ಆಯಾಸ ಸುಸ್ತು ನಿವಾರಿಸುವ ಸುಲಭ ಮನೆಮದ್ದು ಒಮ್ಮೆ ಟ್ರೈ ಮಾಡಿ

0 47

ಈಗಿನ ಕಾಲದಲ್ಲಿ ಯಾರಿಗೆ ನೋಡಿದರು ಸ್ವಲ್ಪ ಕೆಲಸ ಮಾಡುವ ಹಾಗೆ ಇರಲ್ಲ ಆಯಾಸ ಆಗತ್ತೆ ಸುಸ್ತು ಆಗತ್ತೆ. ಹಿಂದಿನ ಕಾಲದವರ ಹಾಗೇ ಅವರು ಮಾಡಿದಷ್ಟು ಕೆಲಸವನ್ನು ನಮಗೆ ಮಾಡೋಕೆ ಆಗಲ್ಲ. ಬಹುಬೇಗ ದೇಹದಲ್ಲಿ ಇರುವ ಶಕ್ತಿ ಎಲ್ಲವನ್ನು ಕಳೆದುಕೊಂಡು ನಿತ್ರಾಣ ಆಗಿ ಬಿಡ್ತೀವಿ. ಅದಕ್ಕೆ ಆಯಾಸವನ್ನು ಕಳೆದುಕೊಂಡು ಹೊಸ ಚೈತನ್ಯ ತುಂಬಿಕೊಳ್ಳಲು ಇಲ್ಲಿದೆ ಸುಲಭವಾದ ಮನೆ ಮದ್ದುಗಳು.

ಕೆಲವರು ಇದ್ದಕ್ಕಿದ್ದ ಹಾಗೆ ನನಗೆ ನಿತ್ರಾಣ, ಆಯಾಸ, ಸುಸ್ತು ಎಂದೆಲ್ಲ ಹೇಳುತ್ತಾ ಇರುತ್ತಾರೆ. ಆಗ ಇಂದು ಲೋಟ ಹಾಲಿಗೆ ಒಂದು ಚಮಚ ಗ್ಲುಕೋಸ್ ಹಾಕಿ ಕೊಡಬೇಕು. ಗ್ಲುಕೋಸ್ ಇಲ್ಲದೆ ಇದ್ದರೆ, ಸಕ್ಕರೆ ಅಥವಾ ಬೆಲ್ಲ ಹಾಕಿ ಪಾನಕ ಮಾಡಿ ಕೊಡಬೇಕು. ಮಧುಮೇಹ ರೋಗಿಗಳಲ್ಲಿ ಈ ರೀತಿ ಆಯಾಸ ಆಗುವುದು ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಆಗುವುದು. ಇದನ್ನ ಮನೆಯಲ್ಲಿ ಇದ್ದವರು ಅರ್ಥ ಮಾಡಿಕೊಂಡು ಆಯಾಸ ಆಗುವವರಿಗೆ ಈ ಉಪಚಾರ ಮಾಡಿಕೊಡಬೇಕು. ಹೊಸದಾಗಿ ತಯಾರಿಸಿದ ಕಬ್ಬಿನ ಹಾಲನ್ನು ಒಂದು ಲೋಟ ಕುಡಿಯಲು ಕೊಡಬೇಕು. ಇದರಲ್ಲಿ ಆಮ್ಲಜನಕವನ್ನು ಹೀರುವ ಗುಣ ಇರುವುದರಿಂದ ಹೃದಯಾಘಾತದ ಸಮಯದಲ್ಲಿಯೂ ಹೆಚ್ಚು ಉಪಯೋಗ. ದಾರಿಯಲ್ಲಿ ಆಯಾಸ ಆದಂತೆ ಅನಿಸಿದರೆ ತಕ್ಷಣವೇ ಹಣ್ಣಿನ ಜ್ಯೂಸ್, ಕಬ್ಬಿನ ಹಾಲನ್ನು ಕುಡಿಸಬೇಕು ಹಾಗೂ ಅಲ್ಲೇ ರಸ್ತೆಯ ಬದಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಬೇಕು.

ಕಲ್ಲಂಗಡಿ ಹಣ್ಣಿನ ಜ್ಯೂಸ್ ತೆಗೆದುಕೊಳ್ಳುವುದರಿಂದ ಆಯಾಸ ಪರಿಹಾರ ಆಗತ್ತೆ. ಕರಬೂಜದ ಹಣ್ಣಿನ ರಸವನ್ನು ಸೇವಿಸುವುದರಿಂದ ರಾಸಾಯನಿಕ ವಸ್ತುಗಳು ತಕ್ಷಣಕ್ಕೆ ರಕ್ತಕ್ಕೆ ಸೇರಿ ಆಯಾಸವನ್ನು ಪರಿಹಾರ ಮಾಡುತ್ತದೆ. ಮಜ್ಜಿಗೆಗೆ ಉಪ್ಪು ಈರುಳ್ಳಿ ಸೇರಿಸಿ ಕುಡಿದರೆ ಮಾರ್ಗ ಆಯಾಸ ಕಡಿಮೆ ಆಗತ್ತೆ. ಗರಿಕೆ ಹುಲ್ಲಿನ ರಸ ಸೇವಿಸುತ್ತಿದ್ದರೆ ಆಯಾಸ, ದಣಿವು ಕಡಿಮೆ ಆಗುತ್ತದೆ. ಮಾವಿನ ಹಣ್ಣಿನ ರಸಕ್ಕೆ ಹಾಲು ಸಕ್ಕರೆ ಸೇರಿಸಿ ಕುಡಿದರೆ ದಣಿವು ಕಡಿಮೆ ಆಗುತ್ತದೆ. ಹಸಿಯಾದ ಅಲಸಂದೆ ಕಾಳನ್ನು ಬೆಲ್ಲದ ಜೊತೆ ಸೇವಿಸಿದರೆ ಆಯಾಸ ಪರಿಹಾರ ಆಗುತ್ತದೆ. ಯಾರೇ ಆದರೂ ಸಹ ಮನೆಯಲ್ಲಿ ಜೇನು ತುಪ್ಪವನ್ನು ಶೇಖರಿಸಿ ಇಟ್ಟುಕೊಂಡು ಇರುತ್ತಾರೆ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಕುಡಿದರೆ, ದಣಿವು ಬಳಲಿಕೆ ನಿವಾರಣೆ ಆಗುತ್ತದೆ.

Leave A Reply

Your email address will not be published.