ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ

0 46

ನಾವಿಂದು ರೈತರಿಗೆ ತಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳಲ್ಲಿ ಒಂದಾದ ಪಹಣಿಯಲ್ಲಿ ಯಾವ ರೀತಿಯಲ್ಲಿ ಸರ್ವೇ ನಂಬರ್ ಅನ್ನು ಮತ್ತು ಹಿಸ್ಸಾ ನಂಬರನ್ನು ಬದಲಾಯಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಕರ್ನಾಟಕ ರಾಜ್ಯದ ರೈತರು ಗಮನಿಸಬೇಕಾದ ಮುಖ್ಯ ಅಂಶ ಏನು ಎಂದರೆ ಜಮೀನು ನಮ್ಮದು ಎನ್ನುವುದಕ್ಕೆ ಒಂದು ಪುರಾವೆ ಇರಬೇಕು ಅದುವೇ ಫಾರ್ಮ್ ಹದಿನಾರು ಅಂದರೆ ಪಹಣಿ ಎಂದು ಕರೆಯುತ್ತೇವೆ. ಪಹಣಿಯಲ್ಲಿ ಹದಿನಾರು ಕಾಲಂಗಳು ಇರುತ್ತವೆ ಪ್ರತಿಯೊಂದು ಕಾಲಂನಲ್ಲಿ ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿ ಇರುತ್ತದೆ.

ಹಿಂದಿನ ಕಾಲದಲ್ಲಿ ಎಲ್ಲವೂ ಕೈಬರಹದಿಂದ ಆಗುವುದಕ್ಕಾಗಿ ಕೆಲವೊಂದು ತಪ್ಪುಗಳಾಗುತ್ತಿದ್ದವು ಅದು ಸಹಜ. ಜಮೀನು ನಮ್ಮದು ಎಂಬ ಮುಖ್ಯ ಗುರುತಿಗೆ ದಾಖಲಾಗಿರುವ ಪಹಣಿ ಯಲ್ಲಿರುವ ವಿಷಯಕ್ಕೂ ಸರ್ವೆ ದಾಖಲೆಗಳಲ್ಲಿರುವ ವಿಷಯಕ್ಕೂ ಒಂದಕ್ಕೊಂದು ತಾಳೆ ಆಗದಿದ್ದಾಗ ರೈತರಿಗೆ ಸಂಕಷ್ಟ ವಾಗುತ್ತದೆ. ಆಕಾರಬಂದಿ ನಲ್ಲಿ ಇರುವಂತೆ ಪಹಣಿಯನ್ನು ತಿದ್ದುಪಡಿ ಮಾಡಿಕೊಳ್ಳುವುದು ಸೂಕ್ತ.

ನಾವಿಂದು ನಿಮಗೆ ಸರ್ವೆ ದಾಖಲೆಗಳ ಪ್ರಕಾರ ಪಹಣಿಯಲ್ಲಿ ತಿದ್ದುಪಡಿಯನ್ನು ಮಾಡಿಕೊಳ್ಳುವುದು ಹೇಗೆ ಮತ್ತು ಅದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲಿಗೆ ಪಹಣಿಯಲ್ಲಿ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್ ಬದಲಾವಣೆ ಮಾಡುವುದಕ್ಕೆ ಕೆಲವು ದಾಖಲೆಗಳು ಮುಖ್ಯವಾಗಿ ಬೇಕು. ಮೊದಲನೆಯದಾಗಿ ಚಾಲ್ತಿ ವರ್ಷದ ಪಹಣಿ ಬೇಕಾಗುತ್ತದೆ ನಂತರ ಹಳೆ ಕಾಲದ ಕೈಬರಹದ ಪಹಣಿಗಳು ಮುಖ್ಯವಾಗಿ ಬೇಕಾಗುತ್ತದೆ ಇದನ್ನು ನೀವು ನಿಮ್ಮ ತಹಶೀಲ್ದಾರ್ ಕಚೇರಿಯ ಪಹಣಿ ಕೇಂದ್ರದ ಮೂಲಕ ಪಡೆದುಕೊಳ್ಳಬಹುದು.

ಮೂರನೆಯದಾಗಿ ಆಧಾರ್ ಕಾರ್ಡ್ ಬೇಕಾಗುತ್ತದೆ ನಂತರ ಆಕಾರ್ ಬಂದ್ ಐದನೆಯದಾಗಿ ಲಭ್ಯವಿದ್ದಲ್ಲಿ ನಿಮ್ಮ ಜಮೀನಿನ ನಕ್ಷೆ ಬೇಕಾಗುತ್ತದೆ ಆಕಾರ್ ಬಂದ್ ಮತ್ತು ಜಮೀನಿನ ನಕ್ಷೆ ತಹಶೀಲ್ದಾರ್ ಕಚೇರಿಯಿಂದ ಪಡೆದುಕೊಳ್ಳಬಹುದು. ಜೊತೆಗೆ ಜಮೀನಿಗೆ ಸಂಬಂಧಿಸಿದ ಎಲ್ಲಾ ಮುಟೇಶನ್ ಪ್ರತಿಗಳು ಬೇಕಾಗುತ್ತದೆ. ಹಾಗಾದರೆ ಪಹಣಿಯಲ್ಲಿ ತಿದ್ದುಪಡಿಯನ್ನು ಮಾಡುವುದಕ್ಕೆ ಈ ದಾಖಲೆಗಳನ್ನು ಮತ್ತು ಅರ್ಜಿಯನ್ನು ಎಲ್ಲಿ ಮತ್ತೆ ಯಾರಿಗೆ ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಈ ಮೇಲೆ ತಿಳಿಸಿರುವ ಎಲ್ಲ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಂಡು ತಿದ್ದುಪಡಿಗಾಗಿ ಒಂದು ಸರಳವಾದ ಅರ್ಜಿಯನ್ನು ಬರೆಯಬೇಕು. ನಂತರ ಅರ್ಜಿಯ ಜೊತೆಗೆ ಎಲ್ಲಾ ದಾಖಲೆಗಳನ್ನು ಲಗತ್ತಿಸಬೇಕು ನಂತರ ಅದನ್ನು ತಶಿಲ್ದಾರ್ ಕಚೇರಿಯಲ್ಲಿರುವ ಅವಕ ಶಾಖೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಿದ ನಂತರ ಕಡ್ಡಾಯವಾಗಿ ರಶೀದಿಯನ್ನು ಪಡೆದುಕೊಳ್ಳಬೇಕು. ಈಗ ಪಹಣಿ ಯಾವ ರೀತಿಯಾಗಿ ತಿದ್ದುಪಡಿ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನೀವು ಸಲ್ಲಿಸಿರುವ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲನೆಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಅವಕ ಶಾಖೆಯವರು ಸರ್ವೆ ಕಚೇರಿಗೆ ಅದನ್ನ ಕಳಿಸುತ್ತಾರೆ. ಸರ್ವೇ ಅಧಿಕಾರಿಯು ಕಡತಗಳನ್ನು ಸ್ವೀಕರಿಸಿ ಅದನ್ನು ಪರಿಶೀಲಿಸಿ ಸದರಿ ಕಡತಗಳನ್ನು ನಿರ್ವಹಿಸಲು ಒಬ್ಬ ಕೆಳಗಿನ ಹಂತದ ಅಧಿಕಾರಿಗಳಿಗೆ ನಿರ್ದೇಶಿಸುತ್ತಾರೆ. ಆ ಅಧಿಕಾರಿಯು ಕಡತಗಳಿಗೆ ಸಂಬಂಧಪಟ್ಟ ತಮ್ಮ ಕಚೇರಿಯಲ್ಲಿರುವ ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ಕಾಲಕಾಲಕ್ಕೆ ಆದ ಮುಟೇಶನ್ ಪ್ರತಿಗಳು ಮತ್ತು ಕೈಬರಹದ ದಾಖಲೆಗಳನ್ನು ತುಲನೆಮಾಡಿ ಪರೀಕ್ಷಿಸುತ್ತಾರೆ.

ಕೆಲಸಮಯದ ನಂತರ ಅಧಿಕಾರಿಗಳು ಭೂಮಾಲಿಕರ ಜೊತೆಗೆ ಸ್ಥಳ ಪರಿಶೀಲನೆಗೆ ಬರುತ್ತಾರೆ ಅಥವಾ ಕಂದಾಯ ನಿರೀಕ್ಷಕರು ಗ್ರಾಮ ಲೇಖಪಾಲಕರು ವರದಿಯನ್ನು ಕೇಳಬಹುದು. ಹೀಗೆ ಎಲ್ಲವನ್ನೂ ಪರೀಕ್ಷಿಸಿ ವಾಸ್ತವಿಕ ಮತ್ತು ಹಳೆಯ ದಾಖಲೆಗಳ ಮೇಲೆ ನ್ಯಾಯಬದ್ಧ ವರದಿಯನ್ನು ಬರೆದು ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡುತ್ತಾರೆ. ಹೀಗೆ ತಿದ್ದುಪಡಿ ಆದೇಶದೊಂದಿಗೆ ಕಡತವು ನೇರವಾಗಿ ಭೂಮಿ ಕೇಂದ್ರಕ್ಕೆ ತಲುಪಿ ಅದು ಕಾರ್ಯಗತವಾಗುತ್ತದೆ. ಅಲ್ಲಿಗೆ ಪಹಣಿಯಲ್ಲಿ ಸರ್ವೇ ನಂಬರ್ ಮತ್ತು ಹಿಸ್ಸಾ ನಂಬರ್ ಬದಲಾವಣೆ ಕಾರ್ಯ ಮುಗಿಯುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅಧಿಕಾರಿಗಳು ಒಂದು ವೇಳೆ ಅರ್ಜಿಯನ್ನು ತಿರಸ್ಕರಿಸಿದರೆ ಸೂಕ್ತ ಕಾರಣಗಳೊಂದಿಗೆ ಸಂಬಂಧಪಟ್ಟ ರೈತರಿಗೆ ಹಿಂಬರಹ ಕೊಡಲಾಗುತ್ತದೆ. ಈ ರೀತಿಯಾಗಿ ಪಹಣಿಯಲ್ಲಿ ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರನ್ನು ಬದಲಾಯಿಸಿಕೊಳ್ಳಬಹುದು. ನೀವು ಕೂಡ ಪಹಣಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದರೆ ಈ ಮೇಲಿನ ಕ್ರಮಗಳನ್ನು ಅನುಸರಿಸಬಹುದು ಅಥವಾ ನಿಮ್ಮ ಪರಿಚಿತರಿಗೆ ಯಾರಿಗಾದರೂ ಪಹಣಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.