ಹುಳುಕು ಹಲ್ಲು ನೋವಿಗೆ ತಕ್ಷಣ ಪರಿಹಾರ ನೀಡುವ ಮನೆಮದ್ದು

0 203

ಹುಳುಕು ಹಲ್ಲಿಗೆ ಯಾವ ರೀತಿ ಮನೆಯಲ್ಲಿ ಸುಲಭವಾಗಿ ಔಷಧ ಮಾಡಿಕೊಳ್ಳಬಹುದು ಹಾಗೂ ಇದರಿಂದ ಆದಷ್ಟು ವೇಗ ನೋವನ್ನು ಕೂಡ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನೋದನ್ನ ನೋಡೋಣ.

ನಾವು ಸ್ವಲ್ಪ ಪೋಷಣೆ ಮಾಡುವುದು ಹೆಚ್ಚು ಕಡಿಮೆ ಆದರೂ ಸಹ ಹಲ್ಲನ್ನು ಕಳೆದುಕೊಳ್ಳಬೇಕಾಗತ್ತೇ. ಹಲ್ಲು ನೋವು ಬಂದರೆ ತಡೆದುಕೊಳ್ಳಲು ಆಗದಷ್ಟು ಬಾಧೆ ಅನುಭವಿಸಲೇ ಬೇಕು. ದೊಡ್ಡವರಿಗೆ ಆದರೆ ಹೇಗೋ ತಡೆದುಕೊಳ್ಳಬಹುದು ಆದರೆ ಚಿಕ್ಕ ಮಕ್ಕಳಿಗೇ ಏನಾದ್ರು ಹಲ್ಲು ನೋವು ಬಂದರೆ ಹಲ್ಲು ಪೂರ್ತಿ ಹಾಳಾಗಿ ಹೋಗತ್ತೆ ಹಾಗೇ ನೋವು ಕೂಡ ತಡಿಯೋಕೆ ಆಗಲ್ಲ. ಹಾಗಾಗಿ ಹಲ್ಲಿನ ವಿಷಯಗಳಲ್ಲಿ ಸ್ವಲ್ಪ ಹೆಚ್ಚು ಕ್ಲೀನ್ ಆಗಿ ಇರಬೇಕು. ಸಿಕ್ಕ ಸಿಕ್ಕ ತಿಂಡಿಗಳನ್ನ ತಿನ್ನೋದು ಕುಡಿಯೋದು ಮಾಡಬಾರದು. ಕ್ಲೀನ್ ಇಲ್ಲದೇ ಹೋದರೆ ಹಲ್ಲು ಬೇಗ ಹಾಳಾಗತ್ತೆ ಹಾಗಾಗಿ ದೊಡ್ಡವರು ಇರಬಹುದು ಅಥವಾ ಚಿಕ್ಕವರು ಎಲ್ಲರೂ ಪ್ರತೀ ದಿನ ಎರಡು ಬಾರಿ ಹಲ್ಲುಜ್ಜಲೇ ಬೇಕು. ಹಾಗಾದ್ರೆ ಹಲ್ಲು ನೋವಿಗೆ ಮನೆ ಮದ್ದು ನೋಡೋಣ.

ಲವಂಗ. ಲವಂಗ ನಮ್ಮ ಹಲ್ಲಿಗೆ ತುಂಬಾ ಒಳ್ಳೆಯದು. ಇದು ಹಲ್ಲಿನಲ್ಲಿರುವ ಬ್ಯಾಕ್ಟೀರಿಯ ಗಳನ್ನು ನಾಶ ಮಾಡತ್ತೆ. 3 ಲವಂಗವನ್ನು ಕುಟ್ಟಿ ಪುರಿ ಮಾಡಿಕೊಂಡು ಅದಕ್ಕೆ ಕಾಲು ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿಕೊಂಡು ಹತ್ತಿಯಲ್ಲಿ ಅಡ್ಡಿಕೊಂಡು ಹುಳುಕು ಆದ ಹಲ್ಲಿನ ಮೇಲೆ ಇದನ್ನು ಇಡಬಹುದು ಅಥವಾ ಹಾಗೆ ಕೈಯ್ಯಲ್ಲಿ ತೆಗೆದುಕೊಂಡು ಹಲ್ಲು ಹುಳುಕು ಆದ ಜಾಗದಲ್ಲಿ ತುಂಬಬೇಕು. ನಂತರ ಅದರ ಮೇಲೆ ಹತ್ತಿ ಇಟ್ಟುಕೊಂಡು ಬರುತ್ತಿರುವ ಎಂಜಲನ್ನು ಉಗಿಯಬೇಕು. ಇದರಿಂದ ಬೇಗ ಹಲ್ಲು ನೋವು ಕಡಿಮೆ ಆಗತ್ತೆ.

ಇನ್ನೊಂದು ಮನೆ ಮದ್ಫು ಏನು ಅಂದರೆ , ಚಿಟಕಿ ಉಪ್ಪು ಮತ್ತು ಚಿಟಕಿ ಅರಿಶಿನ. ನಿಮಗೆ ಬೇಕಾದಷ್ಟು ಒರಮನದಲ್ಲಿ ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ನಂತರ ಅದನ್ನ ಒಸಡಿನ ಸುತ್ತಲೂ ಹಚ್ಚಿ ತಿಕ್ಕುವುದರಿಂದ ಒಸಡಿನ ಸುತ್ತ ಇರುವ ಹೊಲಸು ಗಲೀಜು, ಕೀವು ಏನೇ ಇದ್ದರೂ ಸಹ ಹೊರಗೆ ಬರತ್ತೆ ಒಸಡು ಕ್ಲೀನ್ ಆಗಿರತ್ತೆ. ಮೂರನೇ ಮನೆ ಮದ್ದು ಏನೆಂದರೆ, ಬೆಳ್ಳುಳ್ಳಿ. ಬೆಳ್ಳುಳ್ಳಿಯನ್ನ ಕೈಯಲ್ಲಿಯೇ ಚಿವುಟಿ ಚಿಕ್ಕ ಚಿಕ್ಕ ಪೀಸ್ ಮಾಡಿಕೊಂಡು ಹುಳುಕು ಆಗಿರುವ ಹಳ್ಳಿನಲ್ಲಿ ರಾತ್ರಿ ಮಲಗುವಾಗ ತುಂಬಿ ಇಡಬೇಕು. ಬೆಳೀಘೇ ಎದ್ದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ಉಪ್ಪು ಬೆರೆಸಿದ ನೀರಿನಲ್ಲಿ ಬಾಯಿ ಮುಕ್ಕಳಿಸಿದ ಇವೆಲ್ಲ ಹೊರಗೆ ಬರತ್ತೇ. ಈ ಮೂರು ಮನೆ ಮದ್ದನ್ನು ಸತತವಾಗಿ ಒಂದು ವಾರ ಮಾಡುವುದರಿಂದ ಹಲ್ಲು ನೋವು ಹಾಗೂ ಹುಳುಕು ಹಲ್ಲು ಕೂಡಾ ಇರಲ್ಲ. ನಂತರ ಇನ್ನೊಂದು ಮನೆ ಮದ್ದು ಏನು ಅಂದರೆ, ದಿನಕ್ಕೆ ಒಂದು 8 ರಿಂದ 10 ಕಹಿಬೇವಿನ ಎಲೆಗಳನ್ನು ತಂದು ಸ್ವಚ್ಛಗೊಳಿಸಿಕೊಂಡು ಅದನ್ನ ನೀರಿಗೆ ಹಾಕಿ ಕೂದಿಸಿಕೊಂಡು ಬಾಯಿ ಮುಕ್ಕಳಿಸುವುದರಿಂದ ಹಾಗೂ ಸ್ವಲ್ಪ ಎಲೆಗಳನ್ನು ಪೇಸ್ಟ್ ಮಾಡಿಕೊಂಡು ಹುಳುಕು ಆದ ಹಳ್ಳಿನಲ್ಲಿ ಇಡುವುದರಿಂದ ನಂತರ ಬಾಯಿ ಮುಕ್ಕಳಿಸುವುದರಿಂದ ಹುಳುಕು ಹಲ್ಲು ಕಡಿಮೆ ಆಗತ್ತೆ.

Leave A Reply

Your email address will not be published.