾ ಮಣ್ಣಿನ ಪಾತ್ರೆಯಲ್ಲಿ ಕುದಿಯೋಕೆ ಇಟ್ಟು ಸಣ್ಣ ಉರಿಯಲ್ಲಿ ನೀರನ್ನ ಕಾಯಿಸಿಕೊಂಡು ನೀರು ಕುದಿಯಲು ಬಂದಾಗ ಗೊಂಗುರಾ ಸೊಪ್ಪನ್ನು ಹಾಕಿ ಕುದಿಸಬೇಕು. ನಂತರ ಸ್ಟೋವ್ ಆಫ್ ಮಾಡಿ ಆ ಪಾತ್ರೆಗೆ ಮುಚ್ಚಳ ಮುಚ್ಚಿ 5 ನಿಮಿಷ ಹಾಗೆಯೇ ಬಿಡಬೇಕು. ನಂತರ ಅದನ್ನ ಸೋಸಿಕೊಂಡು ಉಗುರು ಬೆಚ್ಚಗೆ ಅಥವಾ ಪೂರ್ತಿ ತಣ್ಣಗಾದ ಮೇಲೆ ಕುಡಿಯಬಹುದು. ಆದರೆ ಬಿಸಿ ಇರೋವಾಗ ಮಾತ್ರ ಕುಡಿಯಬಾರದು. ಈ ಕಷಾಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ೪೫ ದಿನದಿಂದ ೬೦ ದಿನಗಳವರೆಗೂ ಕುಡಿಯಬೇಕು. ಇದರ ಜೊತೆಗೆ ಗೊಂಗೂರ ಅಥವಾ ಪುಂಡಿ ಸೊಪ್ಪಿನ ಚಟ್ನಿಯನ್ನು ಕೂಡಾ ತಿನ್ನಬೇಕು ಒಳ್ಳೆಯದು. ಹೀಗೆ ಮಾದುವುದರಿಂದ ಪೀರಿಯಡ್ಸ್ ಸಮಸ್ಯೆ ದೂರ ಆಗತ್ತೆ.

ಇದರ ಜೊತೆಗೆ ಇನ್ನೂ ಹಲವು ಕಷಾಯವನ್ನು ಕುಡಿಯಬೇಕು. ಗೊಂಗೂರ ಕಷಾಯವನ್ನು ಬೆಳಿಗ್ಗೆ ಕುಡಿಯಬೇಕು. ಹಾಗೇ ಸಂಜೆ ಖಾಲಿ ಹೊಟ್ಟೆಯಲ್ಲಿ ಈ ಕೆಲವು ಕಶಾಯಗಳನ್ನ ಒಂದೊಂದು ದಿನ ಒಂದೊಂದು ಮಾಡಿಕೊಂಡು ಕುಡಿಯಬೇಕು. ಒಂದು ದಿನ ಜೀರಿಗೆ ಕಷಾಯ, ಇನ್ನೊಂದು ದಿನ ಶುಂಠಿ ಕಷಾಯ, ದಾಲ್ಚಿನ್ನಿ ಚಕ್ಕೆ ಕಷಾಯ, ಕರಿಬೇವಿನ ಕಷಾಯ ಇದು ತುಂಬಾ ಒಳ್ಳೆಯದು. ರಕ್ತ ಶುದ್ಧಿ ಮಾಡತ್ತೆ ಹಾಗೂ ವೃದ್ಧಿ ನೂ ಮಾಡತ್ತೆ. ಕೊತ್ತಂಬರಿ ಸೊಪ್ಪಿನ ಕಷಾಯ ಹಾಗೂ ಪುದೀನಾ ಸೊಪ್ಪು ಕಷಾಯ. ಈ 6 ಕಷಾಯವನ್ನು ಪ್ರತೀ ದಿನ ಒಂದೊಂದು ರೀತಿ ಮಾಡಿಕೊಂಡು ಕುಡಿಯಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗೊಂಗೂರಾ ಸೊಪ್ಪಿನ ಕಷಾಯ ಕಡ್ಡಾಯವಾಗಿ ಹಾಗೂ ಸಂಜೆ ಈ 6 ಕಶಾಯಗಳಲ್ಲಿ ದಿನವೂ ಯಾವುದಾದರೂ ಒಂದನ್ನು ಮಾಡಿ ಕುಡಿಯೋದು. ಇದರ ಜೊತೆಗೆ ವಾರಕ್ಕೆ ಒಂದು ಬಾರಿ ಎಳ್ಳುಂಡೆ ಯನ್ನು ತಿನ್ನಬೇಕು.

ಇದರ ಜೊತೆಗೆ ಕೆಲವು ಆಹಾರ ಪದಾರ್ಥಗಳನ್ನು ಬದಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಜಂಕ್ ಫುಡ್ ಬೇಕರಿ ಐಟಂಸ್ ಕೇಕ್, ಚಾಕಲೇಟ್, ಮ್ಯಾಗಿ etc … ಇವೆಲ್ಲವನ್ನೂ ಬಿಡಬೇಕು. ಕಾಫಿ ಟೀ ಬಿಡಬೇಕು. ಸಮುದ್ರದ ಉಪ್ಪನ್ನು ಮಾತ್ರ ಬಳಸಬೇಕು. ಕಡಿಮೆ ಉಪ್ಪನ ತಿನ್ನಿ ಆದರೆ ಸರಿಯಾದ ಉಪ್ಪನ್ನು ಮಾತ್ರ ತಿನ್ನಿ. ಹಾಲು, ಮೈದಾ, ಸಕ್ಕರೆ, ಗೋಧಿ, ಮೊಟ್ಟೆ , ಅನ್ನ, ಸೋಯಾಬೀನ್, refind oils ಇವುಗಳನ್ನ ಬಳಸಲೇ ಬಾರದು. ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಲಿ ಅದರ ಬದಲು ಸ್ಟೀಲ್ ಹಾಗೂ ಗಾಜಿನ ಡಬ್ಬಿಗಳಲ್ಲಿ ಶೇಖರಿಸಿ ಇಡೀ. ಅಡುಗೆಗೆ ಕೂಡಾ ಅಲ್ಯುಮಿನಿಯಂ ಪಾತ್ರೆಗಳನ್ನು ಬಳಸಲೇ ಬಾರದು. ಅದರ ಬದಲು ಸ್ಟೀಲ್, ಮಣ್ಣಿನ ಪಾತ್ರೆಗಳು ಕಬ್ಬಿಣದ ಕಡಾಯಿಗಳನ್ನ ಬಳಸುವುದು ಉತ್ತಮ. ಪ್ಲಾಸ್ಟಿಕ್ ನೀರಿನ ಬಾಟಲಿಯ ಬದಲು ಸ್ಟೀಲ್ ಬಾಟಲಿ ಬಳಸಿ. ಸಿರಿ ಧಾನ್ಯಗಳ ಬಳಕೆ ಹೆಚ್ಚು ಮಾಡಿದರೆ ತುಂಬಾ ಒಳ್ಳೆಯದು.ಇದರ ಜೊತೆಗೆ ಮುಖ್ಯವಾಗಿ ಮಾಡಬೇಕಾದ ಒಂದು ಕೆಲಸ ಅಂದರೆ, ವಾಕಿಂಗ್ ಪ್ರತೀ ದಿನ ಒಂದು ಗಂಟೆ ಕಾಲ ವಾಕಿಂಗ್ಅ ದರ ಜೊತೆಗೆ ಯೋಗ ಅಥವಾ ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡಬಹುದು ಇದರಿಂದ ನಮ್ಮ ದೇಹದಲ್ಲಿ ಶೇಖರಣೆ ಆಗಿರುವ ಅಧಿಕ ಕೊಬ್ಬು ಅಥವಾ ಗ್ಲೂಕೋಸ್ ಅನ್ನು ಕಡಿಮೆ ಮಾಡಬೇಕು. ಈ ರೀತಿ ಮಾಡಿಕೊಂಡರೆ 3 ತಿಂಗಳಲ್ಲಿ ಪೀರಿಯಡ್ಸ್ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!