ಮಹಿಳೆಯರು ಅಡುಗೆ ಮಾಡುವಾಗ ಕೆಲವು ಕೆಲಸಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಜಾಬ್ ಮಾಡುವ ಮಹಿಳೆಯರಿಗೆ ಅಡುಗೆ ಮಾಡುವುದು ಸ್ವಲ್ಪ ಕಷ್ಟ ಆಗುತ್ತದೆ ಆದರೆ ಅಡುಗೆಮನೆಯಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳಲ್ಲಿ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಬೇಕಾದಷ್ಟು ಸಮಯವನ್ನು ಉಳಿಸಬಹುದು. ಹಾಗಾದರೆ ಅಡುಗೆ ಮನೆಯಲ್ಲಿ ಬಳಸುವ ಟಿಪ್ಸ್ ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪುದೀನಾ ಸೊಪ್ಪು ಅಥವಾ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಕ್ಲೀನ್ ಮಾಡಿ ವಾಷ್ ಮಾಡಿ ನೀರು ಹೋದ ನಂತರ ಟಿಶ್ಯೂ ಪೇಪರ್ ನಲ್ಲಿ ಸೊಪ್ಪನ್ನು ಹಾಕಿ ಒಂದು ಪೋಲ್ಡ್ ಮಾಡಿ ಮತ್ತೆ ಸೊಪ್ಪನ್ನು ಹಾಕಿ ಇನ್ನೊಂದು ಪೋಲ್ಡ್ ಮಾಡಿ ಒಂದು ಡಬ್ಬದಲ್ಲಿ ಇಟ್ಟು ಫ್ರಿಜ್ ನಲ್ಲಿ ಇಡಬೇಕು. ಬೇಕಾದಾಗ ಒಂದು ಟಿಶ್ಯೂ ಪೇಪರ್ ಅನ್ನು ತೆಗೆದು ಸೊಪ್ಪನ್ನು ಬಳಸಬಹುದು ಇದರಿಂದ ಸೊಪ್ಪು ಬೇಗ ಹಾಳಾಗುವುದಿಲ್ಲ. ಕೆಲವು ಸಲ ಊದಬತ್ತಿ ಅರ್ಧ ಮಾತ್ರ ಉರಿಯುತ್ತದೆ. ಊದಬತ್ತಿ ಪೂರ್ತಿ ಉರಿಯಲು ಮತ್ತು ಪರಿಮಳ ಬರಲು ಸ್ವಲ್ಪ ನೀರಿನಿಂದ ಊದಿನ ಕಡ್ಡಿಗೆ ಸವರಬೇಕು. ಅಕ್ಕಿ ಹಿಟ್ಟು ಮತ್ತು ಕಡ್ಲೆ ಹಿಟ್ಟು ಹೆಚ್ಚು ದಿನ ಸ್ಟೋರ್ ಮಾಡಿಟ್ಟಾಗ ಹಾಳಾಗುತ್ತದೆ ಇಲ್ಲವೇ ಹುಳ ಆಗುತ್ತದೆ. ಅಕ್ಕಿ ಹಿಟ್ಟು ಮತ್ತು ಕಡ್ಲೆ ಹಿಟ್ಟಿನಲ್ಲಿ ಎರಡು ಪಲಾವ್ ಎಲೆಯನ್ನು ಹಾಕಿ ಇಡುವುದರಿಂದ ಹುಳ ಆಗುವುದಿಲ್ಲ. ಕಡ್ಲೆ ಬೇಳೆಯನ್ನು ಎರಡು ದಿನ ಬಿಸಿಲಿನಲ್ಲಿ ಒಣಗಿಸಿ ಮಷೀನ್ ನಲ್ಲಿ ಹಿಟ್ಟು ಮಾಡಿದರೆ ಒಳ್ಳೆಯ ಕಡ್ಲೆ ಹಿಟ್ಟು ಸಿಗುತ್ತದೆ ಹೀಗೆ ಮನೆಯಲ್ಲೇ ಮಾಡಿಕೊಳ್ಳಬಹುದು.

ಸಾಂಬಾರ್ ಅಥವಾ ಯಾವುದೇ ಅಡುಗೆಗೆ ಹುಳಿಯನ್ನು ಜಾಸ್ತಿ ಹಾಕಿದರೆ ಬೆಲ್ಲವನ್ನು ಸಾಂಬಾರಗೆ ಹಾಕಿದರೆ ಬ್ಯಾಲೆನ್ಸ್ ಆಗುತ್ತದೆ. ಅಕ್ಕಿಯನ್ನು ಬಹಳ ದಿನಗಳವರೆಗೆ ಹುಳ ಆಗದಂತೆ ಇಡಲು ಅಕ್ಕಿಯಲ್ಲಿ ಒಂದು ಬೆಳ್ಳುಳ್ಳಿ ಗಡ್ಡೆಯನ್ನು ಹಾಕಿ ಇಡಬೇಕು ಇದರಿಂದ ಅಕ್ಕಿಯಲ್ಲಿ ಹುಳ ಆಗುವುದಿಲ್ಲ. ಅಡುಗೆ ಮಾಡುವಾಗ ಪಾತ್ರೆಗಳನ್ನು ಅವಾಗವಾಗ ತೊಳೆಯುತ್ತಿದ್ದರೆ ಸಿಂಕ್ ತುಂಬ ಪಾತ್ರೆ ಆಗುವುದಿಲ್ಲ ಮತ್ತು ಅಡುಗೆ ಮಾಡಲು ಸುಲಭವಾಗುತ್ತದೆ. ಗೋಡೆಯ ಮೇಲೆ ಮತ್ತು ಕೈಯ ಮೇಲೆ ಸಾಮಾನ್ಯವಾಗಿ ಮಕ್ಕಳು ಬರೆಯುತ್ತಾರೆ ಅದನ್ನು ಎಷ್ಟು ಉಜ್ಜಿದರೂ ಹೋಗುವುದಿಲ್ಲ. ನಾವು ಬಳಸುವ ಸ್ಯಾನಿಟೈಸರ್ ಅನ್ನು ಸ್ವಲ್ಪ ಕಾಟನ್ ಬಟ್ಟೆ ಅಥವಾ ಹತ್ತಿಯ ಮೇಲೆ ಹಾಕಿ ಬರೆದ ಜಾಗಕ್ಕೆ ಉಜ್ಜಬೇಕು ಆಗ ಸುಲಭವಾಗಿ ಹೋಗುತ್ತದೆ.

ಚಿಕ್ಕ ಮಕ್ಕಳು ದೊಡ್ಡವರು ಬಳಸುವ ಜರ್ಕಿನ್ ಜಿಪ್ಪನ್ನು ಹಾಕಿ ತೆಗೆದು ಮಾಡುವುದರಿಂದ ಲಾಸ್ಟ್ ಹಾಕುವ ಪೊಯಿಂಟ್ ಹೋದರೆ ಮತ್ತೆ ಬಳಸಲು ಬರುವುದಿಲ್ಲ ಹಾಗಾಗದಂತೆ ಮಾಡಲು ಜಿಪ್ ಹಾಕಿ ಕೆಳಗಡೆ ಒಂದು ಪಿನ್ನನ್ನು ಅದರ ಹಿಂದೆ ಹಾಕಬೇಕು ಇದರಿಂದ ಬೇಗ ಹಾಳಾಗುವುದಿಲ್ಲ. ಮಕ್ಕಳ ಜರ್ಕಿನ್ ಆಗಿದ್ದರೆ ಪಿನ್ನು ಚುಚ್ಚುವುದು ಎಂಬ ಭಯವಿದ್ದರೆ ಪಿನ್ನು ಹಾಕುವ ಜಾಗದಲ್ಲಿ ಸೂಜಿ ದಾರದಿಂದ ನೀಟಾಗಿ ಹೊಲಿಯಬೇಕು. ಪ್ರತಿದಿನ ಮಲಗುವಾಗ ಅಡುಗೆ ಕೆಲಸ ಆದ ನಂತರ ಸಿಂಕ್ ಅನ್ನು ಅಡುಗೆ ಸೋಡಾ, ಡಿಟರ್ಜಂಟ್ ಪೌಡರ್ ಮತ್ತು ಸೋಪಿನ ಪೌಡರ್ ಅನ್ನು ಉದುರಿಸಿ ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಬೇಕು ಇದರಿಂದ ಸಿಂಕ್ ಸ್ವಚ್ಛವಾಗುತ್ತದೆ, ಪಾಚಿ ಕಟ್ಟಿಕೊಳ್ಳುವುದಿಲ್ಲ ಮತ್ತು ಜಿರಳೆಗಳು ಬರುವುದಿಲ್ಲ. ಅಡುಗೆ ಸೋಡಾ ಬಳಸುವುದರಿಂದ ಬೇಗ ಕೊಳೆ ಬಿಡುತ್ತದೆ ಮತ್ತು ಹೆಚ್ಚು ಶ್ರಮ ಹಾಕುವುದು ಬೇಡ. ಚಳಿಗಾಲ ಮತ್ತು ಮಳೆಗಾಲದಲ್ಲಿ ಉಪ್ಪಿನಲ್ಲಿ ನೀರಿನಂಶ ಬರುತ್ತದೆ. ಒಂದು ಸಣ್ಣ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ ಗಂಟು ಕಟ್ಟಿ ಉಪ್ಪಿನ ಡಬ್ಬದಲ್ಲಿ ಇಡಬೇಕು ಇದರಿಂದ ಉಪ್ಪು ಬಿಟ್ಟಂತಹ ನೀರನ್ನು ಅಕ್ಕಿ ಹೀರಿಕೊಳ್ಳುತ್ತದೆ ಮತ್ತು ನೀರು ಬರುವುದು ಕಡಿಮೆಯಾಗುತ್ತದೆ.

ಬೇಸಿಗೆ ಕಾಲದಲ್ಲಿ ಬೆಳಗ್ಗೆ ಮೊಸರಿಗೆ ಹಾಲು ಹೆಪ್ಪು ಹಾಕಿದರೆ ಮಧ್ಯಾಹ್ನ ಮೊಸರಾಗುತ್ತದೆ. ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಬೆಳಗ್ಗೆ ಹಾಲು ಹೆಪ್ಪು ಹಾಕಿದರೆ ಮಧ್ಯಾಹ್ನ ಮೊಸರು ಆಗುವುದಿಲ್ಲ ಆದ್ದರಿಂದ ಚಳಿಗಾಲ ಮತ್ತು ಮಳೆಗಾಲದಲ್ಲಿ ರಾತ್ರಿ ಹಾಲನ್ನು ಹೆಪ್ಪು ಹಾಕಿದರೆ ಬೆಳಗ್ಗೆ ಮೊಸರಾಗುತ್ತದೆ. ಹೆಪ್ಪು ಹಾಕುವಾಗ ಹಾಲು ಗಟ್ಟಿಯಾಗಿರಬೇಕು ಜಾಸ್ತಿ ನೀರು ಹಾಕಬಾರದು, ಬಿಸಿ ಹಾಲನ್ನು ಮೊಸರು ಮಾಡುವ ಪಾತ್ರೆಗೆ ಹಾಕಿ ಉಗುರು ಬೆಚ್ಚಗೆ ಆದ ನಂತರ ಸ್ವಲ್ಪ ಮೊಸರನ್ನು ಹಾಕಿ ಕೈಯಾಡಿಸಿ ಇಡಬೇಕು ಆಗ ಬೆಳಗ್ಗೆ ಗಟ್ಟಿ ಮೊಸರು ಆಗುತ್ತದೆ. ಈ ಎಲ್ಲಾ ಟಿಪ್ಸ್ ಗಳು ಸುಲಭವಾಗಿ ಮಾಡಬಹುದು ಇದಕ್ಕೆ ಯಾವುದೇ ಹಣದ ಅವಶ್ಯಕತೆ ಇರುವುದಿಲ್ಲ. ಟಿಪ್ಸ್ ಗಳನ್ನು ಮಹಿಳೆಯರಿಗೆ ತಿಳಿಸಿ, ಈ ಟಿಪ್ಸ್ ಗಳಿಂದ ಸಮಯ ಉಳಿಯುತ್ತದೆ.

Leave a Reply

Your email address will not be published. Required fields are marked *