ಸುಟ್ಟಗಾಯಗಳಿಂದ ತಕ್ಷಣವೇ ರಿಲೀಫ್ ನೀಡುವ ಮನೆಮದ್ದು

0 31

ಸುಟ್ಟ ಗಾಯಗಳಿಗೆ ಸುಲಭವಾದ ಮನೆಮದ್ದು ಏನು ಅನ್ನೋದನ್ನ ನೋಡೋಣ. ಇನ್ನುಮೇಲೆ ಸುಟ್ಟ ಗಾಯಗಳಿಗೆ ಬರ್ನಾಲ್ ಅಥವಾ ಬೇರೆ ಯಾವುದೇ ಮುಲಾಮುಗಳನ್ನು ಹುಡುಕೋದು ಬೇಡ. ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿಕೊಂಡೇ ಸುಟ್ಟ ಗಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಅದರ ಜೊತೆಗೆ ಕಲೆಗಳೂ ಸಹ ಇಲ್ಲದಂತೆ ಮಾಡಿಕೊಳ್ಳಬಹುದು. ಎನ್ ಮಾಡಬೇಕು ಅಂದ್ರೆ.

ಮೊದಲನೇ ಮನೆ ಮದ್ದು ಮೆಂತೆ, ಮೆಂತೆ ಕಾಳನ್ನ ಸ್ವಲ್ಪ ಪುಡಿ ಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತರ ಮಾಡಿಕೊಂಡು ಮೆಂತೆ ಕಾಳಿನ ಈ ಪೇಸ್ಟ್ ಅನ್ನು ಸುಟ್ಟ ಗಾಯಗಳಿಗೆ ಹಚ್ಚಬೇಕು. ಹೀಗೆ ದಿನಕ್ಕೆ 3 / 4 ಸಲ ಮಾಡುದರೆ ಸುಟ್ಟ ಗಾಯ ಕಡೆ ಆಗತ್ತೆ ಹಾಗೂ ಕಲೆಯೂ ಆಗಲ್ಲ.

ಇನ್ನು ಮೆಂತೆಯನ್ನ ಕುಟ್ಟಿ ಪುಡಿ ಮಾಡಕೆ ಆಗಲ್ಲ ಅನ್ನುವವರು ಮನೆಯಲ್ಲಿ ಕೊಬ್ಬರಿ ಎಣ್ಣೆ ಅಂತೂ ಇದ್ದೇ ಇರತ್ತೆ ಈ ಕೊಬ್ಬರಿ ಎಣ್ಣೆಯ ಜೊತೆಗೆ ಎಳ್ಳೆಣ್ಣೆ ಕೂಡ ತೆಗೆದುಕೊಂಡು ಎರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡಿ ಸುಟ್ಟ ಗಾಯಕ್ಕೆ ಹಚ್ಚಬೇಕು. ಇದನ್ನೂ ಕೂಡ ದಿನಕ್ಕೆ ೫ / ೬ ಬಾರಿ ಹಚ್ಚಬೇಕು. ಇದರಿಂದ ಕೂಡ ಸುಟ್ಟ ಗಾಯ ಬೇಗ ಕಡಿಮೆ ಆಗತ್ತೆ ಹಾಗೆ ಕಲೇನು ಆಗಲ್ಲ. ನಂತರದ ಮನೆ ಮದ್ದು ಜೇನುತುಪ್ಪ. ಅದೂ ಕೂಡ ಶುದ್ಧವಾದ ಜೇನುತುಪ್ಪ ಮಾತ್ರ ಹಚ್ಚಬೇಕು. ಅಶುದ್ಧವಾದ ಜೇನುತುಪ್ಪ ಆದರೆ ಬೇಡ. ಇಂದು ಮಾರ್ಕೆಟ್ ನಲ್ಲಿ ಸುಮಾರು ೯೦% ಅಶುದ್ಧ ಜೇನುತುಪ್ಪವೇ ಸಿಗ್ತಾ ಇರೋದು ಹಾಗಾಗಿ ಶದ್ಧವಾದ ಜೇನುತುಪ್ಪ ಆಗಿದ್ರೆ ಮಾತ್ರ ಹಚ್ಚಿ. ಬೇಗ ಕೆಲಸ ಮಾಡತ್ತೆ.

ಇನ್ನು ನಮಗೆ ಜೇನು ತುಪ್ಪ ಸಿಗಲ್ಲ ಅನ್ನುವವರು ಅಲೋವೆರ ಬಳಸಿ. ಅಲೋವೆರ ನಮ್ಮ ಚರ್ಮಕ್ಕೆ, ಕೂದಲಿಗೂ ಸಹ ಒಳ್ಳೆಯದು. ಇದು ಸುಟ್ಟ ಗಾಯಕ್ಕೆ ಒಳ್ಳೆಯ ಮನೆ ಮದ್ದು. ಅಲೋವೆರ ರಸವನ್ನು ಸುಟ್ಟ ಗಾಯದ ಮೇಲೆ ಹಚ್ಚಬೇಕು ಇದರಿಂದ ಸುಟ್ಟ ಗಾಯ ಬೇಗ ಕಡಿಮೆ ಆಗತ್ತೆ ಹಾಗೆ ಇದು ತಂಪು ಕೂಡಾ ಆಗತ್ತೆ. ಹಾಗೆ ಆಲೂಗಡ್ಡೆ…. ಆಳುಗಡ್ಡೆಯನ್ನ ಸ್ಲೈಸ್ ಮಾಡಿಕೊಂಡು ನಿಧಾನವಾಗಿ ಸುಟ್ಟ ಗಾಯದ ಮೇಲೆ ಹಚ್ಚಬೇಕು. ಜೋರಾಗಿ ಹಚ್ಚಿದರೆ ಉರಿ ಆಗತ್ತೆ . ಸ್ಲೈಸ್ ಮಾಡಿಕೊಂಡು ಹಚ್ಚಿದ್ರೆ, ನೋವಾಗತ್ತೆ ಅನ್ನುವವರು ಆಲುಗಡ್ಡೆಯನ್ನ ಪೇಸ್ಟ್ .ಆಡಿಕೊಂಡು ಅದರ ರಸವನ್ನು ಹಚ್ಚಬಹುದು. ಇದನ್ನೂ ಕೂಡ ದಿನಕ್ಕೆ ೪ /೫ ಸಲ ಹಚ್ಚಬೇಕು. ಈರುಳ್ಳಿ ರಸವನ್ನು ಸಹ ಹಚ್ಚಬಹುದು. ಇರುಳ್ಳಿಯನ್ನ ತೆಗೆದುಕೊಂಡು ಪೆಸ್ಟ್ ಮಾಡಿಕೊಂಡು ಅದನ್ನ ಸುಟ್ಟ ಗಾಯದ ಮೇಲೆ ಹಚ್ಚಬೇಕು ಅಥವಾ ಸ್ಲೈಸ್ ಮಾಡಿಕೊಂಡು ಹಚ್ಚಿದ್ರೆ ಕೂಡ ನಡಿಯತ್ತೆ. ಕ್ಯಾರೆಟ್ ರಸ ಕೂಡ ಒಳ್ಳೆಯ ಔಷಧಿ ಅಂತ ಹೇಳಬಹುದು. 2 ಟೀ ಸ್ಪೂನ್ ಕ್ಯಾರೆಟ್ ರಸ ಹಾಗೂ ಅರ್ಧ ಭಾಗ ನಿಂಬೆ ರಸ ಎರಡನ್ನೂ ಮಿಕ್ಸ್ ಮಾಡಿಕೊಂಡು ಸುಟ್ಟ ಗಾಯದ ಮೇಲೆ ದಿನಕ್ಕೆ 4 /5 ಸಲ ಹಚ್ಚಬೇಕು. ಎಲ್ಕ ಮನೆ ಮದ್ದುಗಳನ್ನು ಸ್ವಲ್ಪ ಹೆಚ್ಚು ಮಾಡಿಟ್ಟುಕೊಳ್ಳಬೇಕು. ಏಕೆಂದರೆ ಪ್ರತೀ ದಿನ 4 /5 ಬಾರಿ ಹಚ್ಚಲೇಬೇಕಾಗತ್ತೇ. ಇದರಿಂದ ಮೂರು ಅಥವಾ ನಾಲ್ಕು ದಿನದಲ್ಲಿ ಸುಟ್ಟ ಗಾಯ ಕಡಿಮೆ ಆಗತ್ತೆ ಜೊತೆಗೆ ಕಲೆ ಕೂಡ ಆಗಲ್ಲ.

ಇದೇಕೆಲಕ್ಕಿಂತ ಬೇಗ ಕೆಲಸ ಮಾಡುವುದು ಅಂದರೆ ಅಡುಗೆಗೆ ಬಳಸುವ ಯಾವುದೇ ಎಣ್ಣೆ. ಎರಡರಿಂದ ಮೂರು ಸ್ಪೂನ್ ಎಣ್ಣೆಗೆ ಚಿಟಕಿ ಪುಡಿ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಸುಟ್ಟ ಗಾಯದ ಮೇಲೆ ಹಚ್ಚಬೇಕು. ಎಲ್ಲ ಮನೆ ಮದ್ದನ್ನು ಹೀಗೆ ಮಾಡಬೇಕು. ಮೊದಲು ಒಂದು ಸಲಾ ಹಚ್ಚಿ ನಂತರ ಅರ್ಧ ಗಂಟೆ ಒಣಗಲು ಬಿಟ್ಟು ಹತ್ತಿಯಿಂದ ನಿಧಾನವಾಗಿ ಒರೆಸಿಕೊಳ್ಳಬೇಕು. ನಂತರ ಎರಡು ಮೂರು ಗಂಟೆ ಬಿಟ್ಟು ಮತ್ತೆ ಹಚ್ಚಬೇಕು. ಇದೆ ತರ ದಿನಕ್ಕೆ ನಾಲ್ಕರಿಂದ ಐದು ಸಲ ಆದರೂ ಮಾಡಬೇಕು. ಹೀಗೆ ಮಾಡುವುದರಿಂದ ಸುಟ್ಟ ಗಾಯ ಬೇಗ ವಾಸಿ ಆಗಲ್ಲ ಹಾಗೇ ಕಲೆ ಕೂಡಾ ಆಗಲ್ಲ.

Leave A Reply

Your email address will not be published.